Namma metro: 3ನೇ ಹಂತದ ಕಾಮಗಾರಿ ಆರಂಭ, ಅಪ್ಡೇಟ್ ಮಾಹಿತಿ
ಬೆಂಗಳೂರು, ಜನವರಿ 12: ಬೆಂಗಳೂರಿನಲ್ಲಿ ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಸೇವೆ ನೀಡುತ್ತಿರುವ ನಮ್ಮ ಮೆಟ್ರೋ ಮಾರ್ಗಗಳ ವಿಸ್ತರಣೆ ಕಾರ್ಯ, ಹೊಸ ಮಾರ್ಗ ನಿರ್ಮಣ ಭರದಿಂದ ಸಾಗುತ್ತಿದೆ. ಈ ಮಧ್ಯೆ ಮೆಟ್ರೋ 3ನೇ ಹಂತದ ಕಾಮಗಾರಿಯ ಅಪ್ಡೇಟ್ ಸಿಕ್ಕಿದೆ.
ಒಟ್ಟು 81.12 ಕಿಮೀ ಉದ್ದದ ಈ ನಮ್ಮ ಮೆಟ್ರೋ 3ನೇ ಹಂತದ ಯೋಜನೆಯು ಒಟ್ಟು ಮೂರು ಕಾರಿಡಾರ್‌ಗಳಲ್ಲಿ ನಿರ್ಮಾಣಕ್ಕೆ ಸಜ್ಜಾಗಿದೆ. ನಮ್ಮ ಮೆಟ್ರೊ 3ನೇ ಹಂತದ ಕಾಮಗಾರಿ ಇದೇ ವರ್ಷ ಆರಂಭವಾಗಬಹುದು ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.

ಈ ಹಂತದಲ್ಲಿ ಮೂರು ಕಾರಿಡಾರ್ ಇವೆ. ಅದರಲ್ಲಿ ಮೊದಲ ಕಾರಿಡಾರ್ 'ಜೆಪಿ ನಗರ' ನಾಲ್ಕನೇ ಹಂತದಿಂದ 22 ನಿಲ್ದಾಣಗಳೊಂದಿಗೆ 'ಕೆಂಪಾಪುರ' (32.15 ಕಿಮೀ) ವರೆಗೆ ಮೆಟ್ರೋ ಸಂಪರ್ಕವನ್ನು ಪ್ರಸ್ತಾಪಿಸಲಾಗಿದೆ. ಎರಡನೇ ಕಾರಿಡಾರ್ ಹೊಸಹಳ್ಳಿ-ಮಾಗಡಿ ರಸ್ತೆ ನಿಲ್ದಾಣದಿಂದ ಕಡಬಗೆರೆವರೆಗೆ ವ್ಯಾಪಿಸಿದೆ. ಇದರಲ್ಲಿ ಒಟ್ಟು 9 ನಿಲ್ದಾಣಗಳು ಬರುತ್ತವೆ.
ಕೇಂದ್ರದ ಅನುಮತಿ ಕೋರಿದ ನಮ್ಮ ಮೆಟ್ರೋ
12 ಕಿ.ಮೀ. ಮೂರನೇ ಕಾರಿಡಾರ್ ಸರ್ಜಾಪುರದಿಂದ ಹೆಬ್ಬಾಳದವರೆಗೆ 37 ಕಿ.ಮೀ. ಮೆಟ್ರೊ 3ಎ ಯೋಜನೆಗೆ ರಾಜ್ಯ ಹಣಕಾಸು ಇಲಾಖೆಯಿಂದ ಅನುಮೋದನೆ ದೊರೆತಿದೆ. ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಶೀಘ್ರದಲ್ಲೇ ಭೂಸ್ವಾಧೀನ ಕಾರ್ಯಗಳನ್ನು ಮುಂದುವರಿಸಲು ನಿರ್ಧರಿಸಿದೆ. ಈ ಸಲುವಾಗಿ ಬಿಎಂಆರ್‌ಸಿಎಲ್ ಕೇಂದ್ರದಿಂದ ಅನುಮತಿ ಕೋರಿದೆ ಎಂದು 'ಬೆಂಗಳೂರು ಮಿರರ್' ವರದಿ ಮಾಡಿದೆ.

ಭಾರಿ ಮೊತ್ತದ ಮೆಟ್ರೋ ಯೋಜನೆ
ಒಟ್ಟು 16,328 ಕೋಟಿ ರೂಪಾಯಿ ವೆಚ್ಚದಲ್ಲಿ ಕೆಂಪಾಪುರ-ಜೆಪಿ ನಗರ ನಾಲ್ಕನೇ ಹಂತ ಮತ್ತು ಹೊಸಹಳ್ಳಿ-ಕಡಬಗೆರೆ ಮೆಟ್ರೋ ಯೋಜನೆ ಕಾಮಗಾರಿ ನಡೆಯಲಿವೆ. ಎಲ್ಲವು ಅಂದುಕೊಂಡಂತೆ ಅನುದಾನ, ಭುಸ್ವಾಧೀನ ಅನುಮೋದನೆ ಸಿಕ್ಕರೆ ಇದೇ ವರ್ಷ ಕೆಲಸ ಆರಂಭವಾಗುತ್ತದೆ..
ಇನ್ನೂ ಕೆಂಪಾಪುರ-ಜೆ.ಪಿ.ನಗರ ಮೆಟ್ರೋ ಮಾರ್ಗದಲ್ಲಿ 2028ರ ವೇಳೆಗೆ ವಾಣಿಜ್ಯ ಕಾರ್ಯಾಚರಣೆ ಸಾಧ್ಯವಾಗಲಿದೆ. ಇದರಿಂದ ಈ ಭಾಗದಲ್ಲಿನ ಒಟ್ಟು ಸುಮಾರು 4.5 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಂಚಾರ ಸೇವೆ ಸಿಕ್ಕಂತಾಗುತ್ತದೆ. ಜೊತೆಗೆ ಸಂಚಾರ ದಟ್ಟಣೆಯು ಕಡಿಮೆ ಆಗುತ್ತದೆ.
ಯೋಜನೆಗೆ ಸರ್ಕಾರದ ಪಾಲು ಎಷ್ಟು?
ಕೇಂದ್ರ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳು ಈ ಯೋಜನೆಗೆ ತಲಾ 20ರಷ್ಟು ಅಂದರೆ ಒಟ್ಟು 40 ಅನುದಾನ ನೀಡಲಿವೆ. ಉಳಿದ ಆರವತ್ತರಷ್ಟು ಹಣವನ್ನು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಯೋಜನೆ ಅರಂಭಿಸಲಾಗುತ್ತದೆ. ಇದಕ್ಕಾಗಿ ಅಂದಾಜು 110 ಎಕರೆಗಳನ್ನು ಭೂಮಿ ಸ್ವಾಧೀನ ಪಡಿಸಿಕೊಳ್ಳಬೇಕಿದೆ. ಇದರಲ್ಲಿ ಖಾಸಗಿ, ಸರ್ಕಾರಿ ಎರಡು ಸೇರಿವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
3ನೇ ಹಂತದ ಯೋಜನೆ: ಮಾರ್ಗ-ಪ್ರದೇಶಗಳ ಮಾಹಿತಿ
ಈ ಮೆಟ್ರೋ ಮೂರನೇ ಹಂತದ ಯೋಜನೆ ಸಮಗ್ರ ವರದಿ (ಡಿಪಿಆರ್) ಪ್ರಕಾರ, ಮೂರು ಕಾರಿಡಾರ್‌ಗಳು ಜೆಪಿ ನಗರ, ಹೆಬ್ಬಾಳ, ಜೆಪಿ ನಗರ ನಾಲ್ಕನೇ-ಐದನೇ ಹಂತ, ಕದಿರೇನಹಳ್ಳಿ, ಕಾಮಕ್ಯ ಬಸ್ ನಿಲ್ದಾಣ, ಹೊಸಕೆರೆಹಳ್ಳಿ ಕ್ರಾಸ್, ಪಿಇಎಸ್ ಕಾಲೇಜು ನಿಲ್ದಾಣ, ನಾಯಂಡಹಳ್ಳಿ, ನಾಗರಬಾವಿ ಸರ್ಕಲ್, ವಿನಾಯಕ ಬಡವಣೆ, ಅಂಬೇಡ್ಕರ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್, ಬಿಡಿಎ ಕಾಂಪ್ಲೆಕ್ಸ್, ಚೌಡೇಶ್ವರಿ ನಗರ, ಫ್ರೀಡಂ ಫೈಟರ್ ಕ್ರಾಸ್, ಸುಮನಹಳ್ಳಿ ಕ್ರಾಸ್.
ಕಂಠೀರವ ಸ್ಟುಡಿಯೋ, ಬಿಇಎಲ್ ವೃತ್ತ, ಪಟೇಲಪ್ಪ ಲೇಔಟ್, ಹೆಬ್ಬಾಳ, ಮತ್ತು ಕೆಂಪಾಪುರ, ಪೀಣ್ಯ, ಬಾಹುಬಲಿ ನಗರ, ಹೊಸಹಳ್ಳಿ, ಕೆಎಚ್‌ಬಿ ಕಾಲೋನಿ, ವಿನಾಯಕ ನಗರ, ಸುಂಕದಕಟ್ಟೆ, ಹೇರೋಹಳ್ಳಿ, ಬ್ಯಾಡರಹಳ್ಳಿ, ಫಾರೆಸ್ಟ್ ಗೇಟ್ ಮತ್ತು ಕಡಬಗೆರೆಯನ್ನು ಸಂಪರ್ಕಿಸುತ್ತದೆ.
ಈ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಳಿ ಮೆಟ್ರೋಗೆ ಅನುದಾನ ಕೋರಿದ್ದರು.
BMRCL ಐದು ಕಾರಿಡಾರ್ ಗುರಿ
ಬೆಂಗಳೂರಿಗರಿಗೆ ವೇಗದ ಮತ್ತು ಸುರಕ್ಷಿತ ಸಾರಿಗೆ ಸೇವೆ ನೀಡುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ನಗರದ ಎಲ್ಲಾ ದಿಕ್ಕುಗಳಲ್ಲಿ ವಿಸ್ತರಿಸುತ್ತಿದೆ. ಐದು ಕಾರಿಡಾರ್‌ಗಳನ್ನು ಅಸ್ತಿತ್ವದಲ್ಲಿರುವ ಮೆಟ್ರೋ ಮಾರ್ಗಗಳಿಗೆ ವಿಸ್ತರಣೆಗಳಾಗಿ ಗುರುತಿಸಲಾಗಿದೆ. ಒಟ್ಟು 129 ಕಿ.ಮೀ. ಈ ಕಾರಿಡಾರ್ ಗಳು ನಗರದ ಒಳ ಮತ್ತು ಹೊರಗಿನ ಪ್ರದೇಶಗಳಿಗೆ ವಿಸ್ತರಣೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ನಿಗಮ ತಿಳಿಸಿದೆ.
ಬೆಂಗಳೂರು ನಗರ ವ್ಯಾಪ್ತಿಯಿಂದ ಬಿಬಿಎಂಪಿ ವ್ಯಾಪ್ತಿಯ ಅಲ್ಲದ ಪ್ರದೇಶಗಳು ಅಂದರೆ ಉಪನಗರ ನಗರ ವ್ಯಾಪ್ತಿಯವರೆಗೆ ಮೆಟ್ರೋ ವಿಸ್ತರಣೆ ಮಾಡಲು ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ.
ಸದ್ಯ ಈ ಉಪನಗರಗಳವರೆಗೆ ಮೆಟ್ರೋ ವಿಸ್ತರಣೆಗೆ ಕಾರ್ಯ ಸಿದ್ಧತಾ ಅಧ್ಯಯನ ನಡೆಸಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಅನುಮತಿ ಕೋರಿದ್ದಾರೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ












Click it and Unblock the Notifications