3 ದಿನ ಆರ್‌ವಿ ರಸ್ತೆ, ಯಲಚೇನಹಳ್ಳಿ ನಡುವೆ ನಮ್ಮ ಮೆಟ್ರೋ ಸಂಚಾರ ಸ್ಥಗಿತ

ಬೆಂಗಳೂರು, ನವೆಂಬರ್ 14:ಯಲಚೇನಹಳ್ಳಿ-ಅಂಜನಾಪುರದ ವರೆಗಿನ ನಮ್ಮ ಮೆಟ್ರೋ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆ ಶೀಘ್ರ ಆರಂಭವಾಗಲಿದೆ.

ಹೀಗಾಗಿ ಕಾರ್ಯಾಚರಣೆ ಪೂರ್ವ ಸಿದ್ಧತೆಯ ಕಾಮಗಾರಿಗಳಿಗಾಗಿ ಹಸಿರು ಮಾರ್ಗದ ಆರ್‌ವಿ ರಸ್ತೆಯಿಂದ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ನವೆಂಬರ್ 17-19ರವರೆಗೆ ವಾಣಿಜ್ಯ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

ಇದರ ಪರಿಣಾಮವಾಗಿ ರೈಲುಗಳ ಸೇವೆಯ ನವೆಂಬರ್ 17 ರ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಾಗಸಂದ್ರ ನಿಲ್ದಾಣದಿಂದ ಆರ್‌ವಿ ರಸ್ತೆ ನಿಲ್ದಾಣದವರೆಗೆ ಮಾತ್ರ ಲಭ್ಯವಿರುತ್ತದೆ.

Namma metro

ನವೆಂಬರ್ 20 ರಂದು ಹಸಿರು ಮಾರ್ಗದಲ್ಲಿ ಬೆಳಗ್ಗೆ 7 ರಿಂದ ನಾಗಸಂದ್ರ ನಿಲ್ದಾಣದಿಂದ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ಸೇವೆ ಪ್ರಾರಂಭವಾಗಲಿದೆ.

ಹಾಗೆಯೇ ನೇರಳೆ ಮಾರ್ಗದ ಬೈಯಪ್ಪನಹಳ್ಳಿ ಮತ್ತು ಮೈಸೂರು ರಸ್ತೆ ನಿಲ್ದಾಣಗಳ ನಡುವೆ ಮೆಟ್ರೋ ಸೇವೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಆಯುಕ್ತರ ಪರಿಶೀಲನೆ ವೇಳೆ ಯಾವುದೇ ಲೋಪಗಳಿಲ್ಲದಿದ್ದರೆ ಶೀಘ್ರ ಪ್ರಮಾಣಪತ್ರ ದೊರೆಯಲಿದೆ. ಈ ತಿಂಗಳಾಂತ್ಯಕ್ಕೆ ಚಾಲನೆ ಕೂಡ ದೊರೆಯಲಿದೆ.
ಈ ಮಾರ್ಗದ ನಿಲ್ದಾಣದಲ್ಲಿನ ಮೂಲಸೌಕರ್ಯ ಸಿವಿಲ್ ಕಾಮಗಾರಿ, ಸಿಗ್ನಲಿಂಗ್, ದೂರಸಂವಹನ ಸಂಪರ್ಕ ವ್ಯವಸ್ಥೆ ಮತ್ತು ಇನ್ನಿತರೆ ವ್ಯವಸ್ಥೆಯ ಬಗ್ಗೆ ಆಯುಕ್ತರ ನೇತೃತ್ವದ ತಂಡ ಪರಿಶೀಲನೆ ನಡೆಸಲಿದೆ.

ಈ ತಿಂಗಳ ಮೊದಲ ವಾರದಲ್ಲಿ ಸಿಎಂಆರ್‌ಎಸ್ ತಂಡ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಭೇಟಿ ನೀಡಿತ್ತು. 6.29ಕಿ.ಮೀ ಉದ್ದದ ಈ ಮಾರ್ಗಕ್ಕೆ ಸಂಬಂಧಿಸಿದ ಅಂದಾಜು 300 ಪುಟಗಳುಳ್ಳ ಸುದೀರ್ಘ ಮಾಹಿತಿಯನ್ನು ನಿಗಮದ ಎಂಜಿನಿಯರ್‌ಗಳು ನೀಡಿದ್ದರು.

Recommended Video

      ಲಸಿಕೆಯಿಂದ ತೊಂದ್ರೆ ಆಗತ್ತಾ! | Oneindia Kannada

      ಅಂಜನಾಪುರ ರೋಡ್ ಕ್ರಾಸ್, ಕೃಷ್ಣಲೀಲಾ ಪಾರ್ಕ್, ವಜ್ರಹಳ್ಳಿ, ತಲಘಟ್ಟಪುರ, ಅಂಜನಾಪುರ ಟೌನ್ ಶಿಪ್ ಇದು ರೀಚ್ ಬಿಯಲ್ಲಿ ಬರುವ ನಿಲ್ದಾಣಗಳಾಗಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+