ದುಬಾರಿ ಕಾರು ಖರೀದಿಸಿದ ಅನರ್ಹ ಶಾಸಕ ಎಂಟಿಬಿ ನಾಗರಾಜ್

ಬೆಂಗಳೂರು, ಆಗಸ್ಟ್ 14 : ಹೊಸಕೋಟೆ ಕ್ಷೇತ್ರದ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಮತ್ತೆ ಸುದ್ದಿಯಲ್ಲಿದ್ದಾರೆ. ದುಬಾರಿ ಕಾರು ಖರೀದಿ ಮಾಡಿರುವ ಅವರು ಮುಖ್ಯಮಂತ್ರಿಗಳ ಗೃಹ ಕಚೇರಿಗೆ ಆಗಮಿಸಿದರು.

ಬುಧವಾರ ಎಂಟಿಬಿ ನಾಗರಾಜ್ ರೋಲ್ಸ್ ರಾಯ್ಸ್ ಪ್ಯಾಂಟಮ್ ಕಾರು ಖರೀದಿ ಮಾಡಿದ್ದಾರೆ. ಹೊಸ ಕಾರಿನ ಪೂಜೆ ನಗರದಲ್ಲಿ ನಡೆದಿದ್ದು, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭೇಟಿ ಮಾಡಲು ಅವರು ಹೊಸ ಕಾರಿನಲ್ಲಿ ಬಂದರು.

ದುಬೈನಲ್ಲಿ ವಿಶೇಷವಾಗಿ ಸಿದ್ಧಪಡಿಸಿದ ಕಾರನ್ನು ಬೆಂಗಳೂರಿಗೆ ತರಲಾಗಿದೆ. ಈ ಕಾರಿನ ಮೌಲ್ಯ ಸುಮಾರು 12 ಕೋಟಿ ಎಂದು ತಿಳಿದುಬಂದಿದೆ. ವೈಟ್ ಪೆಟ್ರೋಲ್‌ನಿಂದ ಕಾರನ್ನು ಓಡಿಸಲಾಗುತ್ತದೆ.

ಕೆಎ 59, ಎನ್ 888 ನೋಂದಣಿ ಸಂಖ್ಯೆಯ ಕಾರಿಗೆ ದೇವಾಲಯದಲ್ಲಿ ಪೂಜೆ ಸಲ್ಲಿಸಿರುವ ಎಂಟಿಬಿ ನಾಗರಾಜ್ ಅದರ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದಾರೆ.

ಮಂಗಳವಾರ ಎಂಟಿಬಿ ನಾಗರಾಜ್ ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಜಿಲ್ಲೆಗಳಿಗೆ ನೆರವಾಗಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ದೇಣಿಗೆ ನೀಡಿದ್ದರು.

ಯಡಿಯೂರಪ್ಪ ಭೇಟಿಗೆ ಆಗಮನ

ಯಡಿಯೂರಪ್ಪ ಭೇಟಿಗೆ ಆಗಮನ

ಕೆಎ 59, ಎನ್ 888 ನೋಂದಣಿ ಸಂಖ್ಯೆಯ ಕಾರಿಗೆ ಪೂಜೆ ಸಲ್ಲಿಸಿದ ಬಳಿಕ ಎಂಟಿಬಿ ನಾಗರಾಜ್ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭೇಟಿ ಮಾಡಲು ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ್ದಾರೆ. ಹಲವಾರು ಜನರು ಕಾರಿನ ಮುಂದೆ ಫೋಟೋ ತೆಗೆದುಕೊಳ್ಳುತ್ತಿದ್ದಾರೆ.

ಎಂಟಿಬಿ ನಾಗರಾಜ್ ಆಸ್ತಿ ಎಷ್ಟು?

ಎಂಟಿಬಿ ನಾಗರಾಜ್ ಆಸ್ತಿ ಎಷ್ಟು?

2013ರ ಚುನಾವಣೆಯಲ್ಲಿ ತಮ್ಮ ಕುಟುಂಬದ ಆಸ್ತಿ 470 ಕೋಟಿ ಎಂದು ಎಂಟಿಬಿ ನಾಗರಾಜ್ ಘೋಷಣೆ ಮಾಡಿದ್ದರು. 2018ರ ಚುನಾವಣೆಗೆ ಸ್ಪರ್ಧೆ ಮಾಡುವಾಗ ಅವರು ತಮ್ಮ ವೈಯಕ್ತಿಕ ಆಸ್ತಿ 708 ಕೋಟಿ, ಪತ್ನಿ ಹೆಸರಿನಲ್ಲಿ 306 ಕೋಟಿ ಆಸ್ತಿ ಇದೆ ಎಂದು ಘೋಷಿಸಿದ್ದಾರೆ.

ಎಂಟಿಬಿ ನಾಗರಾಜ್ ಹೊಂದಿರುವ ಕೃಷಿಯೇತರ ಭೂಮಿ ಮೌಲ್ಯ 370 ಕೋಟಿ. ಕುಟುಂಬದ ಒಟ್ಟು ಸಾಲ 233 ಕೋಟಿಯಾಗಿದೆ.

ಶಾಸಕ ಸ್ಥಾನದಿಂದ ಅನರ್ಹ

ಶಾಸಕ ಸ್ಥಾನದಿಂದ ಅನರ್ಹ

2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಹೊಸಕೋಟೆ ಕ್ಷೇತ್ರದಲ್ಲಿ ಎಂಟಿಬಿ ನಾಗರಾಜ್ ಕಣಕ್ಕಿಳಿದಿದ್ದರು. 98,824 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಜುಲೈನಲ್ಲಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸ್ಪೀಕರ್ ರಮೇಶ್ ಕುಮಾರ್ ಶಾಸಕ ಸ್ಥಾನದಿಂದ ಅವರನ್ನು ಅನರ್ಹಗೊಳಿಸಿದ್ದಾರೆ. ಕಾಂಗ್ರೆಸ್‌ನಿಂದ ಸಹ ಅವರನ್ನು ಉಚ್ಛಾಟನೆ ಮಾಡಲಾಗಿದೆ.

ಪ್ರಮೋದ್ ಮಧ್ವರಾಜ್ ಬಳಿ ಇದೆ

ಪ್ರಮೋದ್ ಮಧ್ವರಾಜ್ ಬಳಿ ಇದೆ

ಉಡುಪಿ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ಬಳಿ ರೋಲ್ಸ್ ರಾಯಲ್ಸ್ ಫೋಸ್ಟ್ ಎಸ್‌ಬಡ್ಲ್ಯುಬಿ ಕಾರು ಇದೆ. ಅದರ ಮೌಲ್ಯ ಸುಮಾರು 5.80 ಕೋಟಿ. ನೋಂದಣಿಗೆ 90 ಲಕ್ಷ, ಸೇವಾ ಶುಲ್ಕ 19 ಲಕ್ಷ, ಸೇವಾ ತೆರಿಗೆ 2.66 ಲಕ್ಷ, ಕಸ್ಟಮ್ಸ್ ಕ್ಲಿಯರೆನ್ಸ್‌ಗೆ 2.22 ಲಕ್ಷ ಮೊತ್ತವನ್ನು ಅವರು ಪಾವತಿ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+