ಬ್ಯಾಂಕಿಗೆ ಮೋಸ: ನಟ, ನಿರ್ದೇಶಕ ಎಸ್.ನಾರಾಯಣ್ ಬಂಧನ
ಬೆಂಗಳೂರು, ಏಪ್ರಿಲ್ 05: ಐಡಿಬಿಐ ಬ್ಯಾಂಕ್ ಗೆ ಹಣ ಮರುಪಾವತಿ ಮಾಡದ ಹಿನ್ನಲೆಯಲ್ಲಿ ಕನ್ನಡ ಚಿತ್ರರಂಗದ ನಟ, ನಿರ್ದೇಶಕ ಎಸ್.ನಾರಾಯಣ್ ಅವರನ್ನು ಪೊಲೀಸರು ವಶಕ್ಕೆ ಪಡೆದು ಆ ನಂತರ ಬಿಡುಗಡೆ ಮಾಡಿದ್ದಾರೆ.
ಐಡಿಬಿಐ ಬ್ಯಾಂಕಿನಿಂದ ಎಸ್.ನಾರಾಯಣ್ ಅವರು ಮೂರು ಕೋಟಿ ಸಾಲ ಪಡೆದಿದ್ದರು, ಅಸಲು, ಬಡ್ಡಿ ಸೇರಿ ಸುಮಾರು 10 ಕೋಟಿ ಹಣವನ್ನು ಎಸ್.ನಾರಾಯಣ್ ಬ್ಯಾಂಕಿಗೆ ಕಟ್ಟಬೇಕಾಗಿತ್ತು. ಆದರೆ ನಾರಾಯಣ್ ಅವರು ಹಣ ಪಾವತಿ ಮಾಡಿರಲಿಲ್ಲ, ನೀಡಿದ್ದ ನೊಟೀಸ್‌ಗಳನ್ನು ನಿರ್ಲಕ್ಷಿಸಿದ್ದರು.
ಹೀಗಾಗಿ ಬ್ಯಾಂಕು ನಾರಾಯಣ್ ಅವರ ವಿರುದ್ಧ ಪೊಲೀಸ್ ದೂರು ನೀಡಿದ್ದರು. ಹಾಗಾಗಿ ಇಂದು ಬಸವೇಶ್ವರ ನಗರ ಪೊಲೀಸರು ಎಸ್.ನಾರಾಯಣ್ ಅವರನ್ನು ಸಂಜೆ ವೇಳೆಗೆ ಪೊಲೀಸರು ವಶಕ್ಕೆ ಪಡೆದಿದ್ದರು.

ಎಸ್.ನಾರಾಯಣ್ ಅವರನ್ನು ಸಾಲ ವಸೂಲಾತಿ ನ್ಯಾಯಾಧೀಕರಣಕ್ಕೆ ಪೊಲೀಸರು ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಧೀಕರಣದಿಂದ ಎಸ್.ನಾರಾಯಣ್ ಅವರಿಗೆ ಜಾಮೀನು ಮಂಜೂರು ಮಾಡಲಾಯಿತು, ಹಾಗಾಗಿ ಬಂಧಿಸಿದಷ್ಟೆ ವೇಗವಾಗಿ ಅವರು ಬಿಡುಗಡೆ ಆಗಿದ್ದಾರೆ.












Click it and Unblock the Notifications