ಬೆ.ಗ್ರಾಮಾಂತರದಲ್ಲಿ ಮುನಿರಾಜು ಭರ್ಜರಿ ಪ್ರಚಾರ
ಬೆಂಗಳೂರು,
ಮಾ.28 : ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಚುನಾವಣೆ ಕಾವು ಏರುತ್ತಿದೆ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರಾಜು ಗೌಡ ಕ್ಷೇತ್ರದ ತುಂಬಾ ಸಂಚರಿಸಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಕೊನೆಯ ದಿನ ನಾಮಪತ್ರ ಸಲ್ಲಿಸಿದ ಅವರು, ಪ್ರಚಾರದಲ್ಲಿ ಇತರ ಪಕ್ಷದ ಅಭ್ಯರ್ಥಿಗಳನ್ನು ಮೀರಿಸುತ್ತಿದ್ದಾರೆ. id="toptextpromo"> id='are-slot-1' class='oiad oi-axt oiadv'>ಕಾಂಗ್ರೆಸ್
ಪಕ್ಷದ ಡಿಕೆ ಸುರೇಶ್, ಜೆಡಿಎಸ್ ಪಕ್ಷದ ಪ್ರಭಾಕರ ರೆಡ್ಡಿ, ಆಮ್ ಆದ್ಮಿ ಪಕ್ಷದ ರವಿಕೃಷ್ಣಾ ರೆಡ್ಡಿ ಕ್ಷೇತ್ರದಲ್ಲಿ ಮುನಿರಾಜು ಅವರ ಎದುರಾಳಿಗಳು. ಸಾಮಾಜಿಕ ಜಾಲ ತಾಣಗಳಲ್ಲಿಯೂ ಸಕ್ರಿಯವಾಗಿರುವ ಮುನಿರಾಜು ಅವರು ಪ್ರಚಾರದ ಚಿತ್ರಗಳನ್ನು ಫೇಸ್ ಬುಕ್ ನಲ್ಲಿ ಹಾಕುವ ಮೂಲಕ ಸಾಮಾಜಿಕ ತಾಣಗಳಲ್ಲೂ ಪ್ರಚಾರ ನಡೆಸುತ್ತಿದ್ದಾರೆ. ಮುನಿರಾಜು ಪ್ರಚಾರದ ಚಿತ್ರಗಳು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ] id='are-slot-2' class='oiad oi-axt oiadv'>
ವಾಯುವಿಹಾರಿಗಳೊಂದಿಗೆ ಮಾತುಕತೆ
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರಾಜು ಗೌಡ ಜೆ.ಪಿ.ಉದ್ಯಾನವನದಲ್ಲಿ ವಾಯುವಿಹಾರಿಗಳೊಂದಿಗೆ ಮಾತುಕತೆ ನಡೆಸುವ ಮೂಲಕ ಮತಯಾಚಿಸಿದರು.

ವಕೀಲರ ಬೆಂಬಲ ಕೇಳಿದ ಮುನಿರಾಜು
ಮುನಿರಾಜು ರಾಮನಗರ ವಕೀಲರ ಸಂಘಕ್ಕೆ ಭೇಟಿ ನೀಡಿ ಅವರೊಂದಿಗೆ ಸಂವಾದ ನಡೆಸಿದರು. ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು.

ನಾಮಪತ್ರ ಸಲ್ಲಿಕೆ
ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಮಾರ್ಚ್ 26ರಂದು ಮುನಿರಾಜು ತಮ್ಮ ನಾಮತ್ರ ಸಲ್ಲಿಸಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್, ನಾರಾಯಣ ಸ್ವಾಮಿ, ಕೃಷ್ಣಪ್ಪ ಮುಂತಾದ ನಾಯಕರು ಈ ಸಂದರ್ಭದಲ್ಲಿ ಹಾಜರಿದ್ದರು

ಕಾರ್ಯಕರ್ತರ ಸಭೆ
ಆನೇಕಲ್ ತಾಲೂಕಿನಲ್ಲಿ ಕಾರ್ಯರ್ತರ ಸಭೆಯನ್ನು ಉದ್ದೇಶಿಸಿ ಮುನಿರಾಜು ಮಾತನಾಡಿದರು. ಚುನಾವಣೆಯಲ್ಲಿ ತಮ್ಮ ಗೆಲುವಿಗಾಗಿ ಶ್ರಮಿಸಬೇಕೆಂದು ಕರೆ ನೀಡಿದ ಅವರು, ಬಿಜೆಪಿಯ ಉದ್ದೇಶಗಳನ್ನು ಮನೆ-ಮನೆಗೆ ತಲುಪಿಸಿ ಎಂದು ಕರೆ ನೀಡಿದರು. [ಚಿತ್ರಕೃಪೆ ಮುನಿರಾಜು ಫೇಸ್ ಬುಕ್]

ಮಹಿಳಾ ಬೈಕ್ ಜಾಥಾ
ಜಿಲ್ಲೆಯ ಮಹಿಳಾ ಬಿಜೆಪಿ ಘಟಕ ಆನೇಕಲ್ ಪಟ್ಟಣದಲ್ಲಿ ಆಯೋಜಿಸಿದ್ದ ಬೈಕ್ ಜಾಥಾದಲ್ಲಿ ಮುನಿರಾಜು ಪಾಲ್ಗೊಂಡಿದ್ದರು. [ಚಿತ್ರಗಳಲ್ಲಿ ನೋಡಿ ಮುನಿರಾಜು ಪ್ರಚಾರ]












Click it and Unblock the Notifications