Hebbal-Sarjapur Metro Line: ಬೆಂಗಳೂರು ಉತ್ತರ-ಆಗ್ನೇಯ ಭಾಗದ ರಿಯಲ್ ಎಸ್ಟೇಟ್‌ಗೆ ಬೂಸ್ಟ್, ಹೂಡಿಕೆ ಹೆಚ್ಚಳ?
ಬೆಂಗಳೂರು, ಮೇ 10: ಬೆಂಗಳೂರಿನ ಎರಡು ಪ್ರಮುಖ ಭಾಗಗಳಲ್ಲಿ ಸಂಪರ್ಕ ಕಲ್ಪಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮಹತ್ವದ ಯೋಜನೆಗೆ ಕೈಹಾಕಿದೆ. ಈಗಾಗಲೇ ಯೋಜನೆ ಆರಂಭಕ್ಕೆ ಸಮಗ್ರ ಯೋಜನಾ ವರದಿ ಸಹಿತ ಸಿದ್ಧವಾಗಿದೆ. ಯೋಜನೆ ಇನ್ನೇನು ಆರಂಭವಾಗಲಿದ್ದು, ಐಟಿ ಕಾರಿಡಾರ್ ಸಮೀಪವೇ ಈ ಮಾರ್ಗ ಹಾದು ಹೋಗಲಿದೆ. ಹೀಗಾಗಿ ಈ ಮಾರ್ಗದ ಆಸ್ತಿಗಳಿಗೆ ಚಿನ್ನದ ಮೌಲ್ಯ ಸಿಗಲಿದೆ ಎಂದು ವರದಿ ಆಗಿದೆ.
ನಮ್ಮ ಮೆಟ್ರೋ ಕೆಂಪು ಮಾರ್ಗ (Namma Metro Red Line update) ನಿರ್ಮಾಣಕ್ಕೆ ಮುಂದಾಗಿದೆ. ಉತ್ತರದಲ್ಲಿ ಹೆಬ್ಬಾಳದಿಂದ ಬೆಂಗಳೂರಿನ ಆಗ್ನೇಯ ಭಾಗದಲ್ಲಿರುವ ಸರ್ಜಾಪುರಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಿದೆ. ಒಟ್ಟು 36.5 ಕಿಲೋ ಮೀಟರ್ ಇರುವ ಈ ಮಾರ್ಗದ ಅಕ್ಕಪಕ್ಕದಲ್ಲಿ ಮುಂದಿನ ದಿನಗಳಲ್ಲಿ ರಿಯಲ್ ಎಸ್ಟೇಟ್ ಗರಿಗೆದರಿಲಿದೆ. ಭೂಮಿ ಬೆಲೆ ಮೂರು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟವಾಗಲಿವೆ.

ಮೆಟ್ರೋ ರೆಡ್ ಲೈನ್ ಒಟ್ಟು ಬರೋಬ್ಬರಿ 28,405 ಕೋಟಿ ರೂಫಾಯಿ ಅಂದಾಜು ನಿರ್ಮಾಣ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ನಗರದ ಈ ಭಾಗದ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡುತ್ತದೆ. ಬೆಂಗಳೂರಿನಲ್ಲಿ ಉತ್ತರ, ಆಗ್ನೆಯ ಭಾಗದಲ್ಲಿ ಅಭಿವೃದ್ಧಿ ಆಗುವ ಜೊತೆಗೆ ಸಂಚಾರ ದಟ್ಟಣೆಗೂ ಕಡಿವಾಣ ಹಾಕುತ್ತದೆ. ಜನರಿಗೆ, ರಿಯಲ್ ಎಸ್ಟೇಟ್‌ಗೆ ವಿವಿಧ ರಂಗದ ಉದ್ಯೋಗಿಗಳು ಸೇರಿದಂತೆ ಸಾರ್ವಜನಿಕರಿಗೆ ಅನುಕೂಲ ಒದಗಿಸಲಿದೆ.
ಸರ್ಜಾಪುರದ ಐಟಿ ಕಾರಿಡಾರ್ ಮೂಲಕ ಹಾದು ಹೋಗುತ್ತದೆ. ಈ ಭಾಗದಲ್ಲಿ ಮೆಟ್ರೋ ರೆಡ್ ಲೈನ್ ಎತ್ತರದ ಕಾರಿಡಾರ್ ಹೊಂದಿರಲಿದೆ. ಕೋರಮಂಗಲದಲ್ಲಿ ಸುರಂಗಮಾರ್ಗದಲ್ಲಿ ಸಾಗುತ್ತದೆ. ಅಲ್ಲಿಂದ ಒಳಮಾರ್ಗದಲ್ಲಿ ಸಾಗಿ ಬಳ್ಳಾರಿ ರಸ್ತೆಯ ಬಳಿ ಹೊರ ಬರುವ ರೈಲು ಮಾರ್ಗ ಇದಾಗಿದೆ. ಎತ್ತರ ನಿಲ್ದಾಣಗಳು ಇಲ್ಲಿ ನಿರ್ಮಾಣವಾಗಲಿದೆ. ಈ ಮಾರ್ಗವು ಶೀಘ್ರವೇ (2030) ನಿರ್ಮಾಣವಾಗಲಿದೆ. ನಮ್ಮ ಮೆಟ್ರೋ ಅಧಿಕಾರಿಗಳು ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಸಾರಿಗೆ ಸುಧಾರಣೆ ಜೊತೆಗೆ ಮನೆ ಬಾಡಿಗೆ ಹೆಚ್ಚಾಗಲಿದೆ. ರಿಯಲ್ ಎಸ್ಟೇಟ್ ವಲಯಕ್ಕೆ ಅದೃಷ್ಟ ಖುಲಾಯಿಸಲಿದೆ ಎಂದು ಮ್ಯಾಜಿಕ್ ಬ್ರಿಕ್ಸ್ ವರದಿ ಮಾಡಿದೆ.

ರಿಯಲ್ ಎಸ್ಟೇಟ್ ಮೇಲೆ ಪರಿಣಾಮ ಹೇಗೆ?
ತ್ವರಿತ ಸಾರಿಗೆ ಇರುವ ಕಡೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನರು ವಾಸಿಸಲು ಮನಸ್ಸು ಮಾಡುತ್ತಾರೆ. ಅಲ್ಲದೇ ಐಟಿ ಕಾರಿಡಾರ್ ಇರುವ ಪ್ರದೇಶ ಕೊಂಚ ದುಬಾರಿ ಎನ್ನಬಹುದು. ಅಲ್ಲದೇ ಸುವ್ಯವಸ್ಥೆ ಸಾರಿಗೆ ಇರುವ ಕಡೆಗಳಲ್ಲಿ ಹೆಚ್ಚಿನ ಹೂಡಿಕೆ ಆಗುತ್ತದೆ. ಕಂಪನಿಗಳು ಬರುತ್ತವೆ. ಬೆಂಗಳೂರು ನಗರ ಭಾಗದಲ್ಲಿ ಹೊಸ ಯೋಜನೆಗಳಿಗೆ ಅವಕಾಶ ಇಲ್ಲ. ಹೀಗಾಗಿ ಹೂಡಿಕೆಗಳೂ ಹೊರ ವಲಯದತ್ತ ಬರುತ್ತವೆ. ಇದರಿಂದಾಗಿ ಆ ಭಾಗದ ಆರ್ಥಿಕತೆ ಚೇತರಿಕೆ ಕಾಣುತ್ತದೆ. ಮೆಟ್ರೋದಿಂದ ಸಂಚಾರ ದಟ್ಟಣೆ ಇಳಿಕೆಗೆ ಸಹಾಯವಾಗುತ್ತದೆ.
ಇನ್ನೂ ವರದಿ ಪ್ರಕಾರ, ಮೆಟ್ರೋ ಮಾರ್ಗ ನಿರ್ಮಾಣದ ಮಾರ್ಗದಲ್ಲಿ ರಿಯಲ್ ಎಸ್ಟೇಟ್‌ಗೆ ಬೇಡಿಕೆ ಹೆಚ್ಚಾಗುತ್ತದೆ. ಮುಂಬರುವ ಮೆಟ್ರೋ ನಿಲ್ದಾಣಗಳ 500 ಮೀಟರ್ ವ್ಯಾಪ್ತಿಯಲ್ಲಿ ಭೂಮಿಗೆ ಅಧಿಕ ಬೆಲೆ ಸಿಗುತ್ತದೆ ಚದರ ಮೀಟರ್‌ಗೆ 2025ರಲ್ಲಿ ಇದ್ದ ಬೆಲೆಗಿಂತಲೂ 2030ರಲ್ಲಿ ನಾಲ್ಕು ಪಟ್ಟು ಹೆಚ್ಚಾಗಲಿದೆ. ಹೀಗೆ ಗಮನಾರ್ಹವಾಗಿ ಆಸ್ತಿ ದರ ಹೆಚ್ಚುತ್ತಿದ್ದಂತೆ ಮನೆ ಬಾಡಿಗೆ ದರವು ಶೇಕಡಾ 20-30ರಷ್ಟು ಏರಿಕೆ ಆಗಬಹುದು ಎನ್ನಲಾಗಿದೆ.
ಹೂಡಿಕೆಯ ಆಕರ್ಷಣೆ
ಇಲ್ಲಿನ ಮೂಲ ಸೌಕರ್ಯ ಸುಧಾರಣೆ ಆಗಲಿದೆ. ಅತೀ ಕಡಿಮೆ ಸಮಯದಲ್ಲಿ ಅಭಿವೃದ್ಧಿ ಹಾಗೂ ಅಭಿವೃದ್ಧಿಯಲ್ಲಿ ಸುಧಾರಣೆ ಆಗಲಿದೆ. ಹೆಬ್ಬಾಳ ಮಾರ್ಗವಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುತ್ತೇವೆ. ಅಲ್ಲಿ ಸಹ ಮೆಟ್ರೋ ನೀಲಿ ಮಾರ್ಗ ನಿರ್ಮಾಣವಾಗುತ್ತಿದೆ. ನಮ್ಮ ಮೆಟ್ರೋ ದಿಂದ ಹೆಬ್ಬಾಳದಲ್ಲಿ ಸಾರಿಗೆ ಹಬ್ ನಿರ್ಮಾಣವಾಗಲಿದೆ. ಇದೆಲ್ಲ ಕಾರಣದಿಂದ ಹೆಬ್ಬಾಳ ಭವಿಷ್ಯದಲ್ಲಿ ಬೆಂಗಳೂರಿನ ಸಾರಿಗೆ ಕೇಂದ್ರವಾಗಲಿದೆ. ಹೆಬ್ಬಾಳ ಸಮೀಪ, ಏರ್‌ಪೋರ್ಟ್ ರಸ್ತೆಯಲ್ಲಿ ಹಾಗೂ ಸರ್ಜಾಪುರ ಸುತ್ತಮುತ್ತಲಿನ ಪ್ರದೇಶಗಳಿಗೆ ಹೆಚ್ಚಿನ ಹೂಡಿಕೆ ಹರಿದು ಬರಬಹುದು.












Click it and Unblock the Notifications