Namma Metro 3rd phase: ರಾಜ್ಯ ಬಜೆಟ್‌ನಲ್ಲಿ BMRCL ಕೇಳಿದ ಅನುದಾನ ಎಷ್ಟು?
ಬೆಂಗಳೂರು, ಫೆಬ್ರವರಿ 15: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಫೆಬ್ರವರಿ 16ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ವಿವಿಧ ಕ್ಷೇತ್ರಗಳಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಸಹ ನಮ್ಮ ಮೆಟ್ರೋ (Namma metro 3rd Phase) ಮೂರನೇ ಹಂತಕ್ಕೆ ಅನುದಾನ ಬೇಡಿಕೆ ಇಟ್ಟಿದೆ. ಅದರ ಅಂಕಿ-ಸಂಖ್ಯೆ ಮಾಹಿತಿ ಇಲ್ಲಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL)ವು ರಾಜ್ಯ ಸರ್ಕಾರಕ್ಕೆ ಬಜೆಟ್‌ನಲ್ಲಿ ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಗೆ 1000 ಕೋಟಿ ರೂಪಾಯಿ ಅನುದಾನ ಘೋಷಿಸುವಂತೆ ಮನವಿ ಮಾಡಿದೆ. ಯೋಜನೆಯ ಕಾಮಕಾರಿ ಆರಂಭಿಸಲು ಸಿದ್ಧತೆ ಸಹ ನಡೆಸಿದೆ ಎಂದು ವರದಿ ಆಗಿದೆ.

ಈ ನಮ್ಮ ಮೆಟ್ರೋ ಮಾರ್ಗವು ಒಟ್ಟು 44 ಕಿಲೋ ಮೀಟರ್ ಉದ್ದವಿದೆ. ಇದರಲ್ಲಿ ಜೆಪಿ ನಗರ-ಕೆಂಪಾಪುರ (32 ಕಿಮೀ) ಹಾಗೂ ಹೊಸಹಳ್ಳಿಯಿಂದ ಕಡುಬಗೆರೆಯಿಂದ ಕಡುಬಗೆರೆವರೆಗೆ (12 ಕಿಮೀ) ಹೊಸ ಮಾರ್ಗ ನಿರ್ಮಾಣದ ಯೋಜನೆಗಳಾಗಿವೆ. ಇದರಲ್ಲಿ ಒಂದು ಮಾರ್ಗ ರಿಂಗ್ ರಸ್ತೆಗೆ ಸಂಪರ್ಕಿಸಿದರೆ, ಮತ್ತೊಂದು ಮಾರ್ಗ ರಸ್ತೆ ಮಾರ್ಗವಾಗಿ ನಿರ್ಮಾಣಗೊಳ್ಳಲಿದೆ.
ಮೆಟ್ರೋ 3ನೇ ಹಂತದ ಯೋಜನೆಗೆ ಕೇಂದ್ರ ಅನುಮೋದನೆ?
ಮಾಗಡಿ ರಸ್ತೆ ಮಾರ್ಗದ ಕಾರಿಡಾರ್ ಡಿಪಿಆರ್ ಬಹುಬೇಗ ಸಿದ್ಧಗೊಳ್ಳಲಿಲ್ಲ. 6 ಬೋಗಿ ಕೋಚ್ ಸಂಚಾರ ಸೇರಿದಂತೆ ಡಿಪಿಆರ್‌ನಲ್ಲಿ ಕೆಲವು ಅಂಶಗಳನ್ನು ಪರಿಷ್ಕರಿಸಿ ಕೇಂದ್ರಕ್ಕೆ ಕಳಹಿಸಲಾಗಿತ್ತು. 2022ರ ಅಂತ್ಯದ ವೇಳೆಗೆ ನಮ್ಮ ಮೆಟ್ರೋ ಈ ಹಂತದ ಸಮಗ್ರ ಯೋಜನಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಸಣ್ಣ ಪುಟ್ಟ ಬದಲಾವಣೆ ಗಳ ನಂತರ ನಿರಂತರ ಚರ್ಚೆಗಳ ಬಳಿಕ ಇದೀಗ ಡಿಪಿಆರ್‌ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡುವ ಸಾಧ್ಯತೆಗಳು ಕಂಡು ಬರುತ್ತಿವೆ.
ಕೇಂದ್ರ ಅನುಮೋದನೆ ನೀಡಲಿದೆ. ನಾವು ಯೋಜನೆಗೆ ಸಂಬಂಧಿಸಿದಂತೆ ಕಾಮಗಾರಿ ಆರಂಭಿಸಿಲು ಸಿದ್ಧತೆ ಮಾಡಿಕೊಳ್ಳಬೇಕಿದೆ. ಅದಕ್ಕಾಗಿ 1000 ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂಎಸ್ ಚನ್ನಪ್ಪಗೌಡರು ಕೋರಿದ್ದಾರೆ.
a

ಭೂಸ್ವಾಧೀನದಂತಹ ಕೆಲಸಗಳಿಗೆ ಅನುದಾನ ಬೇಕಿದೆ
ಯೋಜನೆಗೆ ಆರಂಭಕ್ಕೂ ಮೊದಲಿನ ಪ್ರಕ್ರಿಯೆಗಳನ್ನು ತ್ವರಿತಗತಿಯಲ್ಲಿ ನಡೆಸಬೇಕಿದೆ. ಭೂಸ್ವಾಧೀನಕ್ಕಾಗಿ ಸ್ಥಳ ಗುರುತಿಸಲಾಗಿದೆ. ಜೆಪಿ ನಗರ ನಾಲ್ಕನೇ ಹಂತ ಹಾಗೂ ಮೈಸೂರು ರಸ್ತೆ ಮಧ್ಯೆ ನಿಲ್ದಾಣಗಳು, ಮೇಲ್ಸೇತುವೆ ಕಾರಿಡಾರ್ ನಿರ್ಮಾಣಕ್ಕೆ ಜಾಗ ಗುರಿತಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಬೇಕಿದೆ. ಇದಕ್ಕೆಲ್ಲ ಅನುದಾನದ ಅಗತ್ಯತೆ ಇದೆ ಎಂದು ಅವರು ಮನವಿ ಮಾಡಿದ್ದಾರೆ.
ಇನ್ನೂ ಮೆಟ್ರೋ ಯೋಜನೆ ಕಾಮಗಾರಿ ಪೂರ್ವ ಪ್ರಕ್ರಿಯೆ ಪೂರ್ಣಗೊಳ್ಳಲು ಸುಮಾರು ಎಂಟತ್ತು ತಿಂಗಳು ಹಿಡಿಯಲಿದೆ. ಬಳಿಕವೇ ಯೋಜನೆಯ ಸಿವಿಲ್ ಕೆಲಸಗಳು ನಡೆಯಲಿವೆ. ಆದ್ದರಿಂದ ಸರ್ಕಾರ ನಮ್ಮ ಮನವಿಗೆ ಪುರಸ್ಕರಿಸಬೇಕು ಎಂದು ಅವರು ಪುನರುಚ್ಚರಿಸಿದರು.
ಎರಡು ಮಾರ್ಗ ಹೊಂದಿರುವ ಈ ಬೃಹತ್ ಯೋಜನೆಯಲ್ಲಿ ಡಿಪಿಆರ್ ಪ್ರಕಾರ, ಒಟ್ಟು 31 ನಿಲ್ದಾಣಗಳು ನಿರ್ಮಾಣವಾಗಲಿದೆ. ರಾಜ್ಯ ಸರ್ಕಾರ ಅನುದಾನ ಘೋಷಣೆ ಬಳಿಕ ತ್ವರಿತಗತಿಯಲ್ಲಿ ಯೋಜನೆಯ ಕೆಲಸಗಳು ಆರಂಭವಾಗುವ ನಿರೀಕ್ಷೆ ಇದೆ.












Click it and Unblock the Notifications