Namma Metro: ಮೆಟ್ರೋ ನಿಲ್ದಾಣದಲ್ಲಿ ಕ್ಯೂಆರ್ ಟಿಕೆಟ್ ಮೆಷಿನ್ ಬಳಸುವುದು ಹೇಗೆ?
ಬೆಂಗಳೂರು, ಏಪ್ರಿಲ್. 29: ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಜಾಮ್ ದೊಡ್ಡ ಸಮಸ್ಯೆಯೇ ಹೌದು. ಇದು ಇಂದು ಕೊಂಚ ಮಟ್ಟಿಗೆ ಕಡಿಮೆಯಾಗಿದೆ ಎಂದರೆ ಅದಕ್ಕೆ ಮೆಟ್ರೋ ವ್ಯವಸ್ಥೆ ಕಾರಣ ಎಂದರೆ ತಪ್ಪಾಗುವುದಿಲ್ಲ. ಮೆಟ್ರೋ ಸಾರಿಗೆ ಪ್ರಯಾಣಿಕರಿಗಾಗಿ ಆಗ್ಗಾಗೆ ಹಲವು ಹೊಸ ವ್ಯವಸ್ಥೆಗಳನ್ನು ಜಾರಿಗೆ ತರುತ್ತದೆ. ಅದರಲ್ಲಿ ಇತ್ತೀಚಿನ ಸೇರ್ಪಡೆ ಎಂದರೆ ಅದು ಕ್ಯೂಆರ್ ಟಿಕೆಟ್ ಮೆಷಿನ್.
ಬೆಂಗಳೂರಿನ ನಮ್ಮ ಮೆಟ್ರೋ ಪರ್ಪಲ್ ಲೈನ್ (ನೇರಳೆ ಮಾರ್ಗ) ಬಳಸುವ ಪ್ರಯಾಣಿಕರಾಗಿದ್ದರೆ, ಎಂಜಿ ರಸ್ತೆ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ಹೊಸದಾಗಿ ಸ್ಥಾಪಿಸಲಾದ 'ಕ್ಯೂಆರ್ ಟಿಕೆಟ್ ಯಂತ್ರ'ಗಳನ್ನು ಗಮನಿಸಿರಬಹುದು. ಈ ಮೆಷಿನ್‌ಗಳ ಮೂಲಕ ಕ್ವಿಕ್ ಆಗಿ ಟಿಕೆಟ್‌ಗಳನ್ನು ಪಡೆಯಬಹುದು. ಆದರೆ, ಕೆಲವರಿಗೆ ಈ ಯಂತ್ರಗಳನ್ನು ಬಳಸುವುದು ಹೇಗೆ ಎಂಬ ಬಗ್ಗೆ ಪ್ರಶ್ನೆಯಿದೆ. ಅದಕ್ಕೆ ಉತ್ತರ ಇಲ್ಲಿದೆ.

ಕ್ಯೂಆರ್ ಟಿಕೆಟ್ ಮೆಷಿನ್ ಬಳಸುವುದು ಹೇಗೆ?
ಮೊದಲ ಹಂತ: ಮೆಷಿನ್‌ನಲ್ಲಿ ಕಾಣಿಸುವಂತೆ ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ. ಇದರಲ್ಲಿ ಕನ್ನಡ ಅಥವಾ ಇಂಗ್ಲಿಷ್ ಆಯ್ಕೆಯಿರುತ್ತದೆ.
ಎರಡನೇ ಹಂತ: ನಿಲ್ದಾಣಗಳ ಸರಣಿ ಸಂಖ್ಯೆಗಳ ಪ್ರಕಾರ ಅಥವಾ ನಿಲ್ದಾಣಗಳ ವರ್ಣಮಾಲೆಯ ಕ್ರಮವನ್ನು ಆಧರಿಸಿ ನೀವು ಎಲ್ಲಿಗೆ ಹೋಗಬೇಕು ಎಂಬುದನ್ನು ಆಯ್ಕೆ ಮಾಡಿ. ಎಲ್ಲಿಂದ ಎಲ್ಲಿಗೆ ಎಂಬ ಆಯ್ಕೆ.
ಮೂರನೇ ಹಂತ : ನೀವು ಎಷ್ಟು ಟಿಕೆಟ್ ಪಡೆಯಬೇಕು ಅಂದರೆ ಪ್ರಯಾಣಿಕರ ಸಂಖ್ಯೆಯನ್ನು ಆಯ್ಕೆಮಾಡಬೇಕು. ಮೆಷಿನ್‌ನಲ್ಲಿ ಕನಿಷ್ಠ ಒಬ್ಬರು ಮತ್ತು ಗರಿಷ್ಠ ಆರು ಮಂದಿಗೆ ಟಿಕೆಟ್ ಪಡೆಯಬಹುದು.

ನಾಲ್ಕನೆ ಹಂತ 4: ಟಿಕೆಟ್ ಆಯ್ಕೆ ಮಾಡಿದ ನಂತರ ಹಣ ಪಾವತಿ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ.
ಐದನೇ ಹಂತ 5: ಹಣ ಪಾವತಿಯಾದ ನಂತರ ಮುದ್ರಿತ ಕ್ಯೂಆರ್ ಟಿಕೆಟ್ ಬರುತ್ತದೆ ಅದನ್ನು ಪಡೆಯಿರಿ.
ಕ್ಯೂಆರ್ ಟಿಕೆಟ್ ಮೆಷಿನ್ ಮೂಲಕ 4,500 ಟಿಕೆಟ್‌ಗಳು ಮಾರಾಟ
ಈ ಕ್ಯೂಆರ್ ಟಿಕೆಟ್ ಯಂತ್ರಗಳು ಪ್ರಯಾಣಿಕರು ತಮ್ಮ ಆಯ್ಕೆಯ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಿಗೆ ಕ್ಯೂಆರ್ ಟಿಕೆಟ್‌ಗಳನ್ನು ಮುದ್ರಿಸಲು ಅನುವು ಮಾಡಿಕೊಡುತ್ತದೆ. ಹಣ ಪಾವತಿಯನ್ನು ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಮೂಲಕ ಮಾಡಲಾಗುತ್ತದೆ.
ಈ ವರ್ಷದ ಏಪ್ರಿಲ್ 4 ರಂದು ಪ್ರಾಯೋಗಿಕ ಯೋಜನೆ ಪ್ರಾರಂಭವಾದಾಗಿನಿಂದ ಸುಮಾರು 4,500 ಟಿಕೆಟ್‌ಗಳು ಮಾರಾಟವಾಗಿವೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯೋಜನೆಯ ಭಾಗವಾಗಿ 14 ಯಂತ್ರಗಳನ್ನು ಅಳವಡಿಸಲಾಗಿದ್ದು, ಎಂಜಿ ರಸ್ತೆ ನಿಲ್ದಾಣದಲ್ಲಿ ಆರು ಮತ್ತು ಕಬ್ಬನ್ ಪಾರ್ಕ್ ಎಂಟು ಮೆಷಿನ್‌ಗಳನ್ನು ಅಳವಡಿಸಲಾಗಿದೆ.
ಪೀಕ್ ಅವರ್‌ಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್‌ಗೆ ಮುಂಚಿತವಾಗಿ ಇದನ್ನು ಜಾರಿಗೆ ತರಲಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪಂದ್ಯವನ್ನು ನೋಡಲು ಹೆಚ್ಚು ಜನರು ಕಬ್ಬನ್ ಪಾರ್ಕ್ ಬಳಿಯಿರುವ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರುತ್ತಾರೆ. ಅವರಿಗೆ ಈ ವ್ಯವಸ್ಥೆ ಹೆಚ್ಚು ಅನುಕೂಲಕರವಾಗಿದೆ. ವಿಶೇಷವಾಗಿ ಪೀಕ್ ಅವರ್‌ಗಳಲ್ಲಿ ಉದ್ದನೇಯ ಸರತಿ ಸಾಲುಗಳನನ್ಉ ಕಡಿಮೆ ಮಾಡಲು ಈ ಯಂತ್ರಗಳು ಸಹಾಯ ಮಾಡುತ್ತವೆ.












Click it and Unblock the Notifications