ನಮ್ಮ ಮೆಟ್ರೋ: ಹೊಸ ತಂತ್ರಜ್ಞಾನದಿಂದ ಸುರಂಗ ಕಾಮಗಾರಿ ಯಶಸ್ವಿ: BMRCL
ಬೆಂಗಳೂರು, ಮೇ 30: ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲೂ ಮೆಟ್ರೋ ಜಾಲವನ್ನು ವಿಸ್ತರಣೆ ಆಗುತ್ತಿದೆ. ಈ ಸಲುವಾಗಿ ಹಲವೆಡೆ ಭೂಗತ ಮಾರ್ಗ ನಿರ್ಮಾಣ ಕಾರ್ಯ ನಡೆಸುತ್ತಿರುವ BMRCL ಇದೇ ಮೊದಲ ಬಾರಿಗೆ ತನ್ನ ಕೆಲಸಕ್ಕೆ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) 21 ಕಿಲೋ ಮೀಟರ್ ಉದ್ದದ ಕಾಳೇನಅಗ್ರಹ-ನಾಗವಾರ ಮಾರ್ಗದ ಸುರಂಗ ಕಾರ್ಯದಲ್ಲಿ ತೊಡಗಿದೆ. ಇಲ್ಲಿ ಸುರಂಗದ ಕೆಲಸಕ್ಕಾಗಿ 'ಬಾಕ್ಸ್ ಪುಶಿಂಗ್ ತಂತ್ರಜ್ಞಾನ' ವನ್ನು ಇದೇ ಮೊದಲ ಬಾರಿಗೆ ಬಳಸಿ ಯಶಸ್ವಿಯಾಗಿದ್ದೇವೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಸುಮಾರು 77ಮೀಟರ್ ಉದ್ದದ ಹೊರ ವರ್ತುಲ ರಸ್ತೆ (ORR) ಕೆಳಗೆ ಮೆಟ್ರೋ ಮಾರ್ಗಕ್ಕಾಗಿ ಸುರಂಗ ಕೊರೆಯಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಈ ಸುರಂಗ ಕೆಲಸಕ್ಕೆ 'ಬಾಕ್ಸ್ ಪುಶಿಂಗ್ ತಂತ್ರಜ್ಞಾನ'ವನ್ನು ಬಳಸಲಾಗಿದೆ.
ಸುರಂಗ ಕಾರ್ಯ ಯಶಸ್ವಿ: BMRCL
ನಾಗವಾರ ಅಂಡರ್‌ಗ್ರೌಂಡ್ ನಿಲ್ದಾಣದ ದಕ್ಷಿಣ ಭಾಗದಲ್ಲಿ ಸರ್ವಿಸ್ ರಸ್ತೆ ಮತ್ತು ORR ನ ಮೇಲ್ಸೇತುವೆಯ ಕೆಳಗೆ 77ಮೀಟರ್ ಸುರಂಗವನ್ನು ಯಶಸ್ವಿಯಾಗಿ ನಿರ್ಮಿಸಲಾಗಿದೆ. 'ಬಾಕ್ಸ್ ಪುಶಿಂಗ್ ತಂತ್ರಜ್ಞಾನ' ಕಾಮಗಾರಿ ಪೂರ್ಣಗೊಂಡಿದೆ ಎಂದು ತಿಳಿಸಿದ್ದಾರೆ.
ಈವರೆಗೆ ಮೆಟ್ರೋ ಸುರಂಗವನ್ನು ಟನಲ್ ಬೋರಿಂಗ್ ಮಷಿನ್ (ಟಿಬಿಎಂ) ಮೂಲಕ ಕೊರೆಯಲಾಗುತ್ತಿತ್ತು. ಇದು ಗೋಲಾಕಾರದಲ್ಲಿ ಕಂಡು ಬಂದರೆ, ಸದ್ಯದ 'ಬಾಕ್ಸ್ ಪುಶಿಂಗ್ ತಂತ್ರಜ್ಞಾನ' ದಿಂದ ನಡೆದ ಸುರಂಗವು ಆಯತಾಕಾರದಲ್ಲಿ, ಬಾಕ್ಸ್ ರೀತಿಯಲ್ಲಿ ಕಾಣಿಸುತ್ತದೆ. ಇದೊಂದು ಹೊಸ ಪ್ರಯತ್ನ ಎಂದು ಬಿಎಂಆರ್‌ಸಿಎಲ್ ಹೇಳಿಕೊಂಡಿದೆ.

ಪಿಂಕ್ ಲೈನ್ 2025ರಲ್ಲಿ ಪೂರ್ಣ ನೀರಿಕ್ಷೆ
ಮೆಟ್ರೋ ಪಿಂಕ್ ಲೈನ್ ಮಾರ್ಗವು ಸಿಲ್‌ಬೋರ್ಡ್ ಜಂಕ್ಷನ್-ವಿಮಾನ ನಿಲ್ದಾಣ ಸಂಪರ್ಕಿಸುವ ನೀಲಿ ಮಾರ್ಗದ ಒಂದು ಬದಿ ನಾಗವಾರದಿಂದ ಆರಂಭವಾಗುತ್ತದೆ. ಅಲ್ಲಿಂದ ಕಾಳೇನ ಅಗ್ರಹಾರದವರೆಗೆ ಪಿಂಕ್ ಲೈನ್ 21 ಕಿಮೀ ಇದೆ. ಸದ್ಯ ಭೂಗತ ಕಾರ್ಯ, ಸಿವಿಲ್ ಕೆಲಸಗಳು ಒಂದೊಂದಾಗೆ ಪೂರ್ಣಗೊಳ್ಳುತ್ತಿವೆ.
ಎಲ್ಲವು ಅಂದುಕೊಂಡಂತಾದರೆ ಮುಂದಿನ ವರ್ಷ 2025ರಲ್ಲಿ ಯೋಜನೆ ಪೂರ್ಣಗೊಳಿಸಲಿದ್ದೇವೆ. ಈ ಮಾರ್ಗ ಪೂರ್ಣಗೊಂಡರೆ 117 ಕಿಲೋ ಮೀಟರ್‌ಗೆ ಮೆಟ್ರೋ ಜಾಲ ವಿಸ್ತರಣೆ ಆಗಲಿದೆ. ಇದರೊಂದಿಗೆ ಸುಮಾರು ರೂ.14000 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ರೇಷ್ಮೆ ಮಂಡಳಿ ಮತ್ತು ಕೆಇಎ ವಿಮಾನ ನಿಲ್ದಾಣ ಸಂಪರ್ಕಿಸುವ ನೀಲಿ ಮಾರ್ಗವನ್ನು 2026ರಲ್ಲಿ ಪೂರ್ಣಗೊಳಿಸಲು BMRCL ಅಧಿಕಾರಿಗಳು ಪ್ಲಾನ್ ಮಾಡಿಕೊಂಡಿದ್ದಾರೆ.
ನೀಲಿ ಮಾರ್ಗ ಕೆಲಸ ಮುಗಿದು ವಾಣಿಜ್ಯ ಕಾರ್ಯಾಚರಣೆ ಆರಂಭವಾದರೆ, ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಜಾಲ ಬರೋಬ್ಬರಿ 176ಕಿಲೋ ಮೀಟರ್ ವರೆಗೆ ಸೇವೆ ನೀಡಲು ಸಿದ್ಧವಾದಂತಾಗುತ್ತದೆ.
ಇದೇ ರೀತಿ ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ. ಅದಕ್ಕಾಗಿ ಭೂಮಿ ಸ್ವಾಧೀನ ಕೆಲಸ, ಸಿವಿಲ್ ಕೆಲಸ ಆರಂಭ ಶೀಘ್ರವೇ ಆಗಲಿದೆ. ಇದು ಮೂರು ಕಾರಿಡಾರ್ ನಲ್ಲಿ ನಿರ್ಮಾಣವಾಗಲಿದೆ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications