New Metro Line: ಈ ಕಾರಣಕ್ಕೆ ತುಮಕೂರು ಮೆಟ್ರೋ ಯೋಜನೆಗೆ ತೇಜಸ್ವಿ ಸೂರ್ಯ ವಿರೋಧ
ಬೆಂಗಳೂರು, ನವೆಂಬರ್ 17: ಕರ್ನಾಟಕ ರಾಜ್ಯ ಸರ್ಕಾರ ಬೆಂಗಳೂರು ಮೆಟ್ರೋ ಹಸಿರು ಮಾರ್ಗವನ್ನು ತುಮಕೂರುವರೆಗೆ ವಿಸ್ತರಣೆಗೆ ಒಪ್ಪಿದೆ. ನೆನ್ನೆ ಭಾನುವಾರ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ವಿವರವಾದ ಯೋಜನಾ ವರದಿ (DPR) ಯಾರಿಗೆ ಟೆಂಡರ್ ಆಹ್ವಾನಿಸಿದ್ದು, ನವೆಂಬರ್ 21ರಂದು ಬಿಡ್ ಆಗಲಿದೆ. ಯೋಜನೆ ಸಾಕಾರಗೊಳಿಸಲು ಸಕಲ ತಯಾರಿ ನಡೆಯುತ್ತಿದೆ. ಈ ಮಧ್ಯೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಕೆಲವು ಕಾರಣಗಳನ್ನು ನೀಡಿ ಈ ಯೋಜನೆಯನ್ನು ವಿರೋಧಿಸಿದ್ದಾರೆ.
ಹೌದು, ತುಮಕೂರಿಗೆ ಬೆಂಗಳೂರಿಗೆ ವಿಶ್ವ ದರ್ಜೆಯ ಸಂಪರ್ಕ ನಿಸ್ಸಂದೇಹವಾಗಿ ಬೇಕು. ಆದರೆ ಮೆಟ್ರೋ ಸರಿಯಾದ ಆಯ್ಕೆಯೇ? ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪ್ರಶ್ನಿಸಿದ್ದಾರೆ. ಬೆಂಗಳೂರಿನ ಮಾದವಾರದಿಂದ ತುಮಕೂರುವರೆಗೆ ವಿಸ್ತರಣೆ ಆಗಲಿರುವ ಯೋಜನೆಗೆ ಅವರು ಆಕ್ಷೇಪ ಎತ್ತಿದ್ದಾರೆ. ಅದಕ್ಕೆ ಒಂದಷ್ಟು ಅವರೇ ನೀಡಿದ ಕಾರಣಗಳು ಇಲ್ಲಿವೆ.

ತುಮಕೂರಿಗೆ ಮೆಟ್ರೋ ನಿರ್ಮಿಸುವುದು ನಗರ ಯೋಜನೆಗೆ ದುಃಸ್ವಪ್ನವಾಗುತ್ತದೆ. ಈ ಮೆಟ್ರೋ ವಿಸ್ತರಣೆ ಯೋಜನೆಗೆ ಅತಿಯಾದ ವೆಚ್ಚ ಮಾಡಲು ನಿರ್ಧರಿಸಲಾಗಿದೆ. ಇದು ಅರ್ಥಹೀನವಾದ್ದದ್ದು. ಬೆಂಗಳೂರು ನಗರದಿಂದ ಹೊರಗಿನ ದೂರದ ಪ್ರದೇಶಗಳಿಗೆ, ತಾಲೂಕುಗಳ ವ್ಯಾಪ್ತಿಯ ನಾವು ಉಪನಗರ ರೈಲುಗಳನ್ನು ಹೊಂದಿದ್ದೇವೆ. ಹೀಗಿದ್ದಾಗ ಈ ಯೋಜನೆ ಬೇಕಾ? ಎಂದು ಕೇಳಿದ್ದಾರೆ.
ಉಪನಗರ ಯೋಜನೆ ಪೂರ್ಣಗೊಳಿಸಿ..
ರಾಜ್ಯ ಸರ್ಕಾರ ದೀರ್ಘ ಕಾಲದಿಂದ ಬಾಕಿ ಇರುವ ಬೆಂಗಳೂರು ಉಪನಗರ ರೈಲು ಯೋಜನೆಗಳನ್ನು ಪೂರ್ಣಗೊಳಿಸಬೇಕು. ಕಾಮಗಾರಿಗೆ ವೇಗ ನೀಡಿ ತುಮಕೂರಿಗೆ ಸಂಪರ್ಕವನ್ನು ಸುಧಾರಿಸಬೇಕು. ಅದನ್ನು ಬಿಟ್ಟು ಕಾಂಗ್ರೆಸ್ ಸರ್ಕಾರ ವರ್ಷಗಳ ಕಾಲ ಸಮಯ ಬೇಕಾಗುವ ಮೆಟ್ರೋ ಯೋಜನೆಗೆ ಡಿಪಿಆರ್ ತಯಾರಿಸಲು ಕೋಟಿಗಟ್ಟಲೆ ಖರ್ಚು ಮಾಡಲು ಬಯಸುತ್ತದೆ ಎಂದು ಸರ್ಕಾರದ ವಿರುದ್ಧ ದೂರಿದರು.
ಮತ್ತೊಂದು ಮುಖ್ಯ ವಿಷಯವೇನೆಂದರೆ, ಮೆಟ್ರೋದ ಸರಾಸರಿ ಕಾರ್ಯಾಚರಣೆಯ ವೇಗ ಗಂಟೆಗೆ ಸುಮಾರು 34 ಕಿಲೋ ಮೀಟರ್ ಇದೆ. ಬೆಂಗಳೂರಿನಿಂದ ತುಮಕೂರು ಉದ್ದದ ಮಾರ್ಗವಾಗುತ್ತದೆ. ದೀರ್ಘ ಅಂತರ-ನಗರಗಳಿಗೆ ಸಂಪರ್ಕವು ಬಸ್‌ನಂತಾಗುತ್ತದೆ ಎಂದಿದ್ದಾರೆ. ಈ ಕಾರಣಕ್ಕೆ ಯೋಜನೆಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಮಾದಾವರದಿಂದ ತುಮಕೂರಿಗೆ ಎರಡು ಗಂಟೆ ಬೇಕಾಗಬಹುದೆಂದು ಹೇಳಿದ್ದರು.
ಇದು ಸರ್ಕಾರದ ಅಜಾಗಕೂರ ನಿರ್ಧಾರ
ಮುಂದುವರಿದ ಸಂಸದರು, ಕಾಂಗ್ರೆಸ್ ಸರ್ಕಾರ ಪದೇ ಪದೇ ಮೂಲಭೂತ ಅಂಶಗಳ ವಿಚಾರದಲ್ಲಿ ತಪ್ಪಾದ ಭಾವನೆ ಹೊಂದಿರುವುದು ಗೊತ್ತಾಗುತ್ತದೆ. ಈಗಾಗಲೇ ನಗರದಲ್ಲಿ ಸುರಂಗ ರಸ್ತೆ ಯೋಜನೆ, ಅಂತರ-ನಗರ ಮೆಟ್ರೋ ಪ್ರಸ್ತಾವನೆಗಳ ಸೇರಿದಂತೆ ಹಲವು ಯೋಜನೆಗಳಲ್ಲಿ ಈ ಅನಿಯಂತ್ರಿತ ಮತ್ತು ಅಜಾಗರೂಕ ನಿರ್ಧಾರಗಳು ಕೈಗೊಂಡಿದೆ. ನಾಗರಿಕರ ಸೌಲಭ್ಯಗಳನ್ನು ನಿರಾಕರಿಸುತ್ತಿದೆ. ಕಾಂಗ್ರೆಸ್ ಸರ್ಕಾರ ಶೀಘ್ರದಲ್ಲೇ ಇಂತಹ ತರ್ಕಬದ್ಧವಲ್ಲದ ವಿಚಾರಗಳಿಂದ ಹೊರಬರುಬೇಕು ಎಂದು ಅವರು ಆಶಿಸಿದ್ದಾರೆ.
ಬಿಎಂಆರ್‌ಸಿಎಲ್ ಈ ಮೆಟ್ರೋ ಯೋಜನೆಗೆ ಡಿಪಿಆರ್ ತಯಾರಿಸಲು ನೆನ್ನೆ ಭಾನುವಾರ ಟೆಂಡರ್ ಆಹ್ವಾನಿಸಿದೆ. ಯಾವೆಲ್ಲ ಅಂಶಗಳು ಇರಬೇಕೆಂದು ಸೂಚಿಸಿದ್ದು, ನವೆಂಬರ್ 21ರಂದು ಬಿಡ್ ನಡೆಯಲಿದೆ. ನಂತರ ಡಿಪಿಆರ್ ತಯಾರಿಕೆಗೆ ಐದು ತಿಂಗಳ ಕಾಲವಾಶ ನೀಡಲಿದೆ.












Click it and Unblock the Notifications