ನಮ್ಮ ಮೆಟ್ರೋದಲ್ಲಿ ಒಂದೇ ದಿನಕ್ಕೆ 8,26 ಲಕ್ಷ ಪ್ರಯಾಣಿಕರ ಸಂಚಾರ, ದಾಖಲೆ
ಬೆಂಗಳೂರು, ಆಗಸ್ಟ್ 07: ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಕಾರ್ಯಾಚರಣೆ ನಡೆಸುತ್ತಿರುವ ಮೆಟ್ರೋ ರೈಲಿನಲ್ಲಿ ಸಂಚರಿಸುವವರ ಸಂಖ್ಯೆ ಆಗಸ್ಟ್ 06ರಂದು ದಾಖಲೆ ಪ್ರಮಾಣದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಈ ಕುರಿತು ಖುದ್ದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೀಗೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಬಹುದೆಂದು ಊಹಿಸಿಯೇ BMRCL ಮಾರ್ಗಗಳನ್ನು ವಿಸ್ತರಣೆ ಮಾಡುತ್ತಿದೆ. ಕಳೆದ ದಿನ ಎಷ್ಟು ಪ್ರಯಾಣಿಕರು ಓಡಾಡಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರು ನಮ್ಮ ಮೆಟ್ರೋ ಮುಂದಿನ ಸೆಪ್ಟಂಬರ್ ಹೊತ್ತಿಗೆ ಬರೋಬ್ಬರಿ 77 ಕಿಲೋ ಮೀಟರ್ ಜಾಲ ಹೊಂದಿರಲಿದೆ. ಏಕೆಂದರೆ, ಹಸಿರು ಮಾರ್ಗದ ವಿಸ್ತರಣೆಯ ಕೊಂಡಿಯು ಮೆಟ್ರೋ ಜಾಲಕ್ಕೆ ಇನ್ನೂ ಕೆಲವೇ ದಿನಗಳಲ್ಲಿ ಸೇರಿಕೊಳ್ಳಲಿದೆ. ಈ ಖುಷಿ ಒಂದು ಕಡೆಯಾದರೆ, ಮತ್ತೊಂದೆಡೆ ಪ್ರಯಾಣಿಕರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಸಂತಸ ಹಂಚಿಕೊಂಡಿದ್ದಾರೆ.

ಆಗಸ್ಟ್ 6 ರಂದು ಮಂಗಳವಾರ ನಮ್ಮ ಮೆಟ್ರೋ 8,26,883 ಲಕ್ಷ ದೈನಂದಿನ ಪ್ರಯಾಣಿಕರನ್ನು ದಾಖಲಿಸದೆ. ಇದು ಈವರೆಗಿನ ಏಕದ ದಿನದ ಪ್ರಯಾಣಿಕರ ಸಂಖ್ಯೆಯಲ್ಲಿ ಅತಿ ಹೆಚ್ಚು ಎಂದು ಹೇಳಲಾಗಿದೆ. ಈ ಮೂಲಕ ಒಟ್ಟು ಒಟ್ಟಾರೆ ಆಗಸ್ಟ್‌ನಲ್ಲಿ ಮಾಸಿಕ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಆಗುವ ಮುನ್ಸೂಚನೆ ಇದೆ ಎಂದು ತಿಳಿದು ಬಂದಿದೆ.
— ನಮ್ಮ ಮೆಟ್ರೋ (@OfficialBMRCL) August 7, 2024
ಮೆಟ್ರೋ ಬಳಕೆಯಿಂದ ಪರಿಸರಕ್ಕೂ ಕೊಡುಗೆ
ಸಂಚಾರ ದಟ್ಟಣೆಗೆ ಹೆಸರುವಾಸಿಯಾದ ಬೆಂಗಳೂರಲ್ಲಿ ಪರಿಸರ ಸ್ನೇಹಿ ಬೆಳವಣಿಗೆ ಆಗುತ್ತಿದೆ. ಕಾರಣ ವಾಹನಗಳ ಹೆಚ್ಚಾಗುತ್ತಿದ್ದಂತೆ ಕೇವಲ ಟ್ರಾಫಿಕ್ ಮಾತ್ರವಲ್ಲದೇ, ಪರಿಸರದ ಮೇಲೂ ಪ್ರಭಾವ ಬೀರುತ್ತದೆ. ಈ ನಡುವೆ ಜನರು ಯಥೆಚ್ಚವಾಗಿ ನಮ್ಮ ಮೆಟ್ರೋ ನಂತಹ ಸಾರ್ವಜನಿಕ ಸಾರಿಗೆಗಳನ್ನು ಹೆಚ್ಚಾಗಿ ಬಳಸಿದರೆ, ಪರಿಸರಕ್ಕೂ ಕೊಡುಗೆ ನೀಡಬಹುದಾಗಿದೆ.
ಬೆಂಗಳೂರಿನ ಮಹಾನಗರಕ್ಕೆ ನಮ್ಮ ಮೆಟ್ರೋ ಒಂದು ವರದಾನವಾಗಿದೆ. ಕಾರಣವೇನೆಂದರೆ ಮೆಟ್ರೋಗಳು ಹೊಗೆ ಸೂಸದೇ, ಪರಿಸರ ಸ್ನೇಹಿಯಾಗಿ ವಿದ್ಯುತ್ ಆಧಾರದಲ್ಲಿ ಸಂಚಾರ ನಡೆಸುತ್ತವೆ. ಇಂತಹ ಸಾರಿಗೆಯಲ್ಲಿ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಇದರಿಂದ ಪರಿಸರ ಸರಂಕ್ಷಣೆಗೆ ತಡೆಯಲು ನಮ್ಮ ಮೆಟ್ರೋ ಪ್ರಯಾಣಿಕರು ಸಹ ಪಾಲುದಾರರಾಗಿದ್ದಾರೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅಧಿಕಾರಿಗಳು ತಿಳಿಸಿದ್ದಾರೆ.
ಈ ಮೊದಲು ಎಷ್ಟಿತ್ತು ಪ್ರಯಾಣಿಕರ ಓಡಾಟ
ಕಳೆದ ಜೂನ್ ತಿಂಗಳಲ್ಲಿ ಒಂದು ದಿನಕ್ಕೆ 7.45 ಲಕ್ಷ ಪ್ರಯಾಣೀಕರು ಮೆಟ್ರೋದಲ್ಲಿ ಸಂಚರಿಸಿದ್ದರು. ಇದರಿಂದ ನಿಗಮಕ್ಕೆ ಒಟ್ಟು 58 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿತ್ತು. ಇದು ಆಗಸ್ಟ್ 06ಕ್ಕಿಂತಲೂ ಪೂರ್ವದ ದಾಖಲೆ ಆಗಿತ್ತು. ಅದಕ್ಕು ಮೊದಲು 7.18, ಅದಕ್ಕಿಂತ ಪೂರ್ವದಲ್ಲಿ 7.01ಲಕ್ಷ ದೈನಂದಿನ ಪ್ರಯಾಣಿಕರು ಮೆಟ್ರೋದಲ್ಲಿ ಓಡಾಡುತ್ತಿದ್ದರು.












Click it and Unblock the Notifications