ಬಿಜೆಪಿ VS ಬಿಜೆಪಿ: ಭೀಕರ ಸೋಲಿನ ಎಂಟಿಬಿ VS ಸುಧಾಕರ್ ಫೈಟ್!
ಬೆಂಗಳೂರು: ಕರ್ನಾಟಕ ಚುನಾವಣೆಯಲ್ಲಿ 224 ಸ್ಥಾನಗಳಲ್ಲಿ 66 ಸ್ಥಾನ ಗಳಿಸಿ ಬಿಜೆಪಿ ನೆಲಕಚ್ಚಿದೆ. ಭೀಕರ ಸೋಲಿನ ಮಧ್ಯೆ ಬಿಜೆಪಿ VS ಬಿಜೆಪಿ ಫೈಟ್ ಶುರುವಾಗಿದ್ದು, BJP ಲೀಡರ್ಸ್ ತಮ್ಮ ಪಕ್ಷದೊಳಗೆ ಜಗಳ ಶುರು ಮಾಡಿದ್ದಾರೆ. ಅದರಲ್ಲೂ ಡಾ.ಕೆ.ಸುಧಾಕರ್ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಡಿದ್ದ ಆರೋಪಕ್ಕೆ ಎಂಟಿಬಿ ರೊಚ್ಚಿಗೆದ್ದು, ಬೀದಿ ಜಗಳ ಶುರುವಾಗಿದೆ.
ಅಷ್ಟಕ್ಕೂ ಬೆಳಗ್ಗೆ ಟ್ವೀಟ್ ಮಾಡಿದ್ದ ಡಾ.ಕೆ.ಸುಧಾಕರ್, '2018ರಲ್ಲಿ ಅಂದಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ನಮಗಾಗುತ್ತಿದ್ದ ಅನ್ಯಾಯದ ಬಗ್ಗೆ ಹೇಳಿಕೊಳ್ಳಲು ಶಾಸಕರು ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಮಾನ್ಯ ಸಿದ್ದರಾಮಯ್ಯನವರ ಬಳಿ ಹೋದಾಗಲೆಲ್ಲ ಈ ಸರ್ಕಾರದಲ್ಲಿ ನನ್ನದೇ ಏನು ನಡೆಯುತ್ತಿಲ್ಲ, ನನ್ನ ಕ್ಷೇತ್ರದ, ನನ್ನ ಜಿಲ್ಲೆಯ ಕೆಲಸಗಳೇ ಆಗುತ್ತಿಲ್ಲ ಎಂದು ಹೇಳುತ್ತಿದ್ದರು.' ಎಂದು ಗಂಭೀರ ಆರೋಪ ಮಾಡಿದ್ರು. ಅಲ್ಲದೆ ತಮ್ಮ ಟ್ವೀಟ್‌ನಲ್ಲಿ ಹಲವು ಸ್ಫೋಟಕ ವಿಚಾರ ಪ್ರಸ್ತಾಪಿಸಿದ್ದರು.

'2019ರ ಲೋಕಸಭೆ ಚುನಾವಣೆವರೆಗೂ ಸಹಿಸಿಕೊಳ್ಳಿ, ಲೋಕಸಭೆ ಚುನಾವಣೆ ನಂತರ ಯಾವುದೇ ಕಾರಣಕ್ಕೂ ಒಂದು ದಿವಸವೂ ಮಾನ್ಯ ಕುಮಾರಸ್ವಾಮಿ ಅವರ ನೇತೃತ್ವದ ಈ ಸಮ್ಮಿಶ್ರ ಸರ್ಕಾರ ಇರಲು ಬಿಡುವುದಿಲ್ಲ ಎಂದು ಶಾಸಕರುಗಳಿಗೆ ಸಮಾಧಾನ ಮಾಡುತ್ತಿದ್ದರು. ನಮ್ಮ ಕ್ಷೇತ್ರಗಳಲ್ಲಿ ನಮ್ಮನ್ನು ನಂಬಿದ ಕಾರ್ಯಕರ್ತರನ್ನ, ಮುಖಂಡರನ್ನ ಉಳಿಸಿಕೊಳ್ಳಲು ದೊಡ್ಡ ರಿಸ್ಕ್ ತೆಗೆದುಕೊಂಡು ರಾಜೀನಾಮೆ ಕೊಟ್ಟು ಮತ್ತೊಮ್ಮೆ ಜನರಿಂದ ಆರಿಸಿ ಬಂದು ಮಂತ್ರಿಗಳಾದೆವು.' ಎಂದು ಸುಧಾಕರ್ ಟ್ವೀಟ್ ಮಾಡಿದ್ದರು, ಅಲ್ಲದೆ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದರು.
ಸಿದ್ದರಾಮಯ್ಯ ಪರ ನಿಂತ ಎಂಟಿಬಿ?
'ನಮ್ಮ ನಡೆಯಲ್ಲಿ ಮಾನ್ಯ ಸಿದ್ದರಾಮಯ್ಯನವರ ಪ್ರೇರಣೆ, ಪರೋಕ್ಷ ಅಥವಾ ಅಪರೋಕ್ಷ ಪಾತ್ರ ಇಲ್ಲವೆಂದು ಸಿದ್ದರಾಮಯ್ಯನವರು ನಿರಾಕರಿಸಲು ಸಾಧ್ಯವೇ?' ಎನ್ನುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದರು. ಇದೀಗ ಅದೇ ಮಾತು ಡಾ.ಕೆ.ಸುಧಾಕರ್‌ಗೆ ಮುಳುವಾಗಿ ಪರಿಣಮಿಸಿದ್ದು, ಈ ಟ್ವೀಟ್‌ಗೆ ಮಾಜಿ ಸಚಿವ ಎಂಟಿಬಿ ನಾಗರಾಜ್ ತಿರುಗೇಟು ನೀಡಿದ್ದಾರೆ. ಈ ಮೂಲಕ ಬಿಜೆಪಿ ಒಳಗೆ ನಾಯಕರ ನಡುವೆ ಜಗಳ ಶುರುವಾಗಿದ್ದು, ಬೀದಿಗೆ ಬಂದು ನಿಂತಿದೆ.
'ಸುಧಾಕರ್‌ಗೆ ಭ್ರಮೆ' ಅಂದ್ರಾ ಎಂಟಿಬಿ?
'ಸಿದ್ದರಾಮಯ್ಯ ರವರನ್ನು ನಾನು ಕೂಡ ಹಲವಾರು ಬಾರಿ ಭೇಟಿ ಮಾಡಿ ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಕ್ಷೇತ್ರದಲ್ಲಿ ಹಾಗೂ ನಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿ ಏನು ಕೆಲಸ ಕಾರ್ಯಗಳು ಆಗುತ್ತಿಲ್ಲವೆಂದು ಹೇಳಿಕೊಂಡಾಗ ಲೋಕಸಭೆ ಚುನಾವಣೆವರೆಗೆ ಸುಮ್ಮನಿರಿ ಎಂದು ಹೇಳಿದ್ದರು ಇದು ಸತ್ಯ. ಮಾಜಿ ಸಚಿವರಾದ ಸುಧಾಕರ್ ಇಂದು ಮಾನ್ಯ ಸಿದ್ದರಾಮಯ್ಯ ಬಗ್ಗೆ ಟ್ವೀಟ್ ಮಾಡಿರುವ ಮಾತು ಸತ್ಯಕ್ಕೆ ದೂರ, ಸುಧಾಕರ್ ರವರು ಚುನಾವಣೆಯಲ್ಲಿ ಸೋತ ನಂತರ ಭ್ರಮನಿರಸನರಾಗಿ ಈ ಮಾತು ಹೇಳಿದ್ದಾರೆ. ಹಾಗಾದರೆ, ಇಷ್ಟು ದಿನ ಏಕೆ ಸುಮ್ಮನಿದ್ದರು?' ಎಂದು ಎಂಟಿಬಿ ಪ್ರಶ್ನಿಸಿದ್ದಾರೆ.

ಇಷ್ಟಕ್ಕೇ ಸುಮ್ಮನಾಗದೆ ತಮ್ಮದೇ ಬಿಜೆಪಿ ಪಕ್ಷದ ಮತ್ತೊಬ್ಬ ನಾಯಕರ ಸುಧಾಕರ್ ವಿರುದ್ಧ ಮಾತಿನ ಬಾಣ ಬಿಟ್ಟಿರುವ ಎಂಟಿಬಿ ನಾಗರಾಜ್, 'ಬಿಜೆಪಿ ಸೇರಲು ಸಿದ್ದರಾಮಯ್ಯರವರ ಪ್ರೇರಣೆ, ಪರೋಕ್ಷ ಅಥವಾ ಅಪರೋಕ್ಷ ಪಾತ್ರ ಇತ್ತೆಂದು ಸುಧಾಕರ್ ರವರು ತಮ್ಮ ಮನೆ ದೇವರ ಮೇಲೆ ಪ್ರಮಾಣ ಮಾಡಿ ಹೇಳುವರೆ? ಇಷ್ಟು ದಿನ ಮೌನವಾಗಿದ್ದು?ಈಗ ಇದರ ಪ್ರಸ್ತಾಪದ ಮರ್ಮವಾದರೂ ಏನು?' ಎಂದು ಖಡಕ್ ಆಗಿ ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಕಮಲ ಪಾಳಯದ ಒಳಗೆ ತಿಕ್ಕಾಟ ಶುರುವಾದಂತೆ ಕಾಣುತ್ತಿದೆ.
ಬಿಜೆಪಿ ಸೇರಲು ಸಿದ್ದರಾಮಯ್ಯರವರ ಪ್ರೇರಣೆ, ಪರೋಕ್ಷ ಅಥವಾ ಅಪರೋಕ್ಷ ಪಾತ್ರ ಇತ್ತೆಂದು ಸುಧಾಕರ್ ರವರು ತಮ್ಮ ಮನೆ ದೇವರ ಮೇಲೆ ಪ್ರಮಾಣ ಮಾಡಿ ಹೇಳುವರೆ?
— MTB Nagaraj (@MTB_Nagaraj) May 17, 2023
ಇಷ್ಟು ದಿನ ಮೌನವಾಗಿದ್ದು?ಈಗ ಇದರ ಪ್ರಸ್ತಾಪದ ಮರ್ಮವಾದರೂ ಏನು?
ಒಟ್ನಲ್ಲಿ ಬಿಜೆಪಿ ಸಚಿವರು ಭೀಕರ ಸೋಲು ಕಂಡ ನಂತರ ಕಿತ್ತಾಟ ಶುರು ಮಾಡಿರುವುದು ತೀವ್ರ ಕುತೂಹಲ ಕೆರಳಿಸಿದೆ. ಏಕೆಂದರೆ ಇವರೆಲ್ಲಾ ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲೇ ಇದ್ದವರು. ಅದರಲ್ಲೂ ಡಾ.ಕೆ.ಸುಧಾಕರ್ ಕೂಡ ಹಿಂದೆ ಕಾಂಗ್ರೆಸ್ ಪಕ್ಷದಲ್ಲೇ ಇದ್ದವರು, ಆದರೆ ನಂತರ ಬಿಜೆಪಿ ಸೇರಿದ್ದರು. ಕೆಲ ದಿನದಿಂದ ಕಾಂಗ್ರೆಸ್ ಪಕ್ಷದ ಬೆಳವಣಿಗೆ ಬಗ್ಗೆ ಟ್ವೀಟ್ ಮಾಡುತ್ತಾ, ಒಕ್ಕಲಿಗ ಸಿಎಂ ವಿಚಾರ ಪ್ರಸ್ತಾಪಿಸುತ್ತಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಸುಧಾಕರ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈಗ ಎಂಟಿಬಿ ನಾಗರಾಜ್ ಕೂಡ ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿ ತಮ್ಮದೇ ಪಕ್ಷದ ಮಾಜಿ ಶಾಸಕನ ವಿರುದ್ಧ ತಿರುಗಿಬಿದ್ದಿದ್ದಾರೆ.
-
Viral Video: ತಮಿಳುನಾಡು ಚುನಾವಣೆ: ಹಸಿ ಸೊಪ್ಪು, ತರಕಾರಿ ತಿನ್ನುತ್ತಾ ಮತಯಾಚಿಸಿದ ಸ್ವತಂತ್ರ ಅಭ್ಯರ್ಥಿ ನಟ ಮನ್ಸೂರ್ ಅಲಿ ಖಾನ್ -
ಅಧಿಕಾರ ಬದಲಾವಣೆ; ನನ್ನ-ಸಿಎಂ ಬಿಟ್ಟು ಬೇರೆಯವರ ಮಾತು ಮುಖ್ಯವಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ -
Raghav Chadha: ರಾಘವ್ ಚಡ್ಡಾ: ಉಲ್ಕಾ ರಾಜಕೀಯಕ್ಕೆ ಎಷ್ಟು ಕಿಮ್ಮತ್ತು: ರಾಜಾರಾಂ ತಲ್ಲೂರು ಬರಹ -
ಬಾಗಲಕೋಟೆಗೆ ಸಿದ್ದರಾಮಯ್ಯ ದ್ರೋಹ ಮಾಡಿದ್ರೆ ಪಕ್ಷ ಮತ್ತೆ ಗೆಲ್ಲುತ್ತಿತ್ತೇ? ಬಸವರಾಜ ಬೊಮ್ಮಾಯಿಗೆ ಕಾಂಗ್ರೆಸ್ ತಿರುಗೇಟು -
ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಗ್ಯಾರಂಟಿಯೇ ರಕ್ಷಾಕವಚ: ಪ್ರಧಾನಿ 'ಹುಸಿ ಭರವಸೆ' ಟೀಕೆಗೆ ಸುರ್ಜೆವಾಲ ತಿರುಗೇಟು -
IPL ವಿಐಪಿ ಟಿಕೆಟ್ ದುರ್ಬಳಕೆ ಆಗಿಲ್ಲ: ಶಾಸಕರ ಕುಟುಂಬಸ್ಥರು ಪಂದ್ಯ ನೋಡಿದರೆ ತಪ್ಪೇನು; ಪರಮೇಶ್ವರ್ ಪ್ರಶ್ನೆ -
Bengaluru: ನಸುಕಿನ ಜಾವ 3 ಗಂಟೆಗೆ ರಾಪಿಡೋ ರೈಡರ್ ತೋರಿದ ಮಾನವೀಯತೆಗೆ ಮಹಿಳೆ ಫಿದಾ, Video Viral -
ಧನುಷ್ ಜೊತೆ ಸ್ನೇಹ ಕಳೆದುಕೊಂಡಿದ್ದು ನನ್ನ ಜೀವನದ ದೊಡ್ಡ ನಷ್ಟ: ಪತ್ನಿ ನಯನತಾರ ಜೊತೆಗಿನ ಮನಸ್ತಾಪಕ್ಕೆ ವಿಘ್ನೇಶ್ ಶಿವನ್ ಬೇಸರ -
2026ರ PUC ಫಲಿತಾಂಶಕ್ಕೆ ಕ್ಷಣಗಣನೆ; ಈ ಬಾರಿ ಡಿಜಿಲಾಕರ್ನಲ್ಲೂ ರಿಸಲ್ಟ್ ಲಭ್ಯ, ಚೆಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ -
Gold Price April 6: ಚಿನ್ನದ ಬೆಲೆ ಭರ್ಜರಿ 18,000 ರೂ. ಇಳಿಕೆ, ಬಂಗಾರ ಪ್ರಿಯರಿಗೆ ಗುಡ್ನ್ಯೂಸ್ -
Darshan: ನಟ ದರ್ಶನ್ ಕಾನೂನು ಹೋರಾಟಕ್ಕೆ ಗೆಲುವು: 'ಬಾಸ್' ಸಿನಿಮಾ ಬಿಡುಗಡೆಗೆ ಕೋರ್ಟ್ ತಡೆ -
ಒರಾಕಲ್ನಲ್ಲಿ ಕೆಲಸ ಕಳೆದುಕೊಂಡ ಟೆಕ್ಕಿ ಊರಿಗೆ ಮರಳಿ ಉಬರ್ ಓಡಿಸುತ್ತಿರುವ ಸ್ಫೂರ್ತಿದಾಯಕ ಕಥೆ Viral












Click it and Unblock the Notifications