ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೆ.1ರಿಂದ ನಮ್ಮ ಮೆಟ್ರೋ ಸಂಚಾರ; ಪ್ರಯಾಣಿಕರಿಗೆ ಸೂಚನೆ

|
Google Oneindia Kannada News

ಬೆಂಗಳೂರು, ಆಗಸ್ಟ್ 26 : ಕೋವಿಡ್ ಭೀತಿಯ ನಡುವೆಯೇ ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಸಂಚಾರ ಆರಂಭಕ್ಕೆ ಸಿದ್ಧತೆಗಳು ನಡೆದಿವೆ. ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದರೆ ರೈಲು ಸೇವೆ ಆರಂಭ ಮಾಡಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.

Recommended Video

ಕೊನೆಗೂ Africa , Polioದಿಂದ ಮುಕ್ತ | Oneindia Kannada

ಮಾರ್ಚ್ 25ರಂದು ಕೋವಿಡ್ ಹರಡುವಿಕೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದಾಗ ನಮ್ಮ ಮೆಟ್ರೋ ರೈಲು ಸೇವೆ ಸ್ಥಗಿತಗೊಳಿಸಲಾಗಿದೆ. ಈಗ ಅನ್ ಲಾಕ್ 4.0 ಮಾರ್ಗಸೂಚಿನಲ್ಲಿ ರೈಲು ಸೇವೆ ಆರಂಭಕ್ಕೆ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ.

ಆ.27ರಿಂದ ಬೆಂಗಳೂರಲ್ಲಿ ಮೆಟ್ರೋ ಪ್ರಾಯೋಗಿಕ ಸಂಚಾರ ಆ.27ರಿಂದ ಬೆಂಗಳೂರಲ್ಲಿ ಮೆಟ್ರೋ ಪ್ರಾಯೋಗಿಕ ಸಂಚಾರ

ಬೆಂಗಳೂರು ನಗರದಲ್ಲಿ ಒಟ್ಟು 2 ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ. 42.3 ಕಿ. ಮೀ. ಮಾರ್ಗದಲ್ಲಿ ಪ್ರತಿದಿನ 4 ಲಕ್ಷಕ್ಕೂ ಅಧಿಕ ಜನರು ಸಂಚಾರ ನಡೆಸುತ್ತಾರೆ. ಬಿಎಂಟಿಸಿ ಬಸ್ ಹೊರತುಪಡಿಸಿದರೆ ಅತಿ ಹೆಚ್ಚು ಜನರು ಬಳಸುವ ಸಾರಿಗೆ ವ್ಯವಸ್ಥೆ ನಮ್ಮ ಮೆಟ್ರೋ.

ಸೆಪ್ಟೆಂಬರ್ 1ರಿಂದ ಮೆಟ್ರೋ ರೈಲು ಸಂಚಾರಕ್ಕೆ ಅವಕಾಶ? ಸೆಪ್ಟೆಂಬರ್ 1ರಿಂದ ಮೆಟ್ರೋ ರೈಲು ಸಂಚಾರಕ್ಕೆ ಅವಕಾಶ?

ಕೋವಿಡ್ ಭೀತಿಯ ನಡುವೆಯೇ ನಮ್ಮ ಮೆಟ್ರೋ ಸಂಚಾರವನ್ನು ಆರಂಭಿಸಬೇಕಿದೆ. ಬಿಎಂಆರ್‌ಸಿಎಲ್ ಇದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಸಿಬ್ಬಂದಿಗೆ ಸಹ ಅಗತ್ಯವಾದ ತರಬೇತಿಯನ್ನು ನೀಡಿದೆ.

ದೆಹಲಿಯಲ್ಲಿ ಮೆಟ್ರೋ ಸೇವೆ ಪುನಾರಾರಂಭಕ್ಕೆ ಅನುಮತಿ ಕೊಡಿ: ಸಿಎಂ ಅರವಿಂದ್ ಕೇಜ್ರಿವಾಲ್ದೆಹಲಿಯಲ್ಲಿ ಮೆಟ್ರೋ ಸೇವೆ ಪುನಾರಾರಂಭಕ್ಕೆ ಅನುಮತಿ ಕೊಡಿ: ಸಿಎಂ ಅರವಿಂದ್ ಕೇಜ್ರಿವಾಲ್

ಸಾಮಾಜಿಕ ಅಂತರ ಹೇಗೆ?

ಸಾಮಾಜಿಕ ಅಂತರ ಹೇಗೆ?

ನಮ್ಮ ಮೆಟ್ರೋ ರೈಲುಗಳ ಸಂಚಾರ ಆರಂಭವಾದರೂ ಸಾಮಾಜಿಕ ಅಂತರ ಕಾಪಾಡಬೇಕಾಗುತ್ತದೆ. ಆದ್ದರಿಂದ, ರೈಲುಗಳಲ್ಲಿ ಹೆಚ್ಚು ಜನರು ಪ್ರಯಾಣ ಮಾಡುವುದಕ್ಕೆ ತಡೆ ಹಾಕಲಾಗುತ್ತದೆ. ಸಾಮಾನ್ಯ ದಿನದಲ್ಲಿ ಪ್ರತಿ ಟ್ರಿಪ್‌ಗೆ 1 ಸಾವಿರ ಜನರು ರೈಲಿನಲ್ಲಿ ಸಂಚಾರ ನಡೆಸುತ್ತಿದ್ದರು.

ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ

ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ

ಎಲ್ಲಾ ಮೆಟ್ರೋ ರೈಲು ನಿಲ್ದಾಣಗಳ ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿದೆ. ಪ್ರಯಾಣಿಕರು ರೈಲಿನಲ್ಲಿ ಸಂಚಾರ ನಡೆಸಬೇಕಾದರೆ ಮಾಸ್ಕ್ ಧರಿಸಿರಬೇಕು. ಸಾಮಾಜಿಕ ಅಂತರ ಕಾಪಾಡಲು ನೀಡುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಆರೋಗ್ಯ ಸೇತು ಕಡ್ಡಾಯ

ಆರೋಗ್ಯ ಸೇತು ಕಡ್ಡಾಯ

ಮೆಟ್ರೋದಲ್ಲಿ ಸಂಚಾರ ನಡೆಸುವ ಜನರು ಸಾಮಾನ್ಯವಾಗಿ ಸ್ಮಾರ್ಟ್‌ ಫೋನ್ ಹೊಂದಿರುತ್ತಾರೆ. ಆದ್ದರಿಂದ, ಎಲ್ಲಾ ಪ್ರಯಾಣಿಕರಿಗೆ ಆರೋಗ್ಯ ಸೇತು ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳುವುದು ಕಡ್ಡಾಯ ಮಾಡಲಾಗಿದೆ.

ಟೋಕನ್ ಪಡೆಯುವುದು ಕಡಿಮೆ ಮಾಡಿ

ಟೋಕನ್ ಪಡೆಯುವುದು ಕಡಿಮೆ ಮಾಡಿ

ನಮ್ಮ ಮೆಟ್ರೋ ಪ್ರಯಾಣಿಕರು ಟೋಕನ್ ಪಡೆಯಲು ಕ್ಯೂ ನಿಲ್ಲುವುದು, ಟೋಕನ್ ಪಡೆಯುವುದನ್ನು ಕಡಿಮೆ ಮಾಡಿ ಎಂದು ಸಲಹೆ ನೀಡಲಾಗಿದೆ. ಕಾರ್ಡ್‌ ಬಳಕೆ ಮಾಡಿಕೊಂಡು ದರವನ್ನು ಪಾವತಿ ಮಾಡಿ ಎಂದು ಸಲಹೆ ನೀಡಲಾಗಿದೆ.

English summary
Bangalore Metro Rail Corporation Limited (BMRCL) waiting for union government approval to start Namma Metro service from September 1. Here are the directions for passengers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X