Namma Metro Majestic Station: ಇಂಟರ್‌ಚೇಂಜ್ ನಿಲ್ದಾಣದಲ್ಲಿ ಜನದಟ್ಟಣೆಗೆ ಕಾರಣವೇನು?
ಬೆಂಗಳೂರು, ಫೆಬ್ರವರಿ 28: ಬೆಂಗಳೂರು ನಮ್ಮ ಮಟ್ರೋ (Namme Metro) ಪ್ರಯಾಣಿಕರಿಗಾಗಿ BMRCL ಎರಡು ನಿಲ್ದಾಣಗಳ ಮಧ್ಯೆ ಹೆಚ್ಚುವರಿ ರೈಲುಗಳನ್ನು ಪ್ರತಿ ಮೂರು ನಿಮಿಷಕ್ಕೆ ಒಂದರಂತೆ ಬಿಡುಗಡೆ ಮಾಡಿತ್ತು. ಆದರೆ ಇದೀಗ ಅದರಿಂದಲೇ ಹಲವು ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸೋಮವಾರದಿಂದ ನಾಡಪ್ರಭು ಕೆಂಪೇಗೌಡ ಮೆಜೆಸ್ಟಿಕ್ ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣದಿಂದ ಗರುಡಾಚಾರ್‌ಪಾಳ್ಯಕ್ಕೆ ಬೆಳಗ್ಗೆ ಪೀಕ್ ಹವರ್‌ನಲ್ಲಿ ಶಾರ್ಟ್ ಲೂಪ್ ರೈಲನ್ನು ಪ್ರತಿ ಮೂರು ನಿಮಿಷಗಳಿಗೊಂದು ಬಿಡಲಾಗಿದೆ. ಮರುದಿನ ಮಂಗಳವಾರ (ಫೆ.27) ನಮ್ಮ ಮೆಟ್ರೊದ ದೈನಂದಿನ ಪ್ರಯಾಣಿಕರು ಅನಾನುಕೂಲತೆಗಾಗಿ ಅನುಭವಿಸಿದ್ದರೆಂದು TOI ವರದಿ ಮಾಡಿದೆ.

ಪ್ಲಾಟ್‌ಫಾರ್ಮ್ ನಲ್ಲಿ ಜನದಟ್ಟಣೆ
ಮೆಜೆಸ್ಟಿಕ್ ನಿಂದ ಗರುಡಾಚಾರ್ ಪಾಳ್ಯದವರೆಗೆ ಹೆಚ್ಚುವರಿ ರೈಲು ಇವೆ. ಅದರಾಚೆಯ ಪ್ರದೇಶಗಳಿಗೆ ತೆರಳುವ ಪ್ರಯಾಣಿಕರು ಕಿಕ್ಕಿರಿದ ತುಂಬಿರುವ ಪ್ಲಾಟ್‌ಫಾರ್ಮ್‌ಗಳು ಮತ್ತು ರೈಲುಗಳನ್ನು ಹತ್ತುವುದೇ ದೊಡ್ಡ ಸವಾಲಾಗಿದೆ. ಇದರಿಂದ ಅವರ ಗಮ್ಯಸ್ಥಾನ ತಲುಪುವುದು ವಿಳಂಬವಾಗುತ್ತಿದೆ.
ನಾವು ಸಾಮಾನ್ಯವಾಗಿ ಇಂದಿರಾನಗರದಿಂದ ಪಟ್ಟಂದೂರು ಅಗ್ರಹಾರಕ್ಕೆ 25 ನಿಮಿಷಗಳಲ್ಲಿ ತೆರಳುತ್ತೇನೆ. ಆದರೆ ಮಂಗಳವಾರ ಬೆಳಿಗ್ಗೆ, ನಾನು ನನ್ನ ಗಮ್ಯಸ್ಥಾನವನ್ನು ತಲುಪಲು ಇನ್ನೊಂದು ರೈಲಿಗೆ ವರ್ಗಾಯಿಸಬೇಕಿತ್ತು. ಅದಕ್ಕಾಗಿ ಹೆಚ್ಚುವರಿ ಮೆಟ್ರೋ (ಶಾರ್ಟ್ ಲೂಪ್) ರೈಲು ಹತ್ತಲು ತೀರ್ಮಾನಿಸಿದೆ.

25 ನಿಮಿಷದ ಪ್ರಯಾಣಕ್ಕೆ 55 ನಿಮಿಷ...!
ಆದರೆ, ಪ್ಲಾಟ್‌ಫಾರ್ಮ್‌ನಲ್ಲಿ ಸಾವಿರಾರು ಜನರು ಕಿಕ್ಕಿರಿದು ತುಂಬಿದ್ದರು. ಮೂರು ರೈಲುಗಳನ್ನು ಸ್ಥಗಿತಗೊಳಿಸಿದ್ದರಿಂದ ಸಂಚಾರ ವಿಳಂಬವಾಯಿತು. ಸ್ವಲ್ಪ ಸಮಯದ ನಂತರ, ವೈಟ್‌ಫೀಲ್ಡ್‌ಗೆ ತೆರಳುತ್ತಿದ್ದ ಬಂದ ರೈಲಿನಲ್ಲಿ ಕಾಲಿಡಲು ಜಾವಿರಲಿಲ್ಲ. ಅತೀಯಾದ ಜನದಟ್ಟಣೆಯಿಂದ ರೈಲು ಹತ್ತಲು ಸಾಧ್ಯವಾಗಲಿಲ್ಲ ಎಂದು 'ನಮ್ಮ ಮೆಟ್ರೊ'ದ ನಿತ್ಯದ ಬಳಕೆದಾರರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ನೂ ಸತ್ಯಸಾಯಿ ಆಸ್ಪತ್ರೆ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಡಿಬೋರ್ಡ್ ಮಾಡಲು ಸೂಚಿಸಲಾಯಿತು. ಇದರಿಂದ ನಾನು ಗಮ್ಯಸ್ಥಾನವನ್ನು ತಲುಪಲು ಮತ್ತಷ್ಟು ತಡವಾಗಿ 25 ನಿಮಿಷದ ಪ್ರಯಾಣಕ್ಕೆ 55 ನಿಮಿಷ ಹಿಡಿಯಿತು. ಇದೇ ರೀತಿ ಮಹಿಳೆ, ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ
ಮೆಟ್ರೋ ನೇರಳೆ ಮಾರ್ಗ ಸಂಪೂರ್ಣ ತೆರೆದ ಬಳಿಕ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ರೈಲುಗಳ ಬೋಗಿ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಿದ್ದರು ಮೆಜೆಸ್ಟಿಕ್ ಇಂಟರ್‌ಚೆಂಜ್ ನಿಲ್ದಾಣದಲ್ಲಿ ಜನ ಕಿಕ್ಕಿರಿದು ತುಂಬಿರುತ್ತಾರೆ. ಬೆಳಗ್ಗೆ ಮತ್ತು ಸಂಜೆ ಪೀಕ್ ಸಮಯದಲ್ಲಿ ರೈಲು ಹತ್ತಲು ನೂಕಾಟ ಸಹ ಇಲ್ಲಿ ಕಾಣಬಹುದು.
ಹಸಿರು ಮಾರ್ಗದಿಂದ ವೈಟ್‌ಫಿಲ್ಡ್ ಕಡೆಗೆ ಹೋಗುವವರು ಇದೇ ಮೆಜೆಸ್ಟಿಕ್ ನಿಲ್ದಾಣಕ್ಕೆ ಆಗಮಿಸುತ್ತಾರೆ. ಹೀಗಾಗಿ ಜನದಟ್ಟಣೆ ಹೆಚ್ಚಾಗುತ್ತಲೆ ಇದೆ.
ಹೆಚ್ಚುವರಿ ರೈಲು: ಸಿಗ್ನಲ್ ಸಮಸ್ಯೆಯಿಂದ ವಿಳಂಬ
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಕಳೆದ ಶನಿವಾರ ಮೆಜೆಸ್ಟಿಕ್ ಇಂಟರ್‌ಚೇಂಜ್ ನಿಲ್ದಾಣದಿಂದ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಗೆ ಬೆಳಿಗ್ಗೆ 5 ಗಂಟೆಗೆ ರೈಲು ಸೇವೆ ಆರಂಭವಾಗಲಿದೆ. ಬೆಳಗ್ಗೆ ಹೊತ್ತು ಹೆಚ್ಚು ಜನದಟ್ಟಣೆ ಹಿನ್ನೆಲೆಯಲ್ಲಿ ಪೀಕ್ ಸಮಯದಲ್ಲಿ (8.45 ರಿಂದ 10.20 ರವರೆಗೆ) ನೇರಳೆ ಮಾರ್ಗದಲ್ಲಿ (Metro Purple line) ಶಾರ್ಟ್ ಲೂಪ್ ರೈಲು ಬಿಡುವುದಾಗಿ ತಿಳಿಸಿತ್ತು.
ಇದೀಗ ರೈಲು ವಿಳಂಬ ಕುರಿತು ಪ್ರತಿಕ್ರಿಯಿಸಿರುವ BMRCL ಅಧಿಕಾರಿಗಳು, ಸಿಗ್ನಲಿಂಗ್ ಸಮಸ್ಯೆಗಳಿಂದ ರೈಲುಗಳ ಸಂಚಾರ ವಿಳಂಬವಾಯಿತು. ಇದರ ಹೊರತಾಗಿ ಯಾವುದೇ ರೈಲುಗಳನ್ನು ರದ್ದುಗೊಳಿಸಿಲ್ಲ ಎಂದು ಅವರು ಮಾಹಿತಿ ನೀಡಿದರು.
ಇನ್ನು ಸಂಚಾರ ಸ್ಥಗಿತ, ಸಂಚಾರ ವ್ಯತ್ಯಯದ ಘಟನೆಗಳು ಆಗಾಗ ಮರುಕಳಿಸುತ್ತಲೆ ಇವೆ. ಇಂತಹ ವೇಳೆ ಕೆಲ ಕಾಲ ಪ್ರಯಾಣಿಕರಿಗೆ ತೊಂದರೆ ಆಗುವ ಸಾಮಾನ್ಯ. ಆದರೆ ನೇರಳೆ ಮಾರ್ಗ ಪೂರ್ಣ ತೆರೆದ ಬಳಿಕ ಮೆಜೆಸ್ಟಿಕ್ ನಲ್ಲಿ ದಟ್ಟಣೆ ಮತ್ತಷ್ಟು ಹೆಚ್ಚಾಗಿದೆ ಎಂಬುದು ವಾಸ್ತವ.












Click it and Unblock the Notifications