Namma Metro: ಒಂದೇ ದಿನ 8 ಲಕ್ಷ ಮಂದಿ ಸಂಚಾರ: ಪ್ರಮಾಣಿಕರ ಸಂಖ್ಯೆಯಲ್ಲಿ ಏರಿಕೆ, ಆದಾಯ?
ಬೆಂಗಳೂರು, ಜುಲೈ 28: ಬೆಂಗಳೂರು ನಗರಾದ್ಯಂತ ಸುಮಾರು 73 ಕಿಲೋ ಮೀಟರ್ ಜಾಲ ವ್ಯಾಪಿಸಿಕೊಂಡಿರುವ ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಅಧಿಕ ಆದಾಯ ಗಳಿಸಿದೆ. ಇದಕ್ಕೆ ದೈನಂದಿನ ಪ್ರಮಾಣಿಕ ಸಂಖ್ಯೆಯಲ್ಲಿ ಉಂಟಾದ ಹೆಚ್ಚಳವೇ ಕಾರಣ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
BMRCL ನೀಡಿರುವ ಅಂಕಿ-ಅಂಶಗಳ ಪ್ರಕಾರ, ಕಳೆದ ತಿಂಗಳು ಜೂನ್‌ನಲ್ಲಿ ಸರಾಸರಿ ದೈನಂದಿನ ಪ್ರಮಾಣಿಕರಿಗಿಂತ ಹೆಚ್ಚು ಜನರು ಮೆಟ್ರೋ ರೈಲಿನಲ್ಲಿ ಸಂಚರಿಸಿದ್ದಾರೆ. ನಿರೀಕ್ಷೆಯ ಪ್ರಯಾಣಿಕ ಓಡಾಟ ಕಂಡು ಬಂದಿದೆ. ಈ ಮೂಲಕ ನಮ್ಮ ಮೆಟ್ರೋ ಕಳೆದ ಎಲ್ಲ ಸಲಕ್ಕಿಂತಲೂ ಈ ಭಾರಿ ಹೆಚ್ಚು ಸರಾಸರಿ ದೈನಂದಿನ ಪ್ರಯಾಣಿಕರನ್ನು ದಾಖಲಿಸಿದೆ.

ಕಳೆದ ಜೂನ್‌ನಲ್ಲಿ ಸರಾಸರಿ 7,45,659 ಮಂದಿ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಸಿದ್ದಾರೆ. ಇದರಿಂದಾಗಿ ಮೆಟ್ರೋ ನಿಗಮಕ್ಕೆ ಒಟ್ಟು ಆದಾಯ 58.23 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ.
ಮೊದಲು 7.18 ಲಕ್ಷ ದೈನಂದಿನ ಪ್ರಮಾಣಿಕರ ಸಂಚಾರ
ಜೂನ್ ತಿಂಗಳಿಗೂ ಮೊದಲು ನಮ್ಮ ಮೆಟ್ರೋದ ದೈನಂದಿನ ಗರಿಷ್ಠ ಸರಾಸರಿ ಪ್ರಯಾಣಿಕರ ಸಂಖ್ಯೆ 7.18 ಲಕ್ಷದಷ್ಟಿತ್ತು.ಇದು ಮೇ ತಿಂಗಳಲ್ಲಿ ದಾಖಲಾದ ಪ್ರಯಾಣಿಕ ಸಂಖ್ಯೆಯಾಗಿದೆ. ಇದಕ್ಕು ಮೊದಲು ಅಂದರೆ ಇದೇ ವರ್ಷ ಫೆಬ್ರವರಿ 7.05 ಲಕ್ಷ ಜನರು ಮೆಟ್ರೋ ಬಳಸಿದ್ದರು. ಜನವರಿಯಲ್ಲಿ 7.01 ಲಕ್ಷ ಹಾಗೂ ಕಳೆದ ವರ್ಷ 2023ರ ಡಿಸೆಂಬರ್ ನಲ್ಲಿ 6.88 ಲಕ್ಷ ಪ್ರಯಾಣಿಕರು ನಮ ಮೆಟ್ರೋದಲ್ಲಿ ಓಡಾಡಿದ್ದರು. ಈ ಮೂಲಕ ಸದರಿ ತಿಂಗಳಲ್ಲಿ ಹೆಚ್ಚು ದೈನಂದಿನ ಸವಾರರ ಸಂಖ್ಯೆ ದಾಖಲಾಗಿತ್ತು.
ಜೂನ್‌ನಲ್ಲಿ 2.23 ಕೋಟಿ ಮಂದಿ ಸಂಚಾರ
ಇದೀಗ ಇದೆಲ್ಲವನ್ನು ದಾಟಿ ಅತ್ಯಧಿಕ ಗರಿಷ್ಠ ಪ್ರಮಾಣಿಕರಿಗೆ ಬೆಂಗಳೂರು ಮಟ್ರೋ ರೈಲು ನಿಗಮ (BMRCL) ಸೇವೆ ನೀಡಿದೆ. ಜೂನ್ ತಿಂಗಳಲ್ಲಿ ನಮ್ಮ ಮೆಟ್ರೊದ ದೈನಂದಿನ ಸರಾಸರಿ ಪ್ರಯಾಣಿಕರ ಸಂಖ್ಯೆಯು ಸಾರ್ವಕಾಲಿಕ ದಾಖಲೆ ತಲುಪಿದೆ. ಜೂನ್ ನಲ್ಲಿ ಒಟ್ಟು 2,23,69,774 ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಇದರಿಂದ ನಿಗಮಕ್ಕೆ ಒಟ್ಟು 58.23 ಕೋಟಿ ಆದಾಯ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಒಂದೇ ದಿನ 8 ಲಕ್ಷ ಮಂದಿ ಪ್ರಯಾಣ, ದಾಖಲೆ
ಇನ್ನೂ ಒಂದು ದಿನದಲ್ಲಿ ಪ್ರಯಾಣಿಸಿದ ಗರಿಷ್ಠ ಪ್ರಯಾಣಿಕರ ಸಂಖ್ಯೆ ನೋಡುವುದಾದರೆ, ಕಳೆದ ಜೂನ್ 19 ರಂದು ಒಂದು ದಿನ 8,08,071 ಮಂದಿ ಮೆಟ್ರೋ ಬಳಕೆ ಮಾಡಿದ್ದಾರೆ. ಇದರಿಂದಾಗಿ ಅಂದು ನಿಗಮಕ್ಕೆ 2.51 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ಈ ಮೂಲಕ ನೇರಳೆ ಮಾರ್ಗವನ್ನು ಸಂಪೂರ್ಣವಾಗಿ ತೆರೆದ ಬಳಿಕ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಲಿದೆ ಎಂಬಿ ಬಿಎಂಆರ್‌ಸಿಎಲ್ ನಿರೀಕ್ಷೆ ಹುಸಿಯಾಗಿಲ್ಲ ಎನ್ನಬಹುದು.












Click it and Unblock the Notifications