ನಮ್ಮ ಮೆಟ್ರೋ 2ನೇ ಹಂತ ವಿಳಂಬದಿಂದಾಗಿ ಬೊಕ್ಕಸಕ್ಕೆ ₹10,000 ಕೋಟಿ ಹೊರೆ

ಬೆಂಗಳೂರು, ಜುಲೈ 26: ಬೆಂಗಳೂರು ನಮ್ಮ ಮೆಟ್ರೋ ಯೋಜನೆಗಳು, ಹೊಸ ಮಾರ್ಗ ನಿರ್ಮಾಣ ಕಾರ್ಯ ನಡೆಯುತ್ತಲೆ ಇದೆ. ನಮ್ಮ ಮೆಟ್ರೋ ಎರಡನೇ ಹಂತ ಯೋಜನೆಯು ಕಾಮಗಾರಿಗೆ ಹತ್ತು ವರ್ಷಗಳ ಹಿಂದೆಯೇ ಅನುಮೋದನೇ ನೀಡಿ ನಿಗದಿತ ಗಡುವು ನೀಡಲಾಗಿದೆ. ಎಲ್ಲವು ಅಂದುಕೊಂಡಂತೆ ಟೈಮ್‌ ಪಿರಿಯಡ್ ನಲ್ಲಿ ಕೆಲಸ ಪೂರ್ಣಗೊಳ್ಳದ ಕಾರಣ ಬೊಕ್ಕಸಕ್ಕೆ ₹10,000 ಕೋಟಿ ಹೊರೆ ಆಗಿದೆ.

ಹೌದು, ನಮ್ಮ ಮೆಟ್ರೊ 75.06 ಕಿಮೀ ವ್ಯಾಪ್ತಿಯ 2ನೇ ಹಂತದ ಕಾಮಗಾರಿ ವೆಚ್ಚವು ಮತ್ತೆ ಪರಿಷ್ಕರಣೆಗೊಂಡಿದೆ. ಅಂದಾಜು ವೆಚ್ಚ ಇಂದಿನ ದಿನಮಾನಗಳಿ ಅನುಗುಣವಾಗಿ ಪರಿಷ್ಕರಣಗೊಂಡಿದ್ದು, ಸುಮಾರು 40,000 ಕೋಟಿ ರೂ.ಗೆ ಏರಿದೆ, ಇದು ದಶಕದ ಹಿಂದೆ ಶೇ.52 ರಷ್ಟು ಮೂಲ ವೆಚ್ಚ ಪ್ರಸ್ತಾಪಿಸಲಾಗಿತ್ತು.

Namma Metro 2nd Phase Work Delayed Cost Increased to Rs 40000 Crore

ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತನ್ನ ಎರಡನೇ ಹಂತದ ಯೋಜನೆಗೆ ಕಾಮಗಾರಿಯ ವೆಚ್ಚದ ಅನುಮೋದನೆಗಾಗಿ ನಗರಾಭಿವೃದ್ಧಿ ಇಲಾಖೆ (UDD) ಮೂಲಕ ರಾಜ್ಯ ಹಣಕಾಸು ಇಲಾಖೆಗೆ ಪರಿಷ್ಕೃತ ವೆಚ್ಚ ಸಹಿತ ಪ್ರಸ್ತಾವನೆ ರವಾನಿಸಿತ್ತು.

ಆರಂಭದಲ್ಲಿ 26,405 ರೂ.ಗೆ ಅನುಮೋದನೆ

ಈ ಉದ್ದೇಶಿತ 72 ಕಿಮೀ ಮೆಟ್ರೋ ಯೋಜನೆಯ ಕಾಮಾಗಾರಿ ಆರಂಭಿಸಲು 2014 ರಲ್ಲಿ ಅನುಮೋದನೆ ನೀಡಿತ್ತು. ನಂತರ 3 ಕಿಮೀ ಹೆಚ್ಚಿಸಲಾಯಿತು. ಆಗ ಯೋಜನೆಯಲ್ಲಿ 26,405 ಕೋಟಿ ರು. ವೆಚ್ಚದಲ್ಲಿ ಪೂರ್ಣಗೊಳಿಸುವಂತೆ 2019 ರ ಗಡುವು ನಿಗದಿ ಮಾಡಲಾಯಿತು.

Namma Metro 2nd Phase Work Delayed Cost Increased to Rs 40000 Crore

ಆದರೆ ಅದು ಯೋಜನೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ 2021ರಲ್ಲಿ ಮತ್ತೆ ಅಂದಾಜು ವೆಚ್ಚವನ್ನು 30,695 ಕೋಟಿಗೆ ಪರಿಷ್ಕರಣೆ ಮಾಡಿ ಅನುಮೋದಿಸಲಾಯಿತು. ನಂತರ ಪರಿಷ್ಕೃತ ಭೂಸ್ವಾಧೀನ ವೆಚ್ಚಗಳು, ಹೆಚ್ಚುವರಿ ಕಿಮೀ ಸೇರ್ಪಡೆ. ಹಣದುಬ್ಬರ, ಸಾಂಕ್ರಾಮಿಕ ಕೋವಿಡ್ ಕಾರಣದಿಂದಾಗಿ ಯೋಜನೆ ಮತ್ತೆ ವಿಳಂಬವಾಯಿತು. ಇದೀಗ ಮತ್ತೆ ಅಂದಾಜು ವೆಚ್ಚವನ್ನು ಹೆಚ್ಚಿಸಿ ಪರಿಷ್ಕರಣೆಗೆ ಕೇಳಲಾಗಿದೆ.

ರೂ. 40000 ಕೋಟಿಗೆ ಪರಿಷ್ಕರಿಸಲು ಪ್ರಸ್ತಾವ

ಇಂದಿನ ಸನ್ನಿವೇಶದಲ್ಲಿ 30ಸಾವಿರ ಕೋಟಿ ಅಂದಾಜು ವೆಚ್ಚವನ್ನು 10,000 ಕೋಟಿ ಹೆಚ್ಚುವರಿಯಾಗಿ ಪರಿಗಣಿಸಿ ಅನುಮೋದಿಸಿದರೆ ಒಟ್ಟು 40000 ಕೋಟಿಗೆ ಏರಿಕೆ ಆಗುತ್ತದೆ. ನಿಗದಿತ ಸಮಯದಲ್ಲಿ (2021) ಪೂರ್ಣಗೊಂಡಿದ್ದರೆ, ಈ ಹೆಚ್ಚುವರಿ ಆರ್ಥಿಕ ಹೊರೆ ತಪ್ಪುತ್ತಿತ್ತು.

ಬಿಎಂಆರ್‌ಸಿಎಲ್ ಅಧಿಕಾರಿಗಳ ಪ್ರಕಾರ, ಮೆಟ್ರೋ ಎರಡನೇ ಹಂತದ ರೀಚ್-2 ಪಶ್ಚಿಮ ವಿಸ್ತರಣೆಯು ಕೆಂಗೇರಿಯಲ್ಲಿ ಕೊನೆಗೊಳ್ಳಲಿದೆ. ಇದನ್ನು ಚಲ್ಲಘಟ್ಟದವರೆಗೆ ವಿಸ್ತರಿಸಲಾಗಿದೆ. ನಾವು ಕಾಡುಗೋಡಿಯ (ವೈಟ್‌ಫೀಲ್ಡ್) ಪೂರ್ವ ಭಾಗದಲ್ಲಿ ಮತ್ತೊಂದು ಡಿಪೋವನ್ನು ಸೇರಿಸಿದ್ದೇವೆ ಎಂದರು.

ಖರ್ಚು ಏರಿಕೆಗೆ ಕಾರಣ ತಿಳಿಸಿದ BMRCL

ಯೋಜನೆಗಾಗಿಯೇ ಹೆಚ್ಚುವರಿಯಾಗಿ 44 ಹೆಕ್ಟೇರ್ ಭೂಮಿ ಸ್ವಾಧೀನಪಡಿಸಿಕೊಳ್ಳುತ್ತಿದ್ದೇವೆ. ಪರಿಹಾರದ ಮೊತ್ತವು 438 ಕೋಟಿ ರೂ.ನಿಂದ ಸುಮಾರು 6,300 ಕೋಟಿ ರೂ.ಗೆ ಏರಿಕೆ ಆಗಿದೆ. ನಾವು ಮೂಲತಃ ಯೋಜಿತ 84.33 ಹೆಕ್ಟೇರ್‌ ಬದಲಿಗೆ 128.36 ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದೇವೆ. ಇನ್ನೂ ರೀಚ್ 5 ವ್ಯಾಪ್ತಿಯಲ್ಲಿ ಆರ್‌ವಿ. ರಸ್ತೆ, ಬೊಮ್ಮಸಂದ್ರ ಮಾರ್ಗಕ್ಕಾಗಿ ಹೆಚ್ಚುವರಿ ಭೂಮಿ ಸ್ವಾಧೀನ ಮಾಡಿಕೊಂಡಿದ್ದೇವೆ ಎಂದು ಖರ್ಚು ಹೆಚ್ಚಾಗುತ್ತಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+