Namma metro update: ಮೆಟ್ರೋ 3ನೇ ಹಂತದ ಭೂಸ್ವಾಧೀನ, ಸಮೀಕ್ಷೆ ಶೀಘ್ರವೇ ಆರಂಭ, ವಿವರ ಇಲ್ಲಿದೆ
ಬೆಂಗಳೂರು, ನವೆಂಬರ್ 26: ಬೆಂಗಳೂರಿನಾದ್ಯಂತ ಜಾಲ ವಿಸ್ತರಿಸುತ್ತಿರುವ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನಮ್ಮ ಮೆಟ್ರೋ (Namma Metro) ಯೋಜನೆಯ 3 ನೇ ಹಂತದ ಭೂ ಸ್ವಾಧೀನಕ್ಕೆ ಸಂಬಂಧಿಸಿದ ಪ್ರಾಥಮಿಕ ಕಾಮಗಾರಿಗಳನ್ನು ಶೀಘ್ರದಲ್ಲೇ ಆರಂಭಿಸಲಿದೆ.
ಮೂರನೇ ಹಂತದ ಯೋಜನೆಗೆ ಬೇಕಾದ ಕಾರಿಡಾರ್‌ನ ಕೆಲವು ಭಾಗಗಳಲ್ಲಿ ಡಿಪೋ ಮತ್ತು ವಾಯಡಕ್ಟ್‌ಗಳನ್ನು ನಿರ್ಮಿಸಲು 100 ಎಕರೆ ಭೂಮಿಯನ್ನು ಕಂಪನಿ ಗುರುತಿಸಿದೆ. ಈ ಜಾಗಗಳ ಸ್ವಾಧೀನ, ಸಮೀಕ್ಷೆ ಇನ್ನೇನು ಪ್ರಾರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು TOI ವರದಿ ಮಾಡಿದೆ.

Namma Metro: ಎಲಿವೇಟೆಡ್ ರಸ್ತೆಗಳ ಮೇಲೆ ಓಡಲಿವೆ ಮೆಟ್ರೋ ರೈಲುಗಳು- ಏನಿದು ಸರ್ಕಾರದ ಹೊಸ ಪ್ಲಾನ್?
BMRCL 3 ನೇ ಹಂತದ ಅಡಿಯಲ್ಲಿ ಎರಡು ಮೆಟ್ರೋ ಮಾರ್ಗಗಳು ನಿರ್ಮಾಣಗೊಳ್ಳಲಿವೆ. ಜೆಪಿ ನಗರ-ಕೆಂಪಾಪುರವರೆಗೆ (32.1 ಕಿಮೀ) ಹೊರವರ್ತುಲ ರಸ್ತೆಯಲ್ಲಿ ಮತ್ತು ಮಾಗಡಿ ರಸ್ತೆಯಲ್ಲಿ ಹೊಸಹಳ್ಳಿಯಿಂದ ಕಡಬಗೆರೆವರೆಗೆ (12.5-ಕಿಮೀ) ಮಾರ್ಗ ತಲೆ ಎತ್ತಲಿದೆ. ಕೆಲವು ಭಾರಿ ಪರಿಷ್ಕರಣೆಗೊಂಡ ಈ ಯೋಜನೆಯ ಡಿಪಿಆರ್‌ಗೆ ಕೇಂದ್ರ ಅನುಮೋದನೆ ಕೊಡುವುದು ಬಾಕಿ ಇದೆ.
ಯೋಜನೆಗೆ ರಾಜ್ಯ ಸರ್ಕಾರದಿಂದ 2022ಕ್ಕೆ ಅನುಮೋದನೆ
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸೂಚನೆ ಮೇರೆಗೆ ಮಾಗಡಿ ರಸ್ತೆ ಮಾರ್ಗಕ್ಕಾಗಿ ಕೆಲವು ಮಾರ್ಪಾಡುಗಳನ್ನು ಮಾಡಲಾಯಿತು. ಒಟ್ಟು 15,600 ಕೋಟಿ ರೂ. ಯೋಜನೆಗೆ ಕಳೆದ ವರ್ಷ ನವೆಂಬರ್ 2022 ರಲ್ಲಿ ರಾಜ್ಯ ಸರ್ಕಾರ ಅನುಮೋದನೆ ನೀಡಿತು.
ಹಣಕಾಸು ಇಲಾಖೆಯು ಯೋಜನೆಗೆ ಬೇಕಾದ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲು ಸೂಚನೆ ನೀಡಿದೆ. ಅದರ ಬೆನ್ನಲ್ಲೆ ಕೆಲವು ಕೆಲಸ ಆರಂಭಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಆಸ್ತಿಗಳಿಗೆ ಪರಿಹಾರಕ್ಕಾಗಿ ಖರ್ಚು ಮಾಡುವ ಮೊದಲು ರಾಜ್ಯ ಸಚಿವ ಸಂಪುಟದ ಅನುಮೋದನೆ ಬೇಕಿರುತ್ತದೆ. ಇನ್ನೂ ಭೂಸ್ವಾಧೀನದ ಆರಂಭಿಕ ಹಂತ ಮುಗಿದ ಜಾಗ ಕೈಸೇರಲು ಆರು ತಿಂಗಳು ಬೇಕಾಗುತ್ತದೆ.

ದೊಡ್ಡ ಡಿಪೋ ನಿರ್ಮಾಣವಾಗಲಿದೆ
ಮಾಗಡಿ ರಸ್ತೆಯಲ್ಲಿ (ಬ್ಯಾಡರಹಳ್ಳಿ ಪೊಲೀಸ್ ಠಾಣೆ ಬಳಿ) 100 ಎಕರೆ ಜಾಗದಲ್ಲಿ 75 ಎಕರೆ ಡಿಪೋ ನಿರ್ಮಾಣ ಮಾಡಲು ಚಿಂತನೆ ನಡೆದಿದೆ. ಅದಕ್ಕಾಗಿ ಜಾಗ ಸಹಿತ ಗುರುತಿಸಲಾಗಿದೆ. ಈ ಉದ್ದೇಶಿತ ಡಿಪೋ ಯೋಜನೆಯ 3 ನೇ ಹಂತದ ವ್ಯಾಪ್ತಿಗೆ ಬರುವ ಎರಡು ಮಾರ್ಗಗಳಿಗೆ ನೆರವಾಗಲಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳೂ ತಿಳಿಸಿವೆ.
ಈ ಡಿಪೋ ನಿರ್ಮಾಣವಾದರೆ 100 ಎಕರೆ ಪ್ರದೇಶದಲ್ಲಿ ಹರಡಿರುವ ಪೀಣ್ಯದ ಪಕ್ಕದಲ್ಲಿ ನಗರದ ಅತಿದೊಡ್ಡ ಮೆಟ್ರೋ ಡಿಪೋ ಆಗಲಿದೆ. ಈ ಜೋಡಣೆ ಪೀಣ್ಯ ಮೂಲಕ ಹಾದುಹೋಗುತ್ತದೆ. ಯೋಜನೆಯಂತೆ ಈಗಿರುವ ಪೀಣ್ಯ ಡಿಪೋಗೂ ಪ್ರವೇಶ ಕಲ್ಪಿಸಲಾಗುವುದು. ಮೇಲ್ಸೇತುವೆ ನಿರ್ಮಾಣಕ್ಕೆ 25 ಎಕರೆ ಜಾಗ ಹುಡುಕಾಟ ಪೂರ್ಣಗೊಂಡಿದೆ. ಮುಂದಿನ ದಿನಗಳಲ್ಲಿ ಭೂಸ್ವಾಧೀನ ಕುರಿತು ಜಂಟಿ ಸಮೀಕ್ಷೆ ನಡೆಯಲಿದೆ.
ಉದ್ದೇಶಿತ ಯೋಜನೆ, ಸಮೀಕ್ಷೆ ಈಡೇರಲು ಪ್ರಸ್ತಾವಿತ ಮಾರ್ಗಗಳ ಪ್ರತಿ 10 ಕಿಮೀಗೆ ಭೂ ಸ್ವಾಧೀನ ಅಗತ್ಯತೆ ಕುರಿತು ವರದಿ ಸಲ್ಲಿಸಲು BMRCL ನ ಯೋಜನಾ ವಿಭಾಗಕ್ಕೆ ತಿಳಿಸಿದೆ ಎಂದು ನಮ್ಮ ಮೆಟ್ರೋ ಮೂಲಗಳು ಮಾಹಿತಿ ನೀಡಿವೆ.












Click it and Unblock the Notifications