• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಖ್ಯಮಂತ್ರಿ ಯಡಿಯೂರಪ್ಪ ಆಪ್ತ ಸಲಹೆಗಾರ ವಿರುದ್ಧ ದೂರು

|

ಬೆಂಗಳೂರು, ಜುಲೈ 31: ನಿವೃತ್ತ ಐಎಎಸ್ ಅಧಿಕಾರಿ ಎಂ.ಲಕ್ಷ್ಮಿನಾರಾಯಣ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಪೂರ್ವಾನುಮತಿ ನೀಡುವಂತೆ ಕೋರಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನಮ್ಮ ಬೆಂಗಳೂರು ಪ್ರತಿಷ್ಠಾನದಿಂದ (NBF) ಮನವಿ ಮಾಡಲಾಗಿದೆ.

ಎಂ ಲಕ್ಷ್ಮಿನಾರಾಯಣ ಅವರನ್ನು ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಸಲಹೆಗಾರರನ್ನಾಗಿ ನೇಮಿಸಲಾಗಿದೆ. ನಮ್ಮ ಬೆಂಗಳೂರು ಪ್ರತಿಷ್ಠಾನವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಆಯುಕ್ತ ಎಂ. ಲಕ್ಷ್ಮಿನಾರಾಯಣ ಅವರು ಭಾರತೀಯ ದಂಡ ಸಂಹಿತೆ ಐಪಿಸಿ 1960ರ ಪ್ರಕಾರ ಎಸಗಿರುವ ಅಪರಾಧದ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಪೂರ್ವಾನುಮತಿ ನೀಡಬೇಕೆಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ದಿನಾಂಕ 30 ಜುಲೈ 2019, ಮಂಗಳವಾರದಂದು ಮನವಿ ಸಲ್ಲಿಸಿದೆ.

ಎಂ ಲಕ್ಷ್ಮಿನಾರಾಯಣ ಅವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಲಹೆಗಾರರನ್ನಾಗಿ ನೇಮಿಸಿದ 24 ಗಂಟೆಗಳಲ್ಲೇ ಎನ್.ಬಿ.ಎಫ್ ಈ ಮನವಿ ಸಲ್ಲಿಸಿದೆ.

ಈ ಮನವಿಗೆ ನಮ್ಮ ಬೆಂಗಳೂರು ಪ್ರತಿಷ್ಠಾನದ ಎನ್. ಸುರೇಶ್, ಕೋರಮಂಗಲ 3ನೇ ಬ್ಲಾಕ್ ನಿವಾಸಿಗಳ ಸಂಘದ ನಿತಿನ್ ಶೇಷಾದ್ರಿ ಹಾಗು ಹೆಚ್.ಎಂ.ಟಿ ಕಾಲೋನಿ ನಿವಾಸಿಗಳ ಸಂಘದ ಅಧ್ಯಕ್ಷ ಟಿ. ವಿದ್ಯಾಧರ್ ಅವರು ಸಹಿ ಮಾಡಿದ್ದಾರೆ.

ಇದಕ್ಕೆ ಮುನ್ನ ನಮ್ಮ ಬೆಂಗಳೂರು ಪ್ರತಿಷ್ಠಾನವು ಕರ್ನಾಟಕ ಮುಖ್ಯ ನ್ಯಾಯಾಲಯದಲ್ಲಿ .W.P. No 57920/2016 ರ ಕ್ರಮಸಂಖ್ಯೆಯಲ್ಲಿ ದೂರು ದಾಖಲಿಸಿದ್ದು, ಮುಖ್ಯ ನ್ಯಾಯಾಲಯವು ದಿನಾಂಕ 29 ಮೇ 2019ರ ತನ್ನ ತೀರ್ಪಿನಲ್ಲಿ ನಮ್ಮ ಬೆಂಗಳೂರು ಪ್ರತಿಷ್ಠಾನವು ಆರೋಪಿಗೆ ನಿರ್ಬಂಧ ಹೇರಲು ಸಂಬಂಧಪಟ್ಟ ಅಧಿಕಾರಿಗಳಿಗೆ ಅಂದರೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ದೂರು ಸಲ್ಲಿಸಬಹುದೆಂದು ಆದೇಶಿಸಿದೆ. ಅದರಂತೆ ನಮ್ಮ ಬೆಂಗಳೂರು ಪ್ರತಿಷ್ಠಾನವು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಿದೆ.

English summary
Namma Bengaluru Foundation(NBF) seeks prosecutoin of Lakshminarayana former Commissioner BBMP for offences under IPC 1860.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X