ಬೆಂಗಳೂರು ನಿಮ್ಹಾನ್ಸ್‌ನಲ್ಲಿ 300 ಹಾಸಿಗೆಗಳ ಪಾಲಿಟ್ರಾಮಾ ಕೇಂದ್ರ...
ಬೆಂಗಳೂರು, ಡಿಸೆಂಬರ್ 13: ಬೆಂಗಳೂರು ಉತ್ತರ ಕ್ಯಾಂಪಸ್‌ನ 'ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ' (NIMHANS) ನಲ್ಲಿ 300 ಹಾಸಿಗೆಗಳ ಪಾಲಿಟ್ರಾಮಾ ಕೇಂದ್ರ ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಬಿಜೆಪಿ ಸಂಸದರು ಒತ್ತಾಯಿಸಿದ್ದಾರೆ. ಅದರ ಸ್ಥಾಪನೆಗೆ ಹಣ ಮಂಜೂರು ಮಾಡುವಂತೆ ಗುರುವಾರ ದೆಹಲಿ ಭೇಟಿ ವೇಳೆ ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಬಿಜೆಪಿ ಸಂಸದರ ಡಾ.ಸಿಎನ್. ಮಂಜುನಾತ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರನ್ನು ಭೇಟಿ ಮಾಡಿದ್ದಾರೆ. ಆರೋಗ್ಯ ಕ್ಷೇತ್ರ, ಜನರ ಆರೋಗ್ಯ ವಿಚಾರದಲ್ಲಿ ಕಾಳಿಜಿ ಇರುವ ಸಂಸದರು ಭೇಟಿ ವೇಳೆ ಕೆಲವು ಮಹತ್ವದ ವಿಚಾರ ಚರ್ಚೆ ಮಾಡಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ (ಎಕ್ಸ್) ಮಾಹಿತಿ ಹಂಚಿಕೊಂಡಿದ್ದಾರೆ.

ಬೆಂಗಳೂರು ಉತ್ತರ ಕ್ಯಾಂಪಸ್‌ನಲ್ಲಿ ನಿಮ್ಹಾನ್ಸ್‌ನಲ್ಲಿ 300 ಹಾಸಿಗೆಗಳ ಪಾಲಿಟ್ರಾಮಾ ಕೇಂದ್ರವನ್ನು ಸ್ಥಾಪಿಸುವ ಅಗತ್ಯವಿದೆ. ಅದರ ಸ್ಥಾಪನಗೆ ತಾವು ಹಣ ಮಂಜೂರು ಮಾಡುವಂತೆ ಅವರು ಮನವಿ ಮಾಡಿದರು.
ದೈನಂದಿನ ರೋಗಿಗಳ ಸಂಖ್ಯೆ 2,500 ಕ್ಕೆ ಏರಿಕೆ
ಇಲ್ಲಿ ಪಾಲಿಟ್ರಾಮಾ ಕೇಂದ್ರ ಸ್ಥಾಪಿಸಿದರೆ ಅಗತ್ಯವಿರುವ ರೋಗಿಗಳಿಗೆ ಕೈಗೆಟುಕುವ ವೆಚ್ಚದಲ್ಲಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ದೇಶದ ಪ್ರಧಾನ ಮಾನಸಿಕ ಆರೋಗ್ಯ ಸಂಸ್ಥೆಯಾದ ನಿಮ್ಹಾನ್ಸ್‌ನಲ್ಲಿ ಹೊರರೋಗಿಗಳ ಸಂಖ್ಯೆ ದಿನಕ್ಕೆ ಸುಮಾರು 250 ರೋಗಿಗಳಿಂದ ದಿನಕ್ಕೆ 2,500 ಕ್ಕೆ ಹೆಚ್ಚಾಗಿದೆ. ಆಸ್ಪತ್ರೆಯು ಯಾವಾಗಲೂ ರೋಗಿಗಳು ಕಿಕ್ಕಿರಿದು ತುಂಬಿರುತ್ತಾರೆ. ಅವರಿಗೆ ಅಗತ್ಯ ಚಿಕಿತ್ಸೆ ನೀಡಲು ಹಾಗೂ ಆಸ್ಪತ್ರೆಯಲ್ಲಿ ರೋಗಿಗಳ ಒತ್ತಡ ನಿಭಾಯಿಸಲು ಈ ಕೇಂದ್ರ ಸ್ಥಾಪನೆ ಅಗತ್ಯವಿದೆ ಎಂದು ಕೇಂದ್ರ ಸಚಿವರಿಗೆ ಸಂಸದರು ಮನದಟ್ಟು ಮಾಡಿದರು.
ಭಾರತದಂತ ದೇಶದಲ್ಲಿ ದೈನಂದಿನಲ್ಲಿ ನಡೆಯುವ ರಸ್ತೆ ಅಪಘಾತಗಳು ಮನುಷ್ಯನ ಸಾವಿಗೆ ಪ್ರಮುಖ ಐದನೇ ಕಾರಣವಾಗಿದೆ. ಹೀಗೆ ಅಪಘಾತ, ಅನಾಹುತಳಿಂದ ತೀವ್ರವಾಗಿ ಗಾಯಗೊಳ್ಳುವ ರೋಗಿಗಳಿಗೆ ಗೋಲ್ಡನ್ ಅವರ್‌ನಲ್ಲಿ ತಕ್ಷಣದ ಚಿಕಿತ್ಸೆಯ ನೀಡುವುದು ಅತ್ಯವಶ್ಯಕವಾಗಿರುತ್ತದೆ.
ಅಪಘಾತದಿಂದ ಶೇ.13 ಸಾವು
ಸುಮಾರು 13 ಪ್ರತಿಶತದಷ್ಟು ಸಾವುಗಳು ರಸ್ತೆ ಅಪಘಾತಗಳಿಂದ ಸಂಭವಿಸುತ್ತಿವೆ. ಸ್ಥಳಾವಕಾಶದ ಕೊರತೆ ಮತ್ತು ಪಾಲಿಟ್ರಾಮಾ ಸೇವೆಗಳ ಅಲಭ್ಯತೆ ಕಾರಣದಿಂದಾಗಿ ಇಂತಹ ಸನ್ನಿವೇಶಗಳಲ್ಲಿ ನಿರ್ಣಾಯಕ ರೋಗಿಗಳನ್ನು ನಿಮ್ಹಾನ್ಸ್‌ನಿಂದ ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗುತ್ತದೆ ಎಂದು ಅವರು ವಿವರಿಸಿದರು.
ಪಾಲಿಟ್ರಾಮಾ ಕೇಂದ್ರ ಸ್ಥಾಪನೆ ಬೇಡಿಕೆ ಈಡೇರಿಸಿ
ಬೆಂಗಳೂರಿನ ನಿಮ್ಹಾನ್ಸ್ ಉತ್ತರ ಕ್ಯಾಂಪಸ್‌ನಲ್ಲಿ ಪಾಲಿಟ್ರಾಮಾ ಕೇಂದ್ರವನ್ನು ತೆರೆಯಬೇಕು ಎಂಬುದು ಕರ್ನಾಟಕದ ಜನರ ಬಹುದಿನಗಳ ಬೇಡಿಕೆಯಾಗಿದೆ. ಜನರ ಈ ಬೇಡಿಕೆ ಈಡೇರಿಸಬೇಕು. ನಿಮ್ಹಾನ್ಸ್‌ನಲ್ಲಿ ತ್ವರಿತವಾಗಿ ಪಾಲಿಟ್ರಾಮಾ ಕೇಂದ್ರ ತೆರಳು ಅಗತ್ಯ ಸಹಕಾರ, ಅನುದಾನ ನೀಡಬೇಕೆಂದು ಅವರು ಕೇಂದ್ರ ಸಚಿವರನ್ನು ಒತ್ತಾಯಿಸಿದರು.












Click it and Unblock the Notifications