Get Updates
Get notified of breaking news, exclusive insights, and must-see stories!

ರಾಜರಾಜೇಶ್ವರಿ ನಗರದಲ್ಲಿ ಸಾವಿರ ಸಸಿ ನೆಡುವ 'ಕಾಡಹಬ್ಬ'

ಬೆಂಗಳೂರು, ಜು.10: ಆರ್‌ಆರ್‌ ನಗರ ಐ ಕೇರ್‌ ಸಂಸ್ಥೆಯು ಜು.15ರಂದು 'ನಮ್ಮ ಕಾಡಹಬ್ಬ' ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮ ಬೆಳಗ್ಗೆ 7ರಿಂದ 10ರವರೆಗೆ ನಡೆಯಲಿದೆ.

ಆರ್ ಆರ್ ನಗರ- ಐ - ಕೇರ್ ಸಂಸ್ಥೆಯು ಲಾಭದಾಯಕವಲ್ಲದ ಸಮುದಾಯ ಸೇವಾ ಗುರಿಯ ಸರ್ಕಾರೇತರ ಸಂಘಟನೆಯಾಗಿದೆ. ಈ ಸಂಸ್ಥೆಯು 2013 ರಿಂದ, 'ಹಸಿರು ಮತ್ತು ಸ್ವಚ್ಛ ಆರ್ ಆರ್ ನಗರ' ನಿರ್ಮಿಸುವ ಉದ್ದೇಶದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.

ಈ ಮಹತ್ಕಾರ್ಯಕ್ಕಾಗಿ ವೃತ್ತಿಪರರು,ತಜ್ಞರು, ನಾಗರೀಕರು, ವರ್ತಕರು,ವ್ಯಾಪಾರಿಗಳು, ಉದ್ಯಮಿಗಳು, ವಿದ್ಯಾರ್ಥಿಗಳು,ಸ್ಥಳೀಯ ನಿವಾಸಿಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ, ನಾನಾ ಕ್ಷೇತ್ರದ ಸಂಘ-ಸಂಸ್ಥೆಗಳನ್ನುಪಾಲುದಾರರನ್ನಾಗಿ ಮಾಡಿಕೊಂಡಿದ್ದಾರೆ.

Namma Kaada Habba celebrating in RR Nagar with 1K plantation

ಆರ್ ಆರ್ ನಗರ- ಐ - ಕೇರ್' ಹಾಗೂಕರ್ನಾಟಕ ಅರಣ್ಯ ಇಲಾಖೆಯ ಜಂಟಿಸಹಯೋಗದಲ್ಲಿ ಜುಲೈ 15 ರಂದು, ಅರಣ್ಯ ಸಂರಕ್ಷಣಾಧಿಕಾರಿ, ದೀಪಿಕಾಬಾಜ್ಪೈ, ನೇತೃತ್ವದಲ್ಲಿ ಬೆಂಗಳೂರಿನ ಹೊರವಲಯದಲ್ಲಿರುವ ತುರಹಳ್ಳಿ ಅರಣ್ಯಪ್ರದೇಶದಲ್ಲಿ ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಸಸಿಗಳನ್ನು ಕರ್ಣಾಟಕ ಅರಣ್ಯ ಇಲಾಖೆ ಒದಗಿಸುತ್ತಿದೆ. ಅರಣ್ಯ ಇಲಾಖೆಯ ನರ್ಸರಿಯಿಂದ ಸಸಿಗಳನ್ನು ಅರಣ್ಯಕ್ಕೆ ಸಾಗಿಸುವ ಜವಾಬ್ದಾರಿಯನ್ನು ಲಿಯೊಪ್ಯಾಕರ್ಸ್ ಅಂಡ್ ಮೂವರ್ಸ್‌ ಹಿಸಿಕೊಂಡಿದೆ.

ಬಾಲಾಜಿ ಕನ್ಸ್ಟ್ರಕ್ಶನ್ಸ್ ಹಾಗೂ ಬೆಸ್ಟ್ ಕ್ಲಬ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಹಾಗೂ ನಾಗರಿಕರು ಗುಂಡಿಗಳನ್ನುತೋಡಲು ಕೈ ಜೋಡಿಸಿದ್ದಾರೆ. ಮಂತ್ರಿ ಅಲ್ಪೈನ್‌ ಸಂಸ್ಥೆ ಗೊಬ್ಬರವನ್ನು ಒದಗಿಸುತ್ತಿದೆ. ಜೊತೆಗೆಬಿಜಿಎಸ್ ಗ್ಲೋಬಲ್ ಆಸ್ಪತ್ರೆ ವೈದ್ಯಕೀಯನೆರವು ನೀಡುತ್ತಿದೆ.

ನಮ್ಮ ಸುತ್ತ ಮುತ್ತಲಿನ ಪರಿಸರ ಸಂರಕ್ಷಿಸುವ ಉದ್ದೇಶದಿಂದ ಸ್ಥಳೀಯ ನಾಗರೀಕರು, ಈಅರ್ಥಪೂರ್ಣ ಕಾರ್ಯಕ್ರಮಕ್ಕೆ ಮುಂದೆಬಂದಿದ್ದಾರೆ.

ನಮ್ಮ ಈ ಪರಿಸರ ಕಾಳಜಿಗೆ ಸ್ಟ್ಯಾಂಡರ್ಡ್ ಚಾರ್ಟರ್ಡ್, ಆರೆಕಲ್ ಸೇರಿದಂತೆಕಾರ್ಪೊರೇಟ್ ವಲಯದ ಹಲವು ಕಂಪನಿಗಳು ಮತ್ತು ಸ್ವಯಂ ಸೇವಾ ಕಾರ್ಯಕರ್ತರು ಕೈಜೋಡಿಸಿದ್ದಾರೆ. ಅರಣ್ಯದಲ್ಲಿ ಮರಗಳನ್ನು ಬೆಳೆಸುವ ಈಕಾರ್ಯಕ್ರಮಕ್ಕೆ ನಾಟಿ ಸಸಿಗಳನ್ನು ಆಯ್ಕೆಮಾಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+