ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗೆ ಮೆಟ್ರೋ ಜತೆಗೆ ಸಬ್ ಅರ್ಬನ್ ರೈಲು?

By Mahesh
|
Google Oneindia Kannada News

ನವದೆಹಲಿ/ಬೆಂಗಳೂರು, ಜ.29: ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಮೆಟ್ರೋ ರೈಲಿನ ಜೊತೆಗೆ ಸಬ್ ಅರ್ಬನ್ ರೈಲು ಅಗತ್ಯವಿದೆ. ಸಬ್ ಅರ್ಬನ್ ರೈಲು ವ್ಯವಸ್ಥೆ ಜಾರಿಗೊಳಿಸುವಂತೆ ರೈಲ್ವೆ ಸಚಿವ ಸುರೇಶ್ ಪ್ರಭು ಅವರಿಗೆ ಮತ್ತೊಮ್ಮೆ ಕೇಂದ್ರ ಸಚಿವ ಅನಂತಕುಮಾರ್ ಮನವಿ ಮಾಡಿಕೊಂಡಿದ್ದಾರೆ.

ಈಗಾಗಲೇ ಸಿಎಂ ಸಿದ್ದರಾಮಯ್ಯ ಸಬ್ ಅರ್ಬನ್ ರೈಲು ವ್ಯವಸ್ಥೆ ಜಾರಿಗೆ ಅನುದಾನ ನೀಡುವಂತೆ ಕೋರಿ ರೈಲ್ವೆ ಸಚಿವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅನಂತ್​ಕುಮಾರ್ ಅವರು ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಸಚಿವ ಸುರೇಶ್ ಪ್ರಭು ಅವರಿಗೆ ಇದೇ ಮನವಿಯನ್ನು ಮಾಡಿಕೊಂಡಿದ್ದರು. [ಪೀಣ್ಯ-ನಾಗಸಂದ್ರ ಮೆಟ್ರೋ ಜೊತೆ ರಿಯಲ್ ಎಸ್ಟೇಟ್ ನಾಗಾಲೋಟ!]

ಮುಖ್ಯವಾಗಿ ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಸಬ್ ಅರ್ಬನ್ ರೈಲು ಅಗತ್ಯವಿದ್ದು, ಹೊರವರ್ತುಲ ರಸ್ತೆಗಳಲ್ಲಿರುವ ಪ್ರಮುಖ ಬಡಾವಣೆಗಳಿಗೂ ನಗರದ ಒಳ ವಲಯಕ್ಕೂ ಸಂಪರ್ಕ ಒದಗಿಸಲು ಇದು ಅವಶ್ಯಕ ಎಂದು ಅನಂತ್ ಕುಮಾರ್ ಹೇಳಿದ್ದಾರೆ.[ಚೆನ್ನೈ ಮೆಟ್ರೋ ಟಿಕೆಟ್ ದರ ದೇಶದಲ್ಲೇ ಅಧಿಕ!]

ಹೀಗಾಗಿ 2016-17ನೇ ಸಾಲಿನ ರೈಲ್ವೆ ಬಜೆಟ್​ ಮಂಡನೆ ಸಂದರ್ಭದಲ್ಲಿ ಬೆಂಗಳೂರಿಗೆ ಸಬ್ ಅರ್ಬನ್ ರೈಲು ವ್ಯವಸ್ಥೆ ಜಾರಿಗೊಳಿಸಿ ಅನುದಾನ ನಿಗದಿಪಡಿಸಬೇಕು ಎಂದು ಅನಂತ್ ಕುಮಾರ್ ಅವರು ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ರೈಲ್ವೆ ಬೋರ್ಡ್ ನ ಚೇರ್ಮನ್ ಎಕೆ ಮಿತ್ತಲ್ ಅವರು ಉಪಸ್ಥಿತರಿದ್ದರು.

ಸಬ್ ಅರ್ಬನ್ ರೈಲು ಅಗತ್ಯವಿದೆಯೇ?

ಸಬ್ ಅರ್ಬನ್ ರೈಲು ಅಗತ್ಯವಿದೆಯೇ?

ಬೆಂಗಳೂರಿನ ನಗರವ್ಯಾಪ್ತಿಯ ಪ್ರಮುಖ ಬಡಾವಣೆಗಳಿಗೆ ಸಂಪರ್ಕ ಒದಗಿಸಲು ಮೆಟ್ರೋ ರೈಲಿನ ವಿವಿಧ ಹಂತಗಳಿವೆ. ಆದರೆ, ಬೆಂಗಳೂರು ಸುತ್ತಲಿನ 50 ಕಿ.ಮೀ.ಗೂ ಅಧಿಕ ವ್ಯಾಪ್ತಿಯಲ್ಲಿರುವ ಉಪ ನಗರಗಳಿಗೆ ಸಂಪರ್ಕ ಕಲ್ಪಿಸುವ ರೈಲು ಯೋಜನೆ ಅಗತ್ಯವಿದೆ. ಹೀಗಾಗಿ ಸಬ್ ಅರ್ಬನ್ (ಕಮ್ಯೂಟರ್) ರೈಲು ಯೋಜನೆ ರೂಪಿಸಲಾಗಿದೆ.

ಸಬ್ ಅರ್ಬನ್ ಯೋಜನೆಗೆ 1759 ಕೋಟಿ ರೂ.ಗಳ ಅಗತ್ಯ

ಸಬ್ ಅರ್ಬನ್ ಯೋಜನೆಗೆ 1759 ಕೋಟಿ ರೂ.ಗಳ ಅಗತ್ಯ

ಸಬ್ ಅರ್ಬನ್ ಯೋಜನೆಗೆ 1759 ಕೋಟಿ ರೂ.ಗಳ ಅಗತ್ಯವಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ರಾಜ್ಯದ ಪಾಲು ಶೇ.50ರಷ್ಟನ್ನು ಮಂಜೂರು ಮಾಡಿದ್ದಾರೆ. ಕೇಂದ್ರದ ನೆರವು ಸಿಕ್ಕರೆ ಬೆಂಗಳೂರಿನಲ್ಲಿ ಮೆಟ್ರೋ ಜೊತೆಗೆ ಲೋಕಲ್ ಟ್ರೈನ್ ಕೂಡಾ ಸಂಚರಿಸಬಹುದು.

ಬೇರೆ ರೈಲು ಹಳಿಗಳ ನಿರ್ಮಾಣದ ಅಗತ್ಯವಿಲ್ಲ

ಬೇರೆ ರೈಲು ಹಳಿಗಳ ನಿರ್ಮಾಣದ ಅಗತ್ಯವಿಲ್ಲ

ಸಬ್ ಅರ್ಬನ್ ರೈಲು ಯೋಜನೆಗೆ ಬೇರೆ ರೈಲು ಹಳಿಗಳ ನಿರ್ಮಾಣದ ಅಗತ್ಯವಿಲ್ಲ. ಇರುವ ನಿಲ್ದಾಣಗಳಿಗೆ ಮೂಲಸೌಕರ್ಯಗಳನ್ನು ಒದಗಿಸಿದರೆ ಹೆಚ್ಚು ಅನುಕೂಲವಾಗುತ್ತದೆ. ಲೋಕಲ್ ಟ್ರೈನ್ ಸಂಚಾರ ಆರಂಭವಾದರೆ ಶೇ.40ರಷ್ಟು ಸಂಚಾರ ಸುಗಮವಾಗುತ್ತದೆ.

ಬೇರೆ ನಗರಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ

ಬೇರೆ ನಗರಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ

ಬೆಂಗಳೂರಿನಲ್ಲಿನ ರೈಲು ನಿಲ್ದಾಣಗಳ ಮೂಲಕ ಬೇರೆ ನಗರಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದ್ದು, ಒಟ್ಟು 204 ಕಿ.ಮೀ. ಉದ್ದದ 15 ಮಾರ್ಗಗಳು ಇದರಲ್ಲಿ ಬರಲಿವೆ. ಯೋಜನೆಯ ವೆಚ್ಚ 8.5 ಸಾವಿರ ಕೋಟಿ ರೂ. ಎಂದು ಅಂದಾಜಿಸಲಾಗಿದೆ.ರಾಜ್ಯ ಭೂ ಸಾರಿಗೆ ನಿರ್ದೇಶನಾಲಯದ ಪ್ರಸ್ತಾವನೆಯಂತೆ ಯೋಜನೆಗೆ ರಾಜ್ಯ ಸರ್ಕಾರ 2013ರಲ್ಲೇ ಅನುಮೋದನೆ ನೀಡಲಾಗಿದೆ.ಆದರೆ, ಯೋಜನೆ ಮಂಜೂರಾತಿ ಮಾಡಿಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ.

English summary
Union Minister H N Ananth Kumar demanded Union Railway minister Suresh Prabhu to sanction Suburban local trains for Bengaluru like Mumbai. During the discussion Chairman Railway Board, A K Mittal and senior officials of the Railway Board were also present.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X