Namma Clinics in Bengaluru : ಬಿಬಿಎಂಪಿ: 243 ನಮ್ಮ ಕ್ಲಿನಿಕ್‌ ಸ್ಥಾಪನೆ, ವೈದ್ಯರ ನೇಮಕಕ್ಕೆ ಸೂಚನೆ

ಬೆಂಗಳೂರು, ಡಿಸೆಂಬರ್ 15: 2023ರ ಜನವರಿ ಮೊದಲ ವಾರದೊಳಗೆ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ 243 ವಾರ್ಡ್ ಗಳಲ್ಲಿ ನಮ್ಮ ಕ್ಲಿನಿಕ್ ಗಳನ್ನು ಸ್ಥಾಪಿಸಬೇಕು. ಜೊತೆಗೆ ಎಲ್ಲ ನಮ್ಮ ಕ್ಲಿನಿಕ್‌ಗಳಿಗೆ ಸೂಕ್ತ ವೈದ್ಯರನ್ನು ಶೀಘ್ರವಾಗಿ ನೇಮಕ ಮಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ನಮ್ಮ ಕ್ಲಿನಿಕ್ ಗಳನ್ನು ಸ್ಥಾಪಿಸುವ ಕುರಿತು ನಡೆದ ಸಭೆಯಲ್ಲಿ ಅವರು ಮಾತನಡಿದರು.

ಬಿಬಿಎಂಪಿಯಲ್ಲಿ ಸ್ಥಾಪಿಸಲಾಗುವ ನಮ್ಮ ಕ್ಲಿನಿಕ್‌ಗಳಿಗೆ ಅವಶ್ಯವಿರುವ ಔಷಧಿಗಳನ್ನು ರಾಷ್ಟ್ರೀಯ ನಗರ ಆರೋಗ್ಯ ಮಿಷನ್ (ಎನ್‌ಯುಎಚ್‌ಎಂ) ಮಾರ್ಗಸೂಚಿ ಅನ್ವಯ 2/3ರ ಪ್ರಮಾಣವನ್ನು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (ಕೆಎಸ್ಎಂಎಸ್ಸ್‌ಸಿಎಲ್)ದಿಂದ ಸರಬರಾಜು ಮಾಡಲು ಕ್ರಮ ವಹಿಸುವಂತೆ ಅವರು ತಿಳಿಸಿದರು.

Namma Clinic built in all 243 wards before January 1st week BBMP instruct to officers

ನಮ್ಮ ಕ್ಲಿನಿಕ್‌ಗಳಿಗೆ ಅವಶ್ಯವಿರುವ ಪಿಠೋಪಕರಣಗಳು, ವೈದ್ಯಕೀಯ ಉಪಕರಣಗಳು, ಐಸಿಟಿ ಉಪಕರಣಗಳು, ಲ್ಯಾಬ್ ರಿಏಜೆಂಟರ್‌ಗಳು, ಬ್ರಾಂಡಿಂಗ್ ಕಾರ್ಯಗಳನ್ನು ಮಾರ್ಗಸೂಚಿ ಅನ್ವಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ. ಜನವರಿ ಮೊದಲನೇ ವಾರದೊಳಗೆ ಎಲ್ಲಾ ನಮ್ಮ ಕ್ಲಿನಿಕ್‌ಗಳಿಗೆ ಸರಬರಾಜು ಮಾಡುವಂತೆ ನೋಡಿಕೊಳ್ಳಬೇಕು.

ಜನವರಿಗೆ 243 ನಮ್ಮ ಕ್ಲಿನಿಕ್‌ಗಳ ಉದ್ಘಾಟನೆ

ನಮ್ಮ ಕ್ಲಿನಿಕ್‌ಗಳಿಗೆ ವೈದ್ಯಾಧಿಕಾರಿಗಳನ್ನು ನಿಯೋಜಿಸಿಕೊಳ್ಳಲು ಅನೇಕ ಬಾರಿ ವಾಕ್-ಇನ್ ಪ್ರಕ್ರಿಯೆಯ ಕೈಗೊಂಡರು ಸಹ ವೈದ್ಯಾಧಿಕಾರಿಗಳ ಹುದ್ದೆಗೆ ಅಭ್ಯರ್ಥಿಗಳು ವರದಿ ಮಾಡಿಕೊಳ್ಳುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈಗಾಗಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕೌನ್ಸಿಲಿಂಗ್‌ಗೆ ಅರ್ಹರಿರುವ ಕಡ್ಡಾಯ ಕರಾರು ಅವಧಿ ಸೇವೆಯ ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್ ನಡೆಸಿ ಬಿಬಿಎಂಪಿಯ ನಮ್ಮ ಕ್ಲಿನಿಕ್‌ಗಳಿಗೆ ನಿಯೋಜಿಸಿ ಎಂದರು.

ವಿಶೇಷ ಆಯುಕ್ತರಾದ ಡಾ. ತ್ರಿಲೋಕ್ ಚಂದ್ರ ಮಾತನಾಡಿ, ಡಿಸೆಂಬರ್ ಅಂತ್ಯಕ್ಕೆ 243 ನಮ್ಮ ಕ್ಲಿನಿಕ್‌ಗಳ ದುರಸ್ತಿ ನವೀಕರಣ ಕಾಮಗಾರಿಯ ಕಾರ್ಯ ಪೂರ್ಣಗೊಳ್ಳಲಿವೆ. ಜನವರಿ ಎರಡನೇ ವಾರದಲ್ಲಿ ಎಲ್ಲ 243 ನಮ್ಮ ಕ್ಲಿನಿಕ್‌ಗಳು ಪೂರ್ಣ ಸಿದ್ಧತೆಗಳೊಂದಿಗೆ ಉದ್ಘಾಟನೆಗೊಳ್ಳಲಿವೆ ಎಂದು ತಿಳಿಸಿದರು.

Namma Clinic built in all 243 wards before January 1st week BBMP instruct to officers

ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾದ ರಂದೀಪ್, ರಾಷ್ಟ್ರೀಯ ಆರೋಗ್ಯ ಮಿಷನ್ ವ್ಯವಸ್ಥಾಪಕ ನವೀನ್ ಭಟ್, ಪಶ್ಚಿಮ ವಲಯದ ಜಂಟಿ ಆಯುಕ್ತ ಯೋಗೇಶ್, ಮುಖ್ಯ ಆರೋಗ್ಯಾಧಿಕಾರಿ ಡಾ. ಬಾಲಸುಂದರ್ ಹಾಗೂ ಮೊದಲಾದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+