ಬೆಂಗಳೂರು: ಮೆಟ್ರೋದಲ್ಲಿ ಮದುವೆ ಮಂಟಪ ತಲುಪಿದ ವಧು, ವಿಡಿಯೋ ಭಾರೀ ವೈರಲ್-ಪ್ರತಿಕ್ರಿಯೆಗಳು ಹೇಗಿವೆ ಗೊತ್ತಾ?
ಬೆಂಗಳೂರು, ಜನವರಿ, 28: ಬೆಂಗಳೂರು ಮೊದಲೇ ಟ್ರಾಫಿಕ್ ಜಾಮ್‌ಗೆ ಹೆಸರುವಾಸಿ. ಅದರಲ್ಲೂ ಯಾವುದೇ ಶುಭಕಾರ್ಯಗಳಿಗೆ ಈ ನಗರದಿಂದ ಬೇರೆಡೆಗೆ ಸಮಯಕ್ಕೆ ಸರಿಯಾಗಿ ಹೋಗಬೇಕೆಂದರೆ 2 ಗಂಟೆ ಮುಂಚೆಯೇ ತಮ್ಮ ನಿರ್ಗಮನ ಸ್ಥಳದಿಂದ ಬಿಡಬೇಕಾಗುತ್ತದೆ. ಇದೀಗ ವಧುವೊಬ್ಬರು ಟ್ರಾಫಿಕ್‌ನಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ತನ್ನ ಸ್ವಂತ ಕಾರು ಬಿಟ್ಟು ಮೆಟ್ರೋದಲ್ಲಿ ಪ್ರಯಾಣ ಮಾಡಿ ಮದುವೆ ಮಂಟಪಕ್ಕೆ ತಲುಪಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಬೆಂಗಳೂರಿನಲ್ಲಿ ವಧು ತನ್ನ ಕಾರನ್ನು ಡಿಚ್ ಮಾಡಿ ಸಾರ್ವಜನಿಕ ಸಾರಿಗೆಯನ್ನು ಬಳಸಿ ತನ್ನ ಮದುವೆಗೆ ಸಮಯಕ್ಕೆ ಸರಿಯಾಗಿ ತಲುಪಿದ್ದಾಳೆ. ಬೆಂಗಳೂರಿನ ಟ್ರಾಫಿಕ್ ತಪ್ಪಿಸಲು ಮೆಟ್ರೋ ಹತ್ತಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದಕ್ಕೆ ಜನರಿಂದ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಇನ್ನು ಈ ವಿಡಿಯೋವನ್ನು ಫಾರೆವರ್ ಬೆಂಗಳೂರು ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಭಾರೀ ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡ ಸ್ಮಾರ್ಟ್ ಬೆಂಗಳೂರು ವಧು ತನ್ನ ಕಾರಿನ ಬದಲು ಮದುವೆಯ ಮುಹೂರ್ತದ ಸಮಯಕ್ಕೆ ಮುಂಚೆಯೇ ಮದುವೆಯ ಮಂಟಪವನ್ನು ತಲುಪಲು ಮೆಟ್ರೋವನ್ನು ತೆಗೆದುಕೊಳ್ಳುತ್ತಾಳೆ.
ಮೆಟ್ರೋದ ಸ್ವಯಂಚಾಲಿತ ಪ್ರವೇಶ ಗೇಟ್ ಮೂಲಕ ಹಾದುಹೋಗುವಾಗ ವಧು ಕ್ಯಾಮರಾ ಕಡೆಗೆ ಕೈ ಬೀಸುತ್ತಿರುವ ವೀಡಿಯೊ ಇದೀಗ ಭಾರೀ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ವಧು ಲಕ..ಲಕ ಮಿಂಚುವ ಸೀರೆ, ಭಾರೀ ಆಭರಣಗಳು ಮತ್ತು ಮೇಕ್ಅಪ್ ಹಾಕಿಕೊಂಡು ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವುದು ಕಂಡುಬಂದಿದೆ. ನಂತರ ಅವಳು ಮದುವೆಯ ಸ್ಥಳಕ್ಕೆ ಆಗಮಿಸಿದ್ದು, ಸಮಾರಂಭದಲ್ಲಿ ಪಾಲ್ಗೊಳ್ಳಲು ವೇದಿಕೆಯ ಮೇಲೆ ಆಸನವನ್ನು ಅಲಂಕರಿಸುತ್ತಾಳೆ.
ಈ ವೀಡಿಯೊವನ್ನು ಜನವರಿ 16ರಂದು ಹಂಚಿಕೊಳ್ಳಲಾಗಿದೆ. ಹಂಚಿಕೊಂಡ ನಂತರ, ಇದನ್ನು 20,000ಕ್ಕೂ ಹೆಚ್ ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಇನ್ನು ಕೂಡ ಈ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಕೆಲವರು ತಮ್ಮ ಆಲೋಚನೆಗಳಿಹೆ ತಕ್ಕಂತೆ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.












Click it and Unblock the Notifications