ದೊಡ್ಡರಂಗೇಗೌಡರ ಚಿತ್ರಗೀತೆಗಳ ಸುಗ್ಗಿ ಸವಿಯೋಣ ಬನ್ನಿ

ಬೆಂಗಳೂರು, ಅಕ್ಟೋಬರ್ 16: "ಅಂತರಾಳ" ದ ಚೊಚ್ಚಲ ಪ್ರಸ್ತುತಿ- 'ನಿನ್ನ ರೂಪು ಎದೆಯ ಕಲಕಿ, ಡಾ.ದೊಡ್ಡರಂಗೇಗೌಡರ ಚಿತ್ರಗೀತೆಗಳ ಸುಗ್ಗಿ' ಕಾರ್ಯಕ್ರಮ ಅಕ್ಟೋಬರ್ 21, 2017ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಯೋಜನೆಗೊಂಡಿದೆ.

"ಬಂದಿದೆ ಬದುಕಿನ ಬಂಗಾರದ ದಿನ
ಮದುವೆಯೇ ಮನುಜನ ಮೊದಲ ಬಂಧನ"

- ಕೆ.ಎಸ್.ಎಲ್. ಸ್ವಾಮೀ ನಿರ್ದೇಶನದ 'ಮಾಗಿಯ ಕನಸು' ಚಿತ್ರದ ಮದುವೆಯ ಸಂಭ್ರಮದ ಬಗ್ಗೆ, ಮನದ ತುಡಿತಗಳ, ಹರುಷದ ಆಚರಣೆಯನ್ನು ಸುಂದರವಾಗಿ ಕಟ್ಟಿದ ಈ ಹಾಡು ಜನರ ಪ್ರೀತಿ ಗಳಿಸುವಲ್ಲಿ ಯಶಸ್ವಿ ಆಯಿತು.

"ನೋಟದಾಗೆ ನಗೆಯ ಮೀಟಿ
ಮೋಜಿನಾಗೆ ಎಲ್ಲೆಯ ದಾಟಿ
ಮೋಡಿಯ ಮಾಡಿದೊಳ ಪರಸಂಗ ಐತೆ ಪರಸಂಗ ಐತೆ"

- ಎಸ್.ಪಿ. ಬಾಲಸುಬ್ರಮಣ್ಯಂ ಅದ್ಭುತ ಕಂಠದಲ್ಲಿ ಮೂಡಿ ಬಂದ ಪರಸಂಗದ ಗೆಂಡೆತಿಮ್ಮ ಚಿತ್ರದ ಮರೆಯಲಾಗದ ಈ ಹಾಡು ಜನರನ್ನು ಅಂದಿಗೂ ಇಂದಿಗೂ ಅಡೆತಡೆಯಿಲ್ಲದೆ ರಂಜಿಸುತ್ತಿವೆ.

Musical Night tribute to Lyricist Dr Doddaranage Gowda By Antarala team

"ನಮ್ಮೂರ ಮಂದಾರ ಹೂವೇ
ನನ್ನೊಲುಮೆ ಬಾಂದಳದ ಚೆಲುವೇ "

- ಆಲೆಮನೆ ಚಿತ್ರದ ಯಶಸ್ಸಿಗೆ ಈ ಹಾಡೂ ಕೂಡ ಕಾರಣ ಅಂದರೆ ತಪ್ಪಿಲ್ಲ. ಪ್ರೀತಿಯ ಪ್ರತೀಕವಾಗಿ ಪ್ರೇಮಿಗಳು ಮಿಂದೆಳುವ ಮೋಹಕ ಗೀತೆ ಇದು.

ಇಂಥ ಹಲವಾರು ಮನಸೂರೆಗೊಳ್ಳುವ ಚಿತ್ರಗೀತೆಗಳನ್ನು ದೊಡ್ಡರಂಗೇಗೌಡರು ಕನ್ನಡಕ್ಕೆ ನೀಡಿದ್ದಾರೆ. ಅವರ ಹಾಡುಗಳ ಸಂಭ್ರಮವನ್ನು "ಅಂತರಾಳ" ನಿಮ್ಮೆಲ್ಲರಿಗೆ ದೀಪಾವಳಿಯ ಹಬ್ಬಕ್ಕೆ ಅರ್ಪಿಸುತ್ತಿದೆ. ಬನ್ನಿ, ಮೇಷ್ಟ್ರು ಜೊತೆಯ ಸ್ವಲ್ಪ ಮಾತು ಕತೆ ಹಾಗೂ ಮಿನುಗುವ ಹಾಡುಗಳಿಗೆ ಜೊತೆಯಾಗಿ. ಸಂಜೆ 6 ರ ನಂತರ
ನಿಮ್ಮ ನಿರೀಕ್ಷೆಯಲ್ಲಿ,
ಅಂತರಾಳ

ಡಾ. ದೊಡ್ಡರಂಗೇಗೌಡ: ಕನ್ನಡ ಚಲನಚಿತ್ರ, ಭಾವಗೀತೆ ಮತ್ತು ಭಕ್ತಿಗೀತೆಗಳ ಲೋಕಕ್ಕೆ ತಮ್ಮದೇ ಆದ ಅಪೂರ್ವ ಕೊಡುಗೆ ನೀಡಿದ ಪ್ರಮುಖ ಸಾಹಿತಿಗಳಲ್ಲಿ ಇವರೂ ಒಬ್ಬರು. ಚಿತ್ರಗೀತೆಗಳಿಗೆ ಗ್ರಾಮೀಣ ಸೊಗಡನ್ನು, ಜಾನಪದ ಶೈಲಿಯನ್ನು ಅಳವಡಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.

1970ರ ದಶಕಕ್ಕೂ 2017ರ ಚಿತ್ರಸಂಗೀತಕ್ಕೂ ಸಂಪರ್ಕ ಕೊಂಡಿಯಾಗಿ ಗೌಡರು ನಿಲ್ಲುತ್ತಾರೆ. ಅವರ ಹಾಡುಗಳು ಇಂದಿಗೂ ಪ್ರಸ್ತುತ ಅಷ್ಟೇ ಅಲ್ಲದೆ ಸಾರ್ವಕಾಲಿಕ ಜನಪ್ರೀಯವಾಗಿವೆ ಮತ್ತು ಅವರ ಹಾಡುಗಳು ವಯಸ್ಸಿನ ಹಂಗಿಲ್ಲದೆ ಎಲ್ಲರನ್ನೂ ರಂಜಿಸುತ್ತವೆ. ಇಂತಿಪ್ಪ ದೊಡ್ಡರಂಗೇಗೌಡರ ಹಾಡುಗಳ ಸಂಭ್ರಮವನ್ನು "ಅಂತರಾಳ" ಚೊಚ್ಚಲ ಪ್ರಸ್ತುತಿಯಾಗಿ ನಿಮ್ಮೆಲ್ಲರಿಗೆ ದೀಪಾವಳಿಯ ಹಬ್ಬಕ್ಕೆ ಅರ್ಪಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+