Namma Metro: ನೇರಳೆ ಮಾರ್ಗ ಓಪನ್‌ಗೂ ಮೊದಲೇ ಹೆಚ್ಚಾಯ್ತು ಪ್ರಯಾಣಿಕರ ದಟ್ಟಣೆ

ಬೆಂಗಳೂರು, ಸೆಪ್ಟಂಬರ್ 17: ಬೆಂಗಳೂರು ನಮ್ಮ ಮೆಟ್ರೋ ಪರ್ಪಲ್ ಲೈನ್ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾಗುವ ಮೊದಲೇ ಈ ಮಾರ್ಗದಲ್ಲಿ ವಿಪರೀತ ಜನದಟ್ಟಣೆ ಉಂಟಾಗುತ್ತಿದೆ. ಮೆಜೆಸ್ಟಿಕ್, ಬೈಯಪ್ಪನಹಳ್ಳಿ ನಿಲ್ದಾಣಗಳಲ್ಲಿ ಜನರು ನೂಕುನುಗ್ಗಲಲ್ಲಿ ರೈಲು ಏರುತ್ತಿದ್ದಾರೆ.

ಶನಿವಾರ ಬೈಯಪ್ಪನಹಳ್ಳಿ ಮತ್ತು ಮೆಜೆಸ್ಟಿಕ್ ನಿಲ್ದಾಣಗಳಲ್ಲಿ ಪ್ರಯಾಣಿಕರು ಮೆಟ್ಟಿಲು ಮತ್ತು ಎಸ್ಕಲೇಟರ್ ತಳ್ಳಾಡುವ ದೃಶ್ಯ ಸಾಮಾನ್ಯವಾಗಿತ್ತು. ಪ್ರಯಾಣಿಕರು ರೈಲು ಹತ್ತಲು ಮಾರ್ಗಗಳನ್ನು ಇರುವ ಸರತಿ ಸಾಲಿನ ನಿಯಮ ಉಲ್ಲಂಘಿಸಿದ್ದು ಕಂಡು ಬಂತು. ನಾಮುಂದು ತಾಮುಂದೆ ಎಂದು ರೈಲು ಏರಿದರು. ರೈಲು ಹತ್ತಲು ನಿಲ್ದಾಣದಲ್ಲಿ ಜನಸಾಗರವೇ ಕಂಡು ಬಂತು. ಹೀಗಾಗಿ ಜನಸಂದಣಿ ಕಂಡು ಬಂತು.

Namma Metro:Ridership Has Increased Even Before Purple Line Was Fully Operational

ಬೆಂಗಳೂರು ಮೆಟ್ರೋ ರೈಲು ನಿಗಮ (BMRCL)ವು ನಮ್ಮ ಮೆಟ್ರೋ ನೇರಳೆ ಮಾರ್ಗದ ಪೂರ್ಣ ಪ್ರಮಾಣದ ಕಾರ್ಯಾಚರಣೆ ಆರಂಭಿಸಲು ಸಿದ್ಧತೆ ಆರಂಭಿಸಿದೆ. ಮೊದಲು ಆಗಸ್ಟ್ ಎಂದು ಹೇಳಲಾಗುತ್ತಾದರೂ ಕೆಲವು ಕಾರಣಗಳಿಂದ ಸೆಪ್ಟಂಬರ್ ಆದರೂ ಈ ಮಾರ್ಗ ಪೂರ್ಣಪ್ರಮಾಣದಲ್ಲಿ ಸಂಚಾರ ಮುಕ್ತವಾಗಿಲ್ಲ. ಮೆಟ್ರೋ ಬಳಕೆ ಹೆಚ್ಚಾದಂತೆಲ್ಲ ಜನದಟ್ಟಣೆ ಹೆಚ್ಚಾಗುತ್ತಿದ್ದು, ಪ್ರಯಾಣಿಕರು ಅಧಿಕ ರೈಲುಗಳನ್ನು ಓಡಿಸಲು ಅಧಿಕಾರಿಗಳಿಗೆ ಒತ್ತಾಯಿಸುತ್ತಿದ್ದಾರೆ.

ಕೆ.ಆರ್. ಪುರದಿಂದ ವೈಟ್‌ಫೀಲ್ಡ್ ಭಾಗಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಐಟಿ ಕಂಪನಿಗಳಿಗೆ ಹೋಗುವ ಜನರು ಹೆಚ್ಚೆಚ್ಚು ಮೆಟ್ರೋ ರೈಲು ಬಳಸುತ್ತಿದ್ದಾರೆ.

ನಾನ್‌ಪಿಕ್ ಅವರ್‌ನಲ್ಲೂ ಜನಸಂದಣಿ

ಬೈಯಪ್ಪನಹಳ್ಳಿ ಮತ್ತು ಕೆಂಪೇಗೌಡ (ಮೆಜೆಸ್ಟಿಕ್) ನಿಲ್ದಾಣಗಳಲ್ಲಿ ಪೀಕ್ ಮತ್ತು ನಾನ್-ಪೀಕ್ ಅವರ್‌ಗಳಲ್ಲಿ ಜನಸಂದಣಿ ಹೆಚ್ಚಿರುವುದು ಕಂಡು ಬಂದಿದೆ. ಇದೆಲ್ಲದರ ಪರಿಗಣಿಸಿ ಮೆಟ್ರೋ ರೈಲುಗಳ ಆವರ್ತನ ಹೆಚ್ಚಿಸುವುದು ಅಗತ್ಯವಾಗಿದೆ ಎಂದು ಜನರು ಮನವಿ ಮಾಡುತ್ತಿದ್ದಾರೆ.

Namma Metro:Ridership Has Increased Even Before Purple Line Was Fully Operational

ನಾನ್‌ ಪೀಕ್ ಅವರ್‌ನಲ್ಲಿಯೂ ಸಹಿತ ಮೆಟ್ರೋ ರೈಲುಗಳು ಜನಸಂದಣಿಯಿಂದ ತುಂಬಿ ತುಳುಕುತ್ತಿವೆ. ನಿಲ್ದಾಣಗಳು ಪ್ರಯಾಣಿಕರಿಂದ ಗಿಜಿಗುಡುತ್ತಿರುತ್ತವೆ. ಹೀಗಾಗಿ ಒಂದು ರೈಲಿನಿಂದ ಮತ್ತೊಂದು ರೈಲಿನ ಮಧ್ಯದ ಸಂಚಾರ ಸಮಯ ಕಡಿಮೆ ಮಾಡಬೇಕು. ನಾನು ಸುಮಾರು 12.30 ಕ್ಕೆ ಕೆಲವೊಮ್ಮೆ 2.30ಕ್ಕೆ ಓಡಾಡುತ್ತೇನೆ. ಈ ಅವಧಿಯಲ್ಲಿ ಕಳೆದ ಮೂರು ತಿಂಗಳುಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಬೈಯಪ್ಪನಹಳ್ಳಿಯ ಪ್ರಯಾಣಿಕರೊಬ್ಬರು ತಿಳಿಸಿದರು.

ಮೆಜೆಸ್ಟಿಕ್ ನಿಲ್ದಾಣದಲ್ಲಿ ಅತ್ಯಧಿಕ ಪ್ರಯಾಣಿಕರು

ಜನ ದಟ್ಟಣೆಯ ಸಮಯದಲ್ಲಿ ರೈಲು ಹತ್ತುವುದು ಸವಾಲಿನ ಕೆಲಸವಾಗಿದೆ. ಅದರಲ್ಲೂ ಮೆಜೆಸ್ಟಿಕ್ ನಿಲ್ದಾಣದಲ್ಲಿ ಅಧಿಕ ಜನರಿರುತ್ತಾರೆ. ಹೀಗಾಗಿ ಈ ನಿಲ್ದಾಣದಲ್ಲಿ ಉಸಿರುಗಟ್ಟಿಸುವ ವಾತಾವರಣ ಇತ್ತೀಚೆಗೆಕಂಡು ಬರುತ್ತಿದೆ. ಪ್ರಯಾಣಿಕರಿಗೆ ಉತ್ತಮ ಅವಕಾಶ ಕಲ್ಪಿಸಲು ನಿಲ್ದಾಣದ ಸಾಮರ್ಥ್ಯವನ್ನು ಹೆಚ್ಚಿಸಬೇಕಿದೆ.

ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ, ಅಧಿಕಾರಿಗಳು ಎಸ್ಕಲೇಟರ್ ಮತ್ತು ಮೆಟ್ಟಿಲುಗಳೆರಡರಲ್ಲೂ ದಟ್ಟಣೆಯ ಬಗ್ಗೆ ಪ್ರಯಾಣಿಕರ ಕಳವಳವನ್ನು ಒಪ್ಪಿಕೊಂಡರು. ಇದಕ್ಕೆ ಪ್ರತಿಯಾಗಿ ಬಿಎಂಆರ್‌ಸಿಎಲ್ ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಹೆಚ್ಚುವರಿ ಎಸ್ಕಲೇಟರ್ ಅಳವಡಿಸಲಾಯಿತು. ಆದರೆ ಮೆಜೆಸ್ಟಿಕ್ ನಲ್ಲಿ ಎಸ್ಕಿಲೇಟರ್,ಮೆಟ್ಟಿಲು ಇದ್ದರೂ ಸಹಿತ ಜನಟ್ಟಣೆ ನಿರ್ವಹಿಸುವಲ್ಲಿ ಬಿಎಂಆರ್‌ಸಿಎಲ್ ವಿಫಲವಾಗಿದೆ.

ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಅಗಾಧ ಪ್ರಯಾಣಿಕರು ಓಡಾಟದ, ನೂಕು ನುಗ್ಗಲು ಚಿತ್ರಿಸುವ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಲೇ ಇವೆ. ಈ ನಿಲ್ದಾಣದಲ್ಲಿ ಜನಸಂದಣಿಕ ಕಡಿಮೆ ಮಾಡಲು ಸೂಕ್ತ ಕ್ರಮ ವಹಿಸಬೇಕಿದೆ.

ಪೀಕ್ ಅವರ್‌ನಲ್ಲಿ 3 ನಿಮಿಷಕ್ಕೊಂದು ರೈಲು

ಈ ಬಗ್ಗೆ ಪ್ರತಿಕ್ರಿಯಿಸಿದ BMRCL ಹಿರಿಯ ಅಧಿಕಾರಿಗಳು ಪ್ರಯಾಣಿಕರ ದಟ್ಟಣೆ ಸಮಯದಲ್ಲಿ, ನೇರಳೆ ಮಾರ್ಗದಲ್ಲಿ 3 ನಿಮಿಷಗಳ ಒಳಗೆ ಮತ್ತು ಹಸಿರುವ ಮಾರ್ಗದಲ್ಲಿ 5 ನಿಮಿಷದೊಳಗೆ ರೈಲುಗಳನ್ನು ಓಡಿಸುತ್ತಿದ್ದೇವೆ. ಜನದಟ್ಟಣೆ ಇಲ್ಲದ ಸಮಯದಲ್ಲಿ ರೈಲುಗಳ ಓಡಾಟದ ಮಧ್ಯೆ 8 ರಿಂದ 10 ನಿಮಿಷ ಇರುತ್ತವೆ. ಕಿಕ್ಕಿರಿದ ನಿಲ್ದಾಣಗಳಲ್ಲಿ ಶಾರ್ಟ್-ಲೂಪ್ ಸೇವೆಗಳು ಪರಿಣಾಮಕಾರಿ ಎಂದು ಸಾಬೀತಾಗಿದೆ.

ಭವಿಷ್ಯದಲ್ಲಿ, ಮೆಟ್ರೋ ವ್ಯವಸ್ಥೆಯು ವಿಸ್ತರಿಸುವುದನ್ನು ಮುಂದುವರಿಸಲಿದ್ದೇವೆ. ಈ ಮೂಲಕ ಪ್ರಯಾಣಿಕರಿಗೆ ತೊಂದರೆ-ಮುಕ್ತ ಪ್ರಯಾಣ ಖಚಿತಪಡಿಸಿಕೊಳ್ಳಲಿದ್ದೇವೆ ಎಂದು ಅವರು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+