Namma Metro: ದರ ಏರಿಕೆ ಶಿಫಾರಸಿನ ಹಿಂದಿನ ಕಥೆ ತಿಳಿಸಿದ ಬಿಜೆಪಿ ಸಂಸದ: ಸಿಎಂಗೆ ಪತ್ರ
ಬೆಂಗಳೂರು, ಫೆಬ್ರವರಿ 13: ಬೆಂಗಳೂರು ನಮ್ಮ ಮೆಟ್ರೋ ದರ ಏರಿಕೆ ಬಿಸಿ ಸಾರ್ವಜನಿಕರಿಗೆ ತಟ್ಟಿದೆ. BMRCL ದರ ಏರಿಕೆ ನಿರ್ಧಾರ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಧ್ಯೆ ಕೆಲವು ಆರೋಪಕ್ಕೂ ಕಾರಣವಾಯಿತು. ಇದೀಗ ಈ ದರ ಏರಿಕೆಗೂ ಮೊದಲು ಆಗಿದ್ದೇನೆ. ಸಮಿತಿ ಶಿಫಾರಸು ಏನು ಎಂದು ತಿಳಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಬೆಂಗಳೂರು ಗ್ರಾಮಾಂತರ ಬಿಜೆಪಿ ಸಂಸದ ಡಾ.ಸಿ.ಎನ್. ಮಂಜುನಾಥ್ ಹೇಳಿದರು.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವಲ್ಲಿ, ವಾಯು ಮಾಲಿನ್ಯಕ್ಕೆ ಪೂರಕವಾಗಿ ನಮ್ಮ ಮೆಟ್ರೋ ಸಾರಿಗೆ ನಿರ್ವಹಣೆ ಮಾಡುತ್ತಿತ್ತು. ಸಾಮಾನ್ಯವಾಗಿದ್ದ ಮೆಟ್ರೋ ದರ ಇತ್ತೀಚೆಗೆ ಸುಮಾರು 40-50% ರಷ್ಟು ಹೆಚ್ಚಿಸಿ ಬೆಂಗಳೂರು ಮೆಟ್ರೋ ರೈಲು ನಿಲ್ದಾಣ ನಿರ್ಧಾರ ಪ್ರಕಟಿಸಿತ್ತು. ಇದರಿಂದ ನಿತ್ಯ ಓಡಾಡುವ ಸುಮಾರು ಲಕ್ಷಾಂತರ ಜನರಿಗೆ ಅನಾನುಕೂಲ ಉಂಟಾಗಿದೆ. ದರ ಏರಿಕೆ ಪರಿಣಾಮ ಪ್ರಯಾಣಿಕರ ಸಂಖ್ಯೆಯು ಕುಸಿತವಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಬರೆದಿದ್ದಾರೆ. BMRCL ಮೆಟ್ರೋ ದರ ಪರಿಷ್ಕರಣೆಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ನಮ್ಮ ಮೆಟ್ರೋ ಕೋರಿಕೆ ಮೇರೆಗೆ ಕೇಂದ್ರ ಸರ್ಕಾರವು ಮೆಟ್ರೋ ಕಾಯ್ದೆ- 2002 ಅಡಿಯಲ್ಲಿ ಶುಲ್ಕ ನಿಗದಿ ಸಮಿತಿ ರಚಿಸಿತು.
ಈ ಸಮಿತಿಗೆ ಮಾಜಿ ಹೈಕೋರ್ಟ್ ನ್ಯಾಯಾಧೀಶರು ಅಧ್ಯಕ್ಷರಾಗಿ, ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮತ್ತು ಕರ್ನಾಟಕ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಸಮಿತಿ ಸದಸ್ಯರಾಗಿದ್ದಾರೆ. ಇವೆಲ್ಲ ಕೂಡಿಕೊಂಡು ದರ ಏರಿಕೆಗೆ ಕಳೆದ ವರ್ಷ 2024ರ ಡಿಸೆಂಬರ್ 16ರಂದು ವರದಿ ಸಲ್ಲಿಸಿದರು. ಈ ವರದಿಯಲ್ಲಿ ಶಿಫಾರಸಿನ ಮೇಲೆ ದರ ಏರಿಕೆ ಮಾಡಲಾಯಿತು ಎಂದು ಅವರು ವಿವರಿಸಿದ್ದಾರೆ.
ದರ ಹೆಚ್ಚಳಕ್ಕೆ ಸಂಸದರ ಆಕ್ಷೇಪ
ವಿದ್ಯಾರ್ಥಿಗಳು, ಕಡಿಮೆ ಆದಾಯದ ಕಾರ್ಮಿಕರು, ನಿತ್ಯ ಮೆಟ್ರೋ ಅವಲಂಬಿಸಿದ ಪ್ರಯಾಣಿಕರಿಗೆ ಕೈಸುಡುವಂತೆ ದರ ಏರಿಕೆ ಮಾಡಿದನ್ನು ಅವರು ಆಕ್ಷೇಪಿಸಿದರು. ಜನರಿಗೆ ಅನಾನಕೂಲವಾಗುವಂತೆ ಸುಮಾರು 40-50% ರಷ್ಟು ಹೆಚ್ಚಿಸಿರುವುದು ಕಳವಳಕಾರಿ ಸಂಗತಿ. ಆದ್ದರಿಂದ ಕೂಡಲೇ ರಾಜ್ಯ ಸರ್ಕಾರ ಜನಸ್ನೇಹಿ ಮೆಟ್ರೋ ದರ ನಿಗಿದ ಕ್ರಮ ಕೈಗೊಂಡು ಖಚಿತಪಡಿಸಬೇಕು. ಏರಿಕೆ ದರ ಪರಿಶೀಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಪ್ರಯಾಣಿಕರಿಗೆ ಹೊರೆಯಾಗದಂತೆ ದರ ನಿಗದಿ ಮಾಡುವಂತೆ ಸೂಕ್ತವಾಗಿ BMRCL ಗೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ. ಇದರೊಂದಿಗೆ ದರ ನಿಗದಿ ಸಮಿತಿ ಮತ್ತೆ ಪುನರ್ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.
ದೇಶದ ಐಟಿ ಬಿಟಿ ಸಿಟಿ ಎಂದು ಬೆಂಗಳೂರು ಗುರುತಿಸಿಕೊಂಡಿದೆ. ಎಲ್ಲ ರಂಗgಳಲ್ಲಿ ಸಾಕಷ್ಟು ಬೆಳವಣಿಗೆ ಆಗಿದೆ. ಜನ ಸಂಖ್ಯೆ ಹೆಚ್ಚಾಗಿದೆ. ಜನರಿಗೆ ವಿಶ್ವಾಸಾರ್ಹ ಸಾರಿಗೆ ಅಗತ್ಯವಿದ್ದ ಸಂದರ್ಭದಲ್ಲಿ 2011ರಲ್ಲಿ ಆರಂಭವಾಗಿದ್ದೇ ನಮ್ಮ ಮೆಟ್ರೋ. ಅಂದಿನಿಂದ ಸೇವೆ ನೀಡುತ್ತಿರುವ ಮೆಟ್ರೋದಲ್ಲಿ ದರ ಏರಿಕೆ ಜನರಿಗೆ ತೊಂದರೆ ಆಗಿ ಪರಿಣಮಿಸಿದೆ ಎಂದು ಹೇಳಿದ್ದಾರೆ.
ಪಟ್ಟು ಸಡಿಲಿಸದ BMRCL
ಬಿಎಂಆರ್‌ಸಿಎಲ್ ದರ ಇಳಿಕೆ ಮಾಡುವುದಾಗಿ ತಿಳಿಸಿದೆ. ಆದರೆ ಏರಿಕೆ ದರದಲ್ಲೇ ಮ್ಯಾನೇಜ್ ಮಾಡಲು ಮುಂದಾಗಿದೆ. ದರ ಏರಿಕೆಯಲ್ಲಿ ಯಾವ ಬದಲಾವಣೆ ಇಲ್ಲ. ಅಗತ್ಯವಿರುವ ಕಡೆ, ಶೇಕಡಾ 90-100 ಹೆಚ್ಚಿರುವ ಕಡೆ ಇಳಿಕೆಗೆ ಕ್ರಮ ವಹಿಸಲಾಗುವುದು ಎಂದಿದೆ. ಇದರಿಂದ ಜನ ಮತ್ತಷ್ಟು ಆಕ್ರೋಶಗೊಂಡಿದ್ದಾರೆ.












Click it and Unblock the Notifications