ಎಂಟಿಬಿ ನಾಗರಾಜ್ ಬೆನ್ನಿಗೆ ನಿಂತ ಘಟಾನುಘಟಿ ನಾಯಕರು!

ಬೆಂಗಳೂರು, ಜೂನ್ 02 : ಹೊಸಕೋಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಸೋತ ಎಂಟಿಬಿ ನಾಗರಾಜ್ ವಿಧಾನ ಪರಿಷತ್ ಸದಸ್ಯರಾಗಲಿದ್ದಾರೆಯೇ?. ಬಿಜೆಪಿಯ ಘಟಾನುಘಟಿ ನಾಯಕರು ಅವರ ಬೆನ್ನಿಗೆ ನಿಂತಿದ್ದು ಕ್ಷೇತ್ರದಲ್ಲಿ ಅವರು ಹೇಳುವ ಮಾತೇ ಅಂತಿಮ ಎಂದಿದ್ದಾರೆ.

Recommended Video

      ವಿರಾಟ್ ತಮ್ಮ ನಾಯಕತ್ವದ ಬೆಳವಣಿಗೆಗೆ ಕಾರಣ ಯಾರು ಅಂತಾ ಹೇಳಿದ್ದಾರೆ ನೋಡಿ | Virat Kohli | Oneindia Kannada

      ಎಂಬಿಟಿ ನಾಗರಾಜ್‌ಗೆ ಬೆಂಬಲವಾಗಿ ಕಂದಾಯ ಸಚಿವ ಆರ್. ಅಶೋಕ, ಗೃಹ ಸಚಿವ ಬಸವರಾಜ ಬೊಮ್ಮಯಿ ನಿಂತಿದ್ದಾತೆ. ಹೊಸಕೋಟೆ ಕ್ಷೇತ್ರದಲ್ಲಿ ಎಂಟಿಬಿ ನಾಗರಾಜ್ ಮಾತು ಅಂತಿಮ ಎಂದು ಹೇಳುವ ಮೂಲಕ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡಗೆ ಪರೋಕ್ಷ ಸಂದೇಶ ರವಾನೆ ಮಾಡಿದ್ದಾರೆ.

      "ಎಂಟಿಬಿ ನಾಗರಾಜ್ ಶಾಸಕ, ಮಂತ್ರಿ ಸ್ಥಾನ ತ್ಯಾಗ ಮಾಡಿ ಪಕ್ಷಕ್ಕೆ ಬಂದಿದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ನಮ್ಮ ಸರ್ಕಾರ ಬರಲು ಅವರ ಪಾತ್ರ ಮುಖ್ಯವಾದದ್ದು. ಆದ್ದರಿಂದ, ಅವರಿಗೆ ಪರಿಷತ್ ಸ್ಥಾನ ನೀಡಬೇಕಿದೆ" ಎಂದು ಆರ್. ಅಶೋಕ ಹೇಳಿದ್ದಾರೆ.

      "ಎಂಟಿಬಿ ನಾಗರಾಜ್ ಹೊಸಕೋಟೆ ಭಾಗದಲ್ಲಿ ನಮ್ಮ ಪ್ರಕ್ಷದ ಪ್ರಶ್ನಾತೀತ ನಾಯಕರಾಗಿದ್ದಾರೆ. ಅವರ ತೀರ್ಮಾನವೇ ಅಲ್ಲಿ ಅಂತಿಮ. ಯಾರೂ ಪಕ್ಷಕ್ಕೆ ಬರುತ್ತೇವೆ ಎಂದರೂ ಎಂಟಿಬಿ ಅವರನ್ನು ಬಿಟ್ಟು ಯಾವುದೇ ತೀರ್ಮಾನ ಮಾಡುವುದಿಲ್ಲ" ಎಂದು ಆರ್. ಅಶೋಕ ಸ್ಪಷ್ಟಪಡಿಸಿದ್ದಾರೆ.

      ಆರ್. ಅಶೋಕ ಜೊತೆ ಮಾತಕತೆ

      ಆರ್. ಅಶೋಕ ಜೊತೆ ಮಾತಕತೆ

      ವಿಧಾನ ಪರಿಷತ್ ಚುನಾವಣೆ ಮೇಲೆ ಕಣ್ಣಿಟ್ಟಿರುವ ಎಂಟಿಬಿ ನಾಗರಾಜ್ ವಿಧಾನಸೌಧದಲ್ಲಿ ಇಂದು ಕಂದಾಯ ಸಚಿವ ಆರ್. ಅಶೋಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಉಭಯ ನಾಯಕರು ಅವರಿಗೆ ಅಭಯ ನೀಡಿದ್ದು, ಬೆಂಬಲ ನೀಡುವ ಭರವಸೆ ನೀಡಿದ್ದಾರೆ.

      ಆರ್. ಅಶೋಕ ಹೇಳಿದ್ದೇನು?

      ಆರ್. ಅಶೋಕ ಹೇಳಿದ್ದೇನು?

      ಮಾಧ್ಯಮಗಳ ಜೊತೆ ಮಾತನಾಡಿದ ಆರ್ ಅಶೋಕ, "ಎಂಟಿಬಿ ನಾಗರಾಜ್ ಅವರನ್ನು ನಾನೇ ಪಕ್ಷಕ್ಕೆ ಕರೆತಂದಿದ್ದೇನೆ. ಹಾಗಾಗಿ ಸ್ಥಾನಮಾನ ಕೊಡಿಸುವ ಜವಾಬ್ದಾರಿಯೂ ನನ್ನ ಮೇಲಿದೆ. ಅಂತಿಮವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪಕ್ಷದ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ" ಎಂದರು.

      ಉಪ ಚುನಾವಣೆ ಕದನ

      ಉಪ ಚುನಾವಣೆ ಕದನ

      ಹೊಸಕೋಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ನಾಯಕರಿಗೆ ಮುಖಭಂಗವಾಗಿತ್ತು. ಒಂದು ಕಡೆ ಶರತ್ ಬಚ್ಚೇಗೌಡ ಪಕ್ಷದ ನಾಯಕರ ಮಾತನ್ನು ಧಿಕ್ಕರಿಸಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಎಂಟಿಬಿ ನಾಗರಾಜ್ ಚುನಾವಣೆಯಲ್ಲಿ ಸೋಲು ಕಂಡರು. ಈಗ ಅವರು ವಿಧಾನ ಪರಿಷತ್ ಸದಸ್ಯರಾಗುವ ಉತ್ಸಾಹದಲ್ಲಿದ್ದಾರೆ.

      ಇಬ್ಬರು ಸೋತಿದ್ದಾರೆ

      ಇಬ್ಬರು ಸೋತಿದ್ದಾರೆ

      ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡ ಬಳಿಕ ನಡೆದ ಉಪ ಚುನಾವಣೆಯಲ್ಲಿ ಎಚ್. ವಿಶ್ವನಾಥ್, ಎಂಟಿಬಿ ನಾಗರಾಜ್ ಸೋತಿದ್ದಾರೆ. ಆರ್. ಶಂಕರ್ ರಾಣೆಬೆನ್ನೂರಿನಲ್ಲಿ ಟಿಕೆಟ್ ಬೇರೆಯವರಿಗೆ ಬಿಟ್ಟುಕೊಟ್ಟಿದ್ದಾರೆ. ಈಗ ಮೂವರು ನಾಯಕರು ಪರಿಷತ್ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+