• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ನಿಗೂಢ ಶಬ್ದಕ್ಕೆ ಬೆಚ್ಚಿದ ಬೆಂಗಳೂರಿನ ಅನೇಕ ಬಡಾವಣೆಗಳು

|
Google Oneindia Kannada News

ಬೆಂಗಳೂರಿನ ಅನೇಕ ಬಡಾವಣೆಗಳಲ್ಲಿ ಶುಕ್ರವಾರ ಮಧ್ಯಾಹ್ನ ಬೆಚ್ಚಿ ಬೀಳುವಂಥ ಭಾರಿ ಶಬ್ದದ ಕೇಳಿಸಿದೆ. ಸದ್ಯಕ್ಕೆ ಈ ಶಬ್ದದ ಮೂಲ ಇನ್ನೂ ರಹಸ್ಯವಾಗಿ ಉಳಿದಿದೆ. ಬೆಂಗಳೂರನ್ನು ನಡುಗುವಂತೆ ಮಾಡಿದ ಶಬ್ದವು ಭೂಕಂಪದಿಂದ ಉಂಟಾಗಿದ್ದಲ್ಲ, ಬೇರೆ ಯಾವುದೇ ಸ್ಫೋಟವಲ್ಲ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣ ಕೇಂದ್ರ(kSNDMC)ದ ಅಧಿಕಾರಿಗಳು ತಖ್ಷಣದ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.

Recommended Video

   ಬೆಂಗಳೂರಿಗರನ್ನು ಮತ್ತೆ ಬೆಚ್ಚಿ ಬೀಳಿಸಿದ ನಿಗೂಢ ಶಬ್ದ

   ಆದರೆ, ಇನ್ನು ಹವಾಮಾನ ಇಲಾಖೆ ಗಣಿಗಾರಿಕೆ ಅಥವಾ ವೈಮಾನಿಕ ಅಧಿಕಾರಿಗಳಿಂದ ಸ್ಪಷ್ಟವಾದ ಉತ್ತರ ಸಿಕ್ಕಿರಲಿಲ್ಲ. ಸಂಜೆ ವೇಳೆಗೆ ಈ ಎಲ್ಲಾ ಗೊಂದಲ, ಕುತೂಹಲ, ರಹಸ್ಯ ತೆರೆ ಬೀಳುವ ಸಾಧ್ಯತೆಯಿದೆ. ಕಳೆದ ವರ್ಷ ಇದೇ ರೀತಿ ಭಾರಿ ಶಬ್ದದ ರಹಸ್ಯವನ್ನು ರಕ್ಷಣಾ ಇಲಾಖೆ ಬಗೆ ಹರಿಸಿತ್ತು. ಬೆಂಗಳೂರಿನ ವಕ್ತಾರರು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದರು.

   2021ರ ಶುಕ್ರವಾರ ಜುಲೈ 22ರಂದು ಮಧ್ಯಾಹ್ನ ಸುಮಾರು 12.22ರ ಸುಮಾರಿಗೆ ಎಚ್ಎಸ್ ಆರ್ ಲೇಔಟ್ ನಲ್ಲಿ ಭಾರಿ ಶಬ್ದ ಕೇಳಿಸಿದೆ. ನಂತರ ಪದ್ಮನಾಭನಗರ, ಮೈಸೂರು ರಸ್ತೆ, ದಕ್ಷಿಣ ಬೆಂಗಳೂರಿನ ಅನೇಕ ಕಡೆಗಳಲ್ಲಿ ಕೇಳಿಸಿದೆ ಎಂದು ನಾಗರಿಕರು ಅನುಭವ ಹಂಚಿಕೊಂಡಿದ್ದಾರೆ.

   ಎಚ್ಎಎಲ್ ವಕ್ತಾರರ ಸ್ಪಷ್ಟನೆ:

   2020ರ ಸ್ಪಷ್ಟನೆ: ''ಕೊರೊನಾವೈರಸ್ ನಿಂದ ಲಾಕ್ಡೌನ್ ಆಗಿದ್ದ ವಾಯುನೆಲೆಗಳು ಕೆಲದಿನಗಳಿಂದ ಕಾರ್ಯನಿರ್ವಹಿಸಲು ಆರಂಭಿಸಿವೆ. ಇಂದು ಮಧ್ಯಾಹ್ನದ ವೇಳೆ ಸುಖೋಯ್ 30 ಯುದ್ಧ ವಿಮಾನವೊಂದು ಬೆಂಗಳೂರಿನ ಉತ್ತರ ಭಾಗದಲ್ಲಿ ಹಾರಾಟ ನಡೆಸಿದೆ. ತೀರಾ ಕೆಳ ಮಟ್ಟದಲ್ಲಿ ಹಾರಾಟ ನಡೆಸಿದ್ದರಿಂದ ಅಗತ್ಯಕ್ಕಿಂತ ದೊಡ್ಡ ಮಟ್ಟದಲ್ಲಿ ಶಬ್ದ ಕೇಳಿಸಿರಬಹುದು ಎಂದು ವಿಜ್ಞಾನಿಗಳು ಹೇಳಿದ್ದರು.

   Mysterious loud sound heard by Bengaluru residents today

   ಎಚ್ಎಎಲ್ ತರಬೇತಿ ಕೇಂದ್ರ ಆರಂಭವಾಗಿದ್ದರೂ ಯಾವುದೇ ಯುದ್ಧ ವಿಮಾನ ಹಾರಾಟ, ಅಭ್ಯಾಸ ನಡೆಸುತ್ತಿಲ್ಲ ಎಂದು ಎಚ್ಎಎಲ್ ಸಂಸ್ಥೆ ಹೇಳಿದೆ.

   ಇದು ಸೋನಿಕ್ ಬೂಮ್ ಇರಬಹುದಾ?: ಸೋನಿಕ್ ಬೂಮ್ ಎಂದರೆ ಗಾಳಿಯ ವೇಗಕ್ಕಿಂತಲೂ ಹೊರಡುವ ಯಾವುದೋ ಒಂದು ದ್ವನಿ ಅಥವಾ ಶಬ್ದದ ಕಂಪನ. ಗಾಳಿಯ ವೇಗವನ್ನೂ ಮೀರಿ ಹೊರ ಹೊಮ್ಮುವ ದ್ವನಿ ಕಂಪನಕ್ಕೆ ಸೋನಿಕ್ ಬೂಮ್ ಎನ್ನಲಾಗುತ್ತದೆ.

   ಸುಖೋಯ್ 30 ವಿಮಾನ ಹಾರಾಟವಾದಾಗ ಈ ರೀತಿ ಶಬ್ದ ಕೇಳಿಸಬಹುದು. ಭಾರತದಲ್ಲೇ ನಿರ್ಮಾಣಗೊಂಡ ತೇಜಸ್ ಯುದ್ಧ ವಿಮಾನದ ಹಾರಾಟವೂ ಇದೇ ರೀತಿ ಶಬ್ದ ಉಂಟು ಮಾಡಬಹುದು.


   ವಿಮಾನವು ಮೋಡಗಳನ್ನು ಸೀಳಿ ಹಾರಾಟ ಮಾಡುವಾಗ ಸರಿ ಸುಮಾರು 300 ಡೆಸಿಬಲ್ ನಷ್ಟು ಶಬ್ದ ಉತ್ಪಾದಿಸುತ್ತದೆ. ಬಹುಶಃ ಹಲವು ದಿನಗಳ ಲಾಕ್ಡೌನ್ ನಿಂದ ವಾಯು ಮಾಲಿನ್ಯ ಕಡಿಮೆ ಆಗಿದ್ದರಿಂದ ಈ ಶಬ್ದ ಹೆಚ್ಚಿನ ವ್ಯಾಪ್ತಿಯನ್ನು ಪಡೆದುಕೊಂಡಿರಬಹುದು.

   English summary
   Sonic Boom like thud in Bengaluru: Mysterious loud sound heard by Bengaluru residents today
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X