ಟೆಕ್ಕಿ ಪ್ರಭಾ ಕುಮಾರ್ ಅಂತಿಮ ದರ್ಶನ ಪಡೆದ ಗಣ್ಯರು

ಬೆಂಗಳೂರು, ಮಾ. 15: ಆಸ್ಟ್ರೇಲಿಯಾದಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಸಾಫ್ಟ್‌ವೇರ್‌ ಇಂಜಿನಿಯರ್‌ ಪ್ರಭಾ ಅರುಣ್‌ಕುಮಾರ್‌ (41) ಅವರ ಶವವನ್ನು ವಿಜಯನಗರದ ಬಾಪೂಜಿ ಲೇಔಟ್ ನಲ್ಲಿ ಬೆಳಗ್ಗೆ ಅಂತಿಮ ದರ್ಶನಕ್ಕೆ ಇಡಲಾಗಿತ್ತು.

ಕೇಂದ್ರ ಸಚಿವರಾದ ಅನಂತ ಕುಮಾರ್, ಸದಾನಂದ ಗೌಡ, ಸಂಸದೆ ಶೋಭಾ ಕರಂದ್ಲಾಜೆ, ಗೃಹ ಸಚಿವ ಕೆ.ಜೆ.ಜಾರ್ಜ್, ವಾರ್ತಾ ಸಚಿವ ರೋಷನ್ ಬೇಗ್, ಮೇಯರ್ ಶಾಂತಕುಮಾರಿ ಮತ್ತು ಮಾಜಿ ಸಚಿವ ವಿ.ಸೋಮಣ್ಣ ಸೇರಿದಂತೆ ಗಣ್ಯರು ಮೃತರ ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವನ ಹೇಳಿದರು.[ಸಿಡ್ನಿಯಲ್ಲಿ ಬೆಂಗಳೂರಿನ ಮಹಿಳಾ ಟೆಕ್ಕಿ ಹತ್ಯೆ]

ಆಸ್ಟ್ರೇಲಿಯಾಕ್ಕೆ ತೆರಳಿದ್ದ ಪ್ರಭಾ ಅವರ ಪತಿ ಅರುಣ್‌ಕುಮಾರ್ ಅವರು ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ 'ಸಿಂಗಪುರ್ ಏರ್‌ಲೈನ್ಸ್‌' ವಿಮಾನದ ಮೂಲಕ ನಗರಕ್ಕೆ ಶವ ತೆಗೆದುಕೊಂಡು ಬಂದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎಎಲ್‌) ಚಂದ್ರಾಲೇಔಟ್‌ ಬಳಿಯ ಬಾಪೂಜಿ ಲೇಔಟ್‌ನಲ್ಲಿರುವ ಅರುಣ್‌ಕುಮಾರ್‌ ಅವರ ಸಂಬಂಧಿ ಜಯಚಂದ್ರ ಅವರ ಮನೆಗೆ ಶವ ಕೊಂಡೊಯ್ದು ಅಂತಿಮ ದರ್ಶನಕ್ಕೆ ಇಡಲಾಗಿತ್ತು.[ಸಿಡ್ನಿ ಪ್ರಭಾ ಹತ್ಯೆ ನಿಗೂಢತೆ ಇನ್ನೂ ಬಯಲಾಗಿಲ್ಲ!]

ಭಾನುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಶವವನ್ನು ಪ್ರಭಾ ಅವರ ಹುಟ್ಟೂರಾದ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕಲ್ಲಡ್ಕ ಬಳಿಯ ಅಮ್ಟೂರು ಗ್ರಾಮಕ್ಕೆ ಶವ ಕೊಂಡೊಯ್ಯಲಾಗಿದ್ದು ಸಂಜೆ ಅಂತ್ಯಕ್ರಿಯೆ ನಡೆಯಲಿದೆ.

ಶೋಭಾ ಕರಂದ್ಲಾಜೆ

ಶೋಭಾ ಕರಂದ್ಲಾಜೆ

ಸಂಸದೆ ಶೋಭಾ ಕರಂದ್ಲಾಜೆ ಪ್ರಭಾ ಅರುಣ್ ಕುಮಾರ್ ಅಂತಿಮ ದರ್ಶನ ಪಡೆದರು.

ಕೇಂದ್ರ ಸಚಿವ ಅನಂತ ಕುಮಾರ್

ಕೇಂದ್ರ ಸಚಿವ ಅನಂತ ಕುಮಾರ್

ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್ ಅವರಿಂದ ಅಂತಿಮ ನಮನ.

ದುಖಃಪತ್ತ ಕುಟುಂಬ

ದುಖಃಪತ್ತ ಕುಟುಂಬ

ಪ್ರಭಾ ಅವರ ಅಕಾಲಿಕ ಸಾವಿನಿಂದ ಕಂಗಾಲಾಗಿರುವ ಕುಟುಂಬದ ರೋಧನ

ಕೆ.ಜೆ.ಜಾರ್ಜ್ ಸಾಂತ್ವನ

ಕೆ.ಜೆ.ಜಾರ್ಜ್ ಸಾಂತ್ವನ

ವಿಜಯನಗರದ ಬಾಪೂಜಿ ಲೇಔಟ್ ನಲ್ಲಿಟ್ಟಿದ್ದ ಪ್ರಭಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಗೃಹ ಸಚಿವ ಕೆ.ಜೆ.ಜಾರ್ಜ್

ಸ್ವಾಂತ್ವನ ಹೇಳಿದ ಕರಂದ್ಲಾಜೆ

ಸ್ವಾಂತ್ವನ ಹೇಳಿದ ಕರಂದ್ಲಾಜೆ

ಪ್ರಭಾ ಪತಿ ಅರುಣ್ ಕುಮಾರ್ ಮತ್ತು ಕುಟುಂಬಕ್ಕೆ ಸಾಂತ್ವನ ಹೇಳಿದ ಸಂಸದೆ ಶೋಭಾ ಕರಂದ್ಲಾಜೆ

ಕುಟುಂಬದ ರೋಧನ

ಕುಟುಂಬದ ರೋಧನ

ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾದವಳನ್ನು ನೆನೆದು ರೋಧಿಸುತ್ತಿರುವ ಕುಟುಂಬ

ಅಂತಿಮ ನಮನ

ಅಂತಿಮ ನಮನ

ಪ್ರಭಾ ಅವರ ಪಾರ್ಥಿವ ಶರೀರದ ಪಕ್ಕ ಅವರ ಭಾವಚಿತ್ರ ಇರಿಸಿ ಅಂತಿಮ ನಮನ ಸಲ್ಲಿಸಲಾಯಿತು.

ಶಾಂತಕುಮಾರಿ ಭೇಟಿ

ಶಾಂತಕುಮಾರಿ ಭೇಟಿ

ಮೇಯರ್ ಶಾಂತಕುಮಾರಿ ಮತ್ತು ಮಾಜಿ ಸಚಿವ ವಿ.ಸೋಮಣ್ಣ ಕೇಂದ್ರ ಸಚಿವ ಅನಂತ ಕುಮಾರ್ ಅವರೊಂದಿಗೆ ತೆರಳಿ ಅಂತಿಮ ನಮನ ಸಲ್ಲಿಸಿದರು.

ಸಚಿವರ ಜತೆ ಆಯುಕ್ತ

ಸಚಿವರ ಜತೆ ಆಯುಕ್ತ

ಸಚಿವರಾದ ಜಾರ್ಜ್ ಮತ್ತು ರೋಷನ್ ಬೇಗ್ ಜತೆ ಬೆಂಗಳೂರು ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಪ್ರಭಾ ಕುಟುಂಬಕ್ಕೆ ಸಾಂತ್ವನ ತಿಳಿಸಿದರು.

ನಾಗರಿಕರಿಂದ ನಮನ

ನಾಗರಿಕರಿಂದ ನಮನ

ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾದ ಟೆಕ್ಕಿ ಪ್ರಭಾ ಅರುಣ್ ಕುಮಾರ್ ಅವರಿಗೆ ಅಂತಿಮ ನಮನ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+