Namma Metro: ನೇರಳೆ ಮಾರ್ಗದಲ್ಲಿ ಕಿಕ್ಕಿರಿದ ಜನರು: ಸಾಧ್ಯವಾಗದ ಹೆಚ್ಚುವರಿ ಬೋಗಿಗಳ ಅಳವಡಿಕೆ
ಬೆಂಗಳೂರು, ಅಕ್ಟೋಬರ್ 16: ಬೆಂಗಳೂರು ನಮ್ಮ ಮೆಟ್ರೋ ರೈಲಿನ ಬಹು ನಿರೀಕ್ಷೆಯ ನೇರಳೆ ಮಾರ್ಗ ಸಂಪೂರ್ಣ ಆರಂಭವಾಗಿದೆ. ಇದು ಪೂರ್ವದಿಂದ ಪಶ್ಚಿಮವರೆಗಿರುವ ಸುಮಾರು 40 ಕ್ಕೂ ಅಧಿಕ ಕಿಲೋ ಮೀಟರ್ ಮಾರ್ಗವಾಗಿದೆ. ಐಟಿ ಕಾರಿಡಾರ್ ಗೆ ಸಂಪರ್ಕಿಸಿದ ಮೊದಲ ಮೆಟ್ರೋ ಮಾರ್ಗವಾಗಿದೆ. ಹೀಗಾಗಿ ದಿನದಿಂದ ದಿನಕ್ಕೆ ಮೆಟ್ರೋ ಬಳಕೆದಾರರು ಸಂಖ್ಯೆ ಹೆಚ್ಚುತ್ತಿದ್ದು, ಇದು ಇದೀಗ ಸಮಸ್ಯೆಯಾಗಿ ಪರಿಣಮಿಸಿದೆ.
ಐಟಿ ಉದ್ಯೋಗಿಗಳು ಸೇರಿದಂತೆ ಅನೇಕರಿಗೆ ಈ ಮಾರ್ಗದ ಓಡಾಟ ಸಮಾಧಾನ ತಂದಿದೆ. ಆದರೆ ಆರು ಬೋಗಿಗಳ ರೈಲುಗಳು ಈಗ ತುಂಬಿ ತುಳುಕುತ್ತಿವೆ. ಸಾಕಷ್ಟು ನಿಮಿಷಗಳ ಕಾಲ ಸರತಿ ಸಾಲಿನಲ್ಲಿ ನಿಂತು ಪ್ರಯಾಣಿಕರಿಗೆ ರೈಲು ಏರಬೇಕಾದ ಅನಿವಾರ್ಯತೆ ಎದುರಾಗಿದೆ.

ಕಾರಣವೇನೆಂದರೆ ವಿಸ್ತರಣೆ ಮತ್ತು ಹೊಸ ಮಾರ್ಗ ಸೇರಿ ಒಟ್ಟು ನೇರಳೆ ಮಾರ್ಗದಲ್ಲಿ ಮೊದಲಿದ್ದಷ್ಟೇ ರೈಲುಗಳು ಕಾರ್ಯಚರಣೆ ನಡೆಸುತ್ತಿವೆ. ಬೋಗಿಗಳನ್ನು ಹೆಚ್ಚಿಸಲಾಗಿಲ್ಲ. ಇತ್ತ ಸಾರ್ವಜನಿಕ ಬಳಕೆಯು ಹೆಚ್ಚಾಗುತ್ತಿದೆ. ಹೀಗಾಗಿ ಜನರು ತೊಂದರೆ ಅನುಭವಿಸಿತ್ತಿದ್ದಾರೆ. ಇತ್ತ ಒಪ್ಪಂದಂತೆ ಬೋಗಿಗಳನ್ನು ಉತ್ಪಾದನಾ ವಿದೇಶಿ ಕಂಪನಿಯತ್ತ ಪೂರೈಕೆಗಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಕಾಯುತ್ತಾ ಕುಳಿತಿದೆ ಎಂದು 'ದಿ ಹಿಂದು' ವರದಿ ಮಾಡಿದೆ.
ಕಿಕ್ಕಿರಿದು ತುಂಬಿರುವ ಮೆಟ್ರೋ ರೈಲುಗಳು
ವರ್ಷಗಳಿಂದ ಬೇಡಿಕೆಯಲ್ಲಿದ್ದ ಚಲ್ಲಘಟ್ಟ ಮತ್ತು ವೈಟ್‌ಫೀಲ್ಡ್ ವರೆಗಿನ 43.49 ಕಿ.ಮೀ ಮೆಟ್ರೋ ಪೂರ್ಣಗೊಂಡಿದೆ. ಜನರು ಕೇವಲ 76 ನಿಮಿಷಗಳಲ್ಲಿ ₹60 ರೂಪಾಯಿಯಲ್ಲಿ ಕ್ರಮಿಸುತ್ತಿದ್ದಾರೆ. ಆದರೆ ಮೆಟ್ರೋ ಸಂಪೂರ್ಣ ವಿಸ್ತರಣೆಯಾದ ಬಳಿಕ ರೈಲುಗಳು ಕಿಕ್ಕಿರಿದು ತುಂಬಿರುತ್ತವೆ.
ನಾನು ನಿತ್ಯ ಎಂಜಿ ರಸ್ತೆಗೆ ಮೆಟ್ರೋದಲ್ಲಿ ಓಡಾಡುತ್ತೇವೆ. ಮೊದಲಿಗಿಂತಲೂ ಈಗ ಮೆಟ್ರೋಗಾಗಿ ಕಾಯುವ ಸಮಯ ಹೆಚ್ಚಾಗಿದೆ. ಮೆಟ್ರೋ ಆವರ್ತನ ಕಡಿಮೆ ಆಗಿದೆ. ರೈಲುಗಳು ಸಂಖ್ಯೆ ಇಲ್ಲವೇ ಬೋಗಿಗಳನ್ನು ಹೆಚ್ಚಿಸಿದರೆ ಇಂತಹ ಸಮಸ್ಯೆಗಳು ಆಗುವುದಿಲ್ಲ. ಜೊತೆಗೆ ಒಂದು ರೈಲು ಸಾಗಿದ ಬಳಿಕ ಮತ್ತೊಂದು ರೈಲಿಗಾಗಿ ಕಾಯುವ ಸಮಯ ಕಡಿಮೆ ಮಾಡಲು ರೈಲುಗಳ ಆರ್ವರ್ತನ ಹೆಚ್ಚಿಸಬೇಕು ಎಂದು ಪ್ರಯಾಣಿಕರೊಬ್ಬರು ಮನವಿ ಮಾಡಿದ್ದಾರೆ.
ರೈಲುಗಳ ಆರ್ವತನ ಹೆಚ್ಚಳಕ್ಕೆ ಒತ್ತಾಯ
ನೇರಳೆ ಮಾರ್ಗದ ಕೊನೆ ನಿಲ್ದಾಣ ವೈಟ್‌ಫೀಲ್ಡ್ (ಕಾಡುಗೋಡಿ) ಪಟ್ಟಂದೂರು ಅಗ್ರಹಾರ ವಿಭಾಗದಲ್ಲಿ ಮೆಟ್ರೋ ರೈಲು ಸೇವೆಯ ಆವರ್ತನವು ಪ್ರತಿ 10 ನಿಮಿಷಗಳಿಗೆ ಒಮ್ಮೆ ಇದೆ. ಪಟ್ಟಂದೂರು ಅಗ್ರಹಾರ - ಮೈಸೂರು ರಸ್ತೆ ವಿಭಾಗದಲ್ಲಿ ಪ್ರತಿ 5 ನಿಮಿಷಗಳಿಗೆ ಒಮ್ಮೆ ಓಡಾಡುತ್ತದೆ. ಬೆಳಗಿನ ಜಾವದ ಸಮಯದಲ್ಲಿ, ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮೆಜೆಸ್ಟಿಕ್‌ನಲ್ಲಿ - ಎಂ.ಜಿ. ರಸ್ತೆ ವಿಭಾಗವು ಮೂರು ನಿಮಿಷಗಳು ಮತ್ತು ಮೈಸೂರು ರಸ್ತೆ ಮತ್ತು ಚಲ್ಲಘಟ್ಟ ನಡುವೆ 10 ನಿಮಿಷಗಳಿಗೆ ರೈಲುಗಳ ಆವರ್ತನ ನಡೆಯುತ್ತಿದೆ.
ಈ ನೇರಳೆ ಮಾರ್ಗದಲ್ಲಿ ಮುಖ್ಯವಾಗಿ ಇಂಟರ್‌ಚೇಂಜ್ ಸ್ಥಳವಾದ ಮೆಜೆಸ್ಟಿಕ್, ಇಂದಿರಾಗಾಂದಿ, ಬೈಯಪ್ಪನಹಳ್ಳಿ, ಮತ್ತು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣಗಳಲ್ಲಿ ಇತ್ತೀಚೆಗೆ ಅಧಿಕ ಪ್ರಯಾಣಿಕರು ಕಂಡು ಬರುತ್ತಿದ್ದಾರೆ. ಇಷ್ಟು ಪ್ರಯಾಣಿಕ ನಿರ್ವಃಹಣೆಯು ಮೆಟ್ರೋ ಸಿಬ್ಬಂದಿಗೆ ಸವಾಲಾಗುತ್ತಿದೆ. ಪ್ರತಿ ಮೂರು ನಿಮಿಷಗಳಿಗೊಮ್ಮೆ ರೈಲು ಕಾರ್ಯ ನಿರ್ವಹಿಸುತ್ತಿದ್ದರು ಸಹಿತ ಜನದಟ್ಟಣೆ ಹೆಚ್ಚಾಗುತ್ತಿದೆ. ಆದ್ದರಿಂದ ಬಿಎಂಆರ್‌ಸಿಎಲ್ ಪರಿಣಾಮಕಾರಿಯಾಗಿ ನಿಯಂತ್ರಣ ಕ್ರಮ, ರೈಲು, ಬೋಗಿಗಳ ಸಂಖ್ಯೆ ಮತ್ತು ರೈಲುಗಳ ಆವರ್ತನ ಹೆಚ್ಚಿಸಬೇಕು ಎಂಬ ಒತ್ತಾಯ ಕೇಳಿ ಬಂದಿವೆ.

ಬೋಗಿಗಳಿಗಾಗಿ ಕಾಯುತ್ತಿರುವ BMRCL
ನಮ್ಮ ಮೆಟ್ರೋ ಒಟ್ಟು 73 ಕಿಲೋ ಮೀಟರ್ ಜಾಲವನ್ನು ಹೊಂದಿದೆ. ಅದಕ್ಕಾಗಿ ನೇರಳೆ ಮಾಗದಲ್ಲಿ 33 ಹಾಗೂ ಹಸಿರು ಮಾರ್ಗದಲ್ಲಿ 24 ರೈಲು ಸೇರಿ ಒಟ್ಟು 57 ರೈಲುಗಳನ್ನು ಕಾರ್ಯ ನಿರ್ವಹಿಸುತ್ತಿದೆ. ಇನ್ನೂ ಮೆಟ್ರೋ ಜಾಲ ವಿಸ್ತರಿಸಿದ ಪರಿಣಾಮ ಹಾಗೂ ಹೊಸ ಯೋಜನೆಗಳಿಗಾಗಿ ಚೀನಾ ಕಂಪನಿ ಜತೆ ಒಪ್ಪಂದ ಮಾಡಿಕೊಂಡಿದೆ. ಚೀನಾದ ರೈಲ್ವೇ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ (CRRC) 216 ಕೋಚ್‌ಗಳನ್ನು ತಲುಪಿಸಲು ಸಿದ್ಧವಾಗಿದೆ. ಆದರೆ ಇನ್ನೂ ಬೆಂಗಳೂರಿಗೆ ಬೋಗಿಗಳು ಬಂದಿಲ್ಲ ಎನ್ನಲಾಗಿದೆ.
ಮೆಟ್ರೋ ಬೋಗಿ ಒದಗಿವಂತೆ ಚೀನಾ ಕಂಪನಿ ಜೊತೆಗೆ ನಮ್ಮ ಮೆಟ್ರೋ 2019 ರಲ್ಲಿ ₹1,578 ಕೋಟಿ ಒಪ್ಪಂದ ಮಾಡಿಕೊಂಡಿತು. ಆದರೆ ಕಾರಣಾಂತರಗಳಿಂದ ಭಾರತದಲ್ಲಿ ಕಂಪನಿಯು ಉತ್ಪಾದನಾ ಘಟಕ ತೆರೆಯಲು ಆಗಲಿಲ್ಲ. ಹೀಗಾಗಿ ಬೋಗಿ ಪೂರೈಕೆಯಲ್ಲಿ ವಿಳಂಬವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಬೋಗಿ ಪೂರೈಕೆ ವಿಳಂಬ ಹಿನ್ನೆಲೆಯಲ್ಲಿ BRMCL ₹372 ಕೋಟಿ ಬ್ಯಾಂಕ್ ಗ್ಯಾರಂಟಿಯನ್ನು ಎನ್‌ಕ್ಯಾಶ್ ಮಾಡುವ ಎಚ್ಚರಿಕೆ ನೀಡಿದೆ. ಚೀನಾದ ಕಂಪನಿಯು ಈಗ ಉದ್ದೇಶಿ ಮೆಟ್ರೋ ಕೋಚ್ ಪೂರೈಕೆಗಾಗಿ ಕೋಲ್ಕತ್ತಾ ಕಂಪನಿಗಳ ಜತೆ ಪಾಲುದಾರಿಕೆ ಮಾಡಿಕೊಂಡಿದೆ.
-
Namma Metro: ಏರ್ಪೋರ್ಟ್ ಮೆಟ್ರೋ ನೀಲಿ ಮಾರ್ಗಕ್ಕೆ ಬರಲಿವೆ 2 ಡ್ರವರ್ಲೆಸ್ ರೈಲು -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ











Click it and Unblock the Notifications