Namma Metro: ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್ ಕೊಟ್ಟ ಬೊಮ್ಮಾಯಿ

ಬೆಂಗಳೂರು ಮೆಟ್ರೋ ರೈಲು ಯೋಜನೆಯ 3ನೇ ಹಂತದ ಅಡಿಯಲ್ಲಿ ಸರ್ಕಾರ 4 ಹೊಸ ಮೆಟ್ರೋ ಕಾರಿಡಾರ್‌ಗಳನ್ನು ಪರಿಚಯಿಸುತ್ತಿದೆ.

ಬೆಂಗಳೂರು ಮಾರ್ಚ್ 17: ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಸಂತಸದ ಸುದ್ದಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊಟ್ಟಿದ್ದಾರೆ. ಬೆಂಗಳೂರು ಮೆಟ್ರೋ ರೈಲು ಯೋಜನೆಯ 3ನೇ ಹಂತದ ಅಡಿಯಲ್ಲಿ ಸರ್ಕಾರ 4 ಹೊಸ ಮೆಟ್ರೋ ಕಾರಿಡಾರ್‌ಗಳನ್ನು ಪರಿಚಯಿಸುತ್ತಿದೆ. ಈ ಯೋಜನೆಯು ಬೆಂಗಳೂರಿನ ಪ್ರತಿಯೊಬ್ಬ ನಾಗರಿಕರಿಗೂ ಅವರ 1-2 ಕಿಮೀ ವ್ಯಾಪ್ತಿಯೊಳಗೆ ಮೆಟ್ರೋ ನಿಲ್ದಾಣ ತಲುಪಲು ಸಹಾಯಕವಾಗಿದೆ.

2032 ರ ವೇಳೆಗೆ ಬೆಂಗಳೂರಿನ ಎಲ್ಲಾ ನಾಗರಿಕರು ತಮ್ಮ ನಿವಾಸ ಅಥವಾ ಕೆಲಸದ ಸ್ಥಳದಿಂದ 1-2 ಕಿಮೀ ವ್ಯಾಪ್ತಿಯೊಳಗೆ ಮೆಟ್ರೋ ತಲುಪಲು ನಾಲ್ಕು ಹೊಸ ಮೆಟ್ರೋ ಲೈನ್ ಯೋಜನೆಗಳನ್ನು ಘೋಷಿಸಿದೆ. ಹೀಗೆಂದು ಕರ್ನಾಟಕದ ಯೋಜನೆ, ಕಾರ್ಯಕ್ರಮಗಳ ಮೇಲ್ವಿಚಾರಣೆ ಮತ್ತು ಅಂಕಿಅಂಶಗಳು ಮತ್ತು ಉದ್ಯಮ ಸಂಸ್ಥೆಯಾದ FICCI ಯ (ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ & ಇಂಡಸ್ಟ್ರೀಸ್) ಕ್ರಿಯಾ ಯೋಜನೆ ತಿಳಿಸಿದೆ. ಪ್ರಸ್ತುತ 51 ನಿಲ್ದಾಣಗಳಲ್ಲಿ 40 ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಮಿತಿಯಲ್ಲಿವೆ.

Namma Metro: Basavaraj Bommai gave good news to Bangalore metro passengers

ಇದು 44.6 ಕಿಮಿ ವ್ಯಾಪ್ತಿಯ ಮಾರ್ಗವಾಗಿದೆ. ಸರ್ಕಾರ ವೈಟ್‌್ಫೀಲ್ಡ್‌ಯಿಂದ ಹೊಸಕೋಟೆ, ಬನ್ನೇರುಘಟ್ಟದಿಂದ ಜಿಗಿಣಿ, ಎಂಜಿ ರೋಡ್‌ ನಿಂದ ಫರ್ಮ್ ಜಂಕ್ಷನ್, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಾಗಾವರದವರೆಗೆ ನಾಲ್ಕು ಹೊಸ ಮೆಟ್ರೋ ಲೈನ್ ಯೋಜನೆಯನ್ನು ಪರಿಚಯಿಸಲಿದೆ.

ವಿಸ್ತರಣೆಗಳಲ್ಲಿ 6 ಕಿಮೀ ಮಾರ್ಗ (ವೈಟ್‌ಫೀಲ್ಡ್ - ಕಟಮನಲ್ಲೂರು/ಹೊಸಕೋಟೆ) ರೂ. 2,400 ಕೋಟಿ ಮತ್ತು 12 ಕಿ.ಮೀ ಲೈನ್ (ಬನ್ನೇರುಘಟ್ಟದಿಂದ ಜಿಗಣಿ) ರೂ. 4,800 ಕೋಟಿ ಅಂದಾಜು ವೆಚ್ಚದಲ್ಲಿ ಸೇರಿವೆ. ನಮ್ಮ ಮೆಟ್ರೋ ಪ್ರಸ್ತುತ 56 ಕಿ.ಮೀ. "ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಅನ್ನು KIA ಗೆ ಸಂಪರ್ಕಿಸುವ ಮೆಟ್ರೋ ರೈಲು ಯೋಜನೆಯ ಕೆಲಸಗಳು ನಡೆಯುತ್ತಿವೆ. 2023 ರೊಳಗೆ 40.1 ಕಿಮೀ ಮೆಟ್ರೋ ಮಾರ್ಗವನ್ನು ಕಾರ್ಯಗತಗೊಳಿಸುವ ಗುರಿ ಇದೆ" ಎಂದು ವರದಿಗಳು ಹೇಳುತ್ತವೆ.

32.15 ಕಿಲೋಮೀಟರ್ ವ್ಯಾಪ್ತಿ

ಕಾರಿಡಾರ್ 1 ರಲ್ಲಿ 32.15 ಕಿಲೋಮೀಟರ್ ವ್ಯಾಪ್ತಿಗೆ 22 ನಿಲ್ದಾಣಗಳು ಇರುತ್ತವೆ: ಜೆಪಿ ನಗರ 4 ನೇ ಹಂತ, ಜೆಪಿ ನಗರ 5 ನೇ ಹಂತ, ಜೆಪಿ ನಗರ, ಕದಿರೇನಹಳ್ಳಿ, ಕಾಮಕ್ಯ ಜಂಕ್ಷನ್, ಹೊಸಕೆರೆಹಳ್ಳಿ, ದ್ವಾರಕಾ ನಗರ, ಮೈಸೂರು ರಸ್ತೆ, ನಾಗರಭಾವಿ ವೃತ್ತ, ವಿನಾಯಕ ನಗರ ಬಡಾವಣೆ, ಬಿ.ಡಿ.ಎ.ನಗರ ಬಡಾವಣೆ, ಬಿ.ಡಿ.ಎ, ಸುಮನಹಳ್ಳಿ ಕ್ರಾಸ್, ಚೌಡೇಶ್ವರಿ ನಗರ, ಸ್ವಾತಂತ್ರ್ಯ ಹೋರಾಟಗಾರರ ಕಾಲೋನಿ, ಕಂಠೀರವ ನಗರ, ಪೀಣ್ಯ, ಮುತ್ಯಾಲ ನಗರ, ಬಿಇಎಲ್ ಸರ್ಕಲ್, ನಾಗಶೆಟ್ಟಿ ಹಳ್ಳಿ, ಹೆಬ್ಬಾಳ ರೈಲು ನಿಲ್ದಾಣ ಮತ್ತು ಕೆಂಪಾಪುರ ನಿಲ್ದಾಣಗಳು ಬರುತ್ತವೆ.

12.5 ಕಿಲೋಮೀಟರ್‌ಗಳಲ್ಲಿ ಒಂಬತ್ತು ನಿಲ್ದಾಣ

ಕಾರಿಡಾರ್ 2 12.5 ಕಿಲೋಮೀಟರ್‌ಗಳಲ್ಲಿ ಒಂಬತ್ತು ನಿಲ್ದಾಣಗಳನ್ನು ಹೊಂದಿರುತ್ತದೆ: ಹೊಸಹಳ್ಳಿ, ಕೆಎಚ್‌ಬಿ ಕಾಲೋನಿ, ಕಾಮಾಕ್ಷಿಪಾಳ್ಯ, ಸುಮನಹಳ್ಳಿ ಕ್ರಾಸ್, ಸುಂಕದಕಟ್ಟೆ, ಹೇರೋಹಳ್ಳಿ, ಬ್ಯಾಡರಹಳ್ಳಿ, ಕಾಮತ್ ಲೇಔಟ್ ಮತ್ತು ಕಡಬಗೆರೆ. ಬಾಹ್ಯ ನೆರವಿನ ಮೂಲಕ ಒಟ್ಟು ವೆಚ್ಚದ ಶೇ.60 ರಷ್ಟು ಹೆಚ್ಚಿಸಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. 40 ರಷ್ಟು ಯೋಜನಾ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಾನವಾಗಿ ಭರಿಸಲಿವೆ. ಈ ಹಂತವು 2028 ರ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.ಈ ಹಂತವು ಎರಡು ರಸ್ತೆ-ಕಮ್-ಮೆಟ್ರೋ ಮೇಲ್ಸೇತುವೆಗಳ ನಿರ್ಮಾಣವನ್ನು ಒಳಗೊಂಡಿದೆ. ಒಂದು ಕನಕಪುರ ರಸ್ತೆ ಜಂಕ್ಷನ್ ಮತ್ತು ಸಾರಕ್ಕಿ ಜಂಕ್ಷನ್ ಮತ್ತು ಇನ್ನೊಂದು ಕಾಮಕ್ಯ - ಇಟ್ಟಮಡು - ಹೊಸಕೆರೆಹಳ್ಳಿ ಜಂಕ್ಷನ್ ನಡುವೆ ಇದೆ.

Namma Metro: Basavaraj Bommai gave good news to Bangalore metro passengers

16328 ಕೋಟಿ ರೂ.ಗಳ ಅಂದಾಜು ವೆಚ್ಚ

16328 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ, ಹಂತ 3 ಎರಡು ಕಾರಿಡಾರ್‌ಗಳೊಂದಿಗೆ 44.65 ಕಿಮೀಗಳನ್ನು ಸಂಪರ್ಕಿಸುತ್ತದೆ. ಒಂದು ಹೊರವರ್ತುಲ ರಸ್ತೆಯ ಪಶ್ಚಿಮದಲ್ಲಿ ಮತ್ತು ಎರಡನೆಯದು ಮಾಗಡಿ ರಸ್ತೆಯ ಮೂಲಕ. ಕಾರಿಡಾರ್-1 ಜೆಪಿ ನಗರದ 4ನೇ ಹಂತದಿಂದ ಕೆಂಪಾಪುರವರೆಗೆ ಹಾಗೂ 2ನೇ ಕಾರಿಡಾರ್ ಹೊಸಹಳ್ಳಿಯಿಂದ ಕಡಬಗೆರೆವರೆಗೆ ಇರಲಿದೆ ಎಂದು ಸಚಿವರು ಸದನಕ್ಕೆ ತಿಳಿಸಿದರು.

"ಹಿಂದಿನ ಬಜೆಟ್‌ನಲ್ಲಿ, ಮೆಟ್ರೋ ಜಾಲಕ್ಕೆ ಸಂಬಂಧಿಸಿದ ಮೂರನೇ ಹಂತದ ಕಾಮಗಾರಿಗಳನ್ನು ಪ್ರಸ್ತಾಪಿಸಲಾಗಿತ್ತು. 31 ನಿಲ್ದಾಣಗಳೊಂದಿಗೆ 2 ಕಾರಿಡಾರ್‌ಗಳಿಗೆ (ಜೆಪಿ ನಹರ್ 4 ನೇ ಹಂತ-ಕೆಂಪಾಪುರ ಒಆರ್‌ಆರ್ ಪಶ್ಚಿಮ ಮತ್ತು ಮಾಗಡಿ ರಸ್ತೆಯ ಹೊಸಹಳ್ಳಿ-ಕಡಬಗೆರೆ) ವಿಸ್ತೃತ ಯೋಜನಾ ವರದಿ 44.6 ಕಿಮೀ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ.ಯೋಜನೆಯ ಅಂದಾಜು ವೆಚ್ಚ 16,328 ಕೋಟಿ ರೂಪಾಯಿಗಳಾಗಿದ್ದು, GOI ಯಿಂದ ಅನುಮೋದನೆ ಪಡೆದ ನಂತರ ಕೆಲಸ ಪ್ರಾರಂಭವಾಗಲಿದೆ ಎಂದು ವರದಿಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+