Namma Metro: ಮಾರ್ಚ್‌ 23ಕ್ಕೆ ಮೆಟ್ರೋ ಸೇವೆ ಬೇಗ ಪ್ರಾರಂಭ!

Namma Metro: ಬೆಂಗಳೂರು ನಮ್ಮ ಮೆಟ್ರೋ ಸೇವೆಯು ಈ ಭಾನುವಾರ ಅಂದರೆ ಮಾರ್ಚ್‌ 23ಕ್ಕೆ ಅವಧಿಗಿಂತಲೂ ಮುಂಚೆಯೇ ಪ್ರಾರಂಭವಾಗಲಿದೆ. ಮಾರ್ಚ್‌ 22ಕ್ಕೆ ಬಂದ್‌ ಇರುವ ಹಿನ್ನೆಲೆಯಲ್ಲಿ ಮೆಟ್ರೋ ಸೇವೆ ಇರಲಿದೆಯೇ ಇಲ್ಲವೇ ಎನ್ನುವ ಗೊಂದಲದ ನಡುವೆಯೇ ಭಾನುವಾರದ ಅಪ್ಡೇಟ್‌ ಅನ್ನು ಬಿಎಂಆರ್‌ಸಿಎಲ್‌ ನೀಡಿದೆ. ಮಾರ್ಚ್‌ 23ರಂದು ಮೆಟ್ರೋ ಸೇವೆ ಬೇಗ ಪ್ರಾರಂಭವಾಗಲಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.

ಮಾರ್ಚ್ 23 (ಭಾನುವಾರ)ದಂದು ನಡೆಯಲಿರುವ ಬಿಡದಿ ಹಾಫ್ ಮ್ಯಾರಥಾನ್‌ ಪ್ರಯುಕ್ತ ಎಲ್ಲಾ ನಾಲ್ಕು ಟರ್ಮಿನಲ್‌ಗಳಿಂದ 7 ಗಂಟೆಗೆ ಬದಲಾಗಿ ಮುಂಜಾನೆ 5.00 ಗಂಟೆಗೆ ಮೆಟ್ರೋ ರೈಲು ಸೇವೆ ಪ್ರಾರಂಭವಾಗಲಿವೆ.ಆದಾಗ್ಯೂ, ಸಾರ್ವಜನಿಕರು ಮ್ಯಾರಥಾನ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅನುಕೂಲವಾಗುವಂತೆ, ಮೆಟ್ರೋ ರೈಲು ಸೇವೆ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಿಂದ ಚಲ್ಲಘಟ್ಟ ಮೆಟ್ರೋ ನಿಲ್ದಾಣದ ಕಡೆಗೆ ಮುಂಜಾನೆ 4 ಗಂಟೆಯಿಂದ ಲಭ್ಯವಿರಲಿದೆ ಎಂದು ಬಿಎಂಆರ್‌ಸಿಎಲ್‌ ಹೇಳಿದೆ.

Namma Metro Service to Start Early on March 23rd

ಮೆಟ್ರೋಗೆ ಆದಾಯ ಕೊರತೆಯ ಸಂಕಷ್ಟ: ಇನ್ನು ಬೆಂಗಳೂರಿನ ನಮ್ಮ ಮೆಟ್ರೋಗೆ ಆದಾಯ ಸಂಕಷ್ಟ ಎದುರಾಗಿದೆ. ಮೆಟ್ರೋ ಬೆಲೆ ಏರಿಕೆ ಮಾಡಿದ ಮೇಲೆ ಪ್ರತಿ ದಿನವೂ ಮೆಟ್ರೋಗೆ ಬರುತ್ತಿದ್ದ 1ರಿಂದ 2 ಲಕ್ಷ ಜನ ಸಂಖ್ಯೆಯು ಮೆಟ್ರೋ ಸೇವೆ ಬಳಸುವುದನ್ನು ಬಿಟ್ಟಿದ್ದಾರೆ. ಬಿಎಂಆರ್‌ಸಿಎಲ್‌ ಅನಿವಾರ್ಯವಾಗಿ ಮೆಟ್ರೋದಲ್ಲಿ ಸರಕು ಸಾಗಣೆಯಂತಹ ವಿಧಾನಗಳನ್ನು ಅನುಸರಿಸುವುದಕ್ಕೆ ಮುಂದಾಗಿದೆ. ಇದರಿಂದ ಮತ್ತೆ ಮೆಟ್ರೋದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಕಷ್ಟವಾಗಲಿದೆ ಎಂದೇ ಹೇಳಲಾಗುತ್ತಿದೆ.

ಸರಕು ಸಾಗಾಣೆಯನ್ನು ನಾನ್‌ಪೀಕ್‌ ಅವರನಲ್ಲಿ ಮಾಡುವುದಾಗಿ ಬಿಎಂಆರ್‌ಸಿಎಲ್ ಹೇಳಿದೆಯಾದರೂ. ಇದರಿಂದ ಜನರ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ. ಜನರ ಪ್ರಯಾಣ ಹಾಗೂ ಸರಕು ಸಾಗಣೆಯನ್ನು ಬಿಎಂಆರ್‌ಸಿಎಲ್‌ ಏಕಕಾಲಕ್ಕೆ ಯಾವ ರೀತಿ ನಿಭಾಯಿಸಲಿದೆ ಎನ್ನುವ ಬಗ್ಗೆ ಇದೀಗ ವ್ಯಾಪಕವಾಗಿ ಚರ್ಚೆ ನಡೆಯುತ್ತಿದೆ.

ಮೆಟ್ರೋ ಟ್ರೋಲ್‌ ಮಾಡಿದ ಜನ: ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣ ದರ ಹೆಚ್ಚಳವಾದಾಗಿನಿಂದಲೂ ಜನ ಬಿಎಂಆರ್‌ಸಿಎಲ್‌ ಅನ್ನು ಟೀಕೆ ಮಾಡುವುದು ಮುಂದುವರಿದಿದೆ. #BMRCL ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಭೂಮಿಗೆ ಮರಳಿ ಸ್ವಾಗತಿಸುತ್ತದೆ! ನಿಮ್ಮ ಸಾಧನೆಗಳು ನಮಗೆ ಹೆಮ್ಮೆ ತರುತ್ತಿವೆ ಎನ್ನುವ ಪೋಸ್ಟ್‌ ಸಹ ಭಾರೀ ಚರ್ಚೆ ಹಾಗೂ ಟ್ರೋಲ್‌ಗೆ ಕಾರಣವಾಗಿದೆ.

ಬಿಎಂಆರ್‌ಸಿಎಲ್‌ನ ಈ ಪೋಸ್ಟ್‌ಗೆ ಜನ ಟ್ರೋಲ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಭೂಮಿಗೆ ಮರಳಿದ್ದಾರೆ ಇನ್ನಾದರೂ, ನೀವು ಪ್ರಯಾಣ ದರವನ್ನು ಇಳಿಕೆ ಮಾಡಿ ಅಂತ ಮೆಟ್ರೋ ಪ್ರಯಾಣಿಕರು ಕಮೆಂಟ್‌ ಮಾಡುವ ಮೂಲಕ ಬಿಎಂಆರ್‌ಸಿಎಲ್‌ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೆಟ್ರೋ ಪ್ರಯಾಣ ದರವನ್ನು ಹೆಚ್ಚಳ ಮಾಡಿ ಒಂದು ತಿಂಗಳಿಗಿಂತ ಹೆಚ್ಚಾದರೂ ಪರಿಷ್ಕರಣೆಯನ್ನು ಸರಿಯಾಗಿ ಮಾಡಿಲ್ಲ ಎನ್ನುವ ಆರೋಪ ಇದೆ.

ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಬಿಎಂಆರ್‌ಸಿಎಲ್‌ ಮೆಟ್ರೊ ಪ್ರಯಾಣ ದರವನ್ನು ಕಡಿಮೆ ಮಾಡುವ ಬದಲು ಸರಕು ಸಾಗಣೆ ಸೇವೆಗೆ ಮುಂದಾಗಿರುವುದು ಸರಿಯಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+