Bengaluru 'Char Jam Yatra': ಟ್ರಾಫಿಕ್ ಸಮಸ್ಯೆ ಬಗ್ಗೆ ಮೋಹನದಾಸ್ ಪೈ ಅಪಹಾಸ್ಯ, ಪೋಸ್ಟ್ ವೈರಲ್
ಬೆಂಗಳೂರು, ಮಾರ್ಚ್ 13: ಬೆಂಗಳೂರ ಪ್ರವಾಸೋದ್ಯಮವು ನಗರದಲ್ಲಿ ಟೂರ್ ಪ್ಯಾಕೇಜ್ ಮೂಲಕ ನಗರದ ಪ್ರಮುಕ ಟ್ರಾಫಿಕ್ ಜಾಮ್ ಪ್ರದೇಶಗಳನ್ನು ಸುತ್ತಾಡಿಸಲಿದೆ ಎಂದು ಉದ್ಯಮಿ, ಇನ್ಫೋಸಿಸ್ ಮಾಜಿ ನಿರ್ದೇಶಕ ಮೋಹನದಾಸ್ ಪೈ ಅವರು ಹೇಳಿಕೆ ಭಾರೀ ವೈರಲ್ ಆಗಿದೆ. ಬೆಂಗಳೂರು ಸಂಚಾರ ದಟ್ಟಣೆಯ ಕುರಿತ ಅವರ ಅಪಹಾಸ್ಯ ಆನ್‌ಲೈನ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಇದನ್ನು ಅವರು 'ಚಾರ್ ಜಾಮ್ ಯಾತ್ರಾ' ಅಂತಲೂ ಕರೆದಿದ್ದಾರೆ.
ನಗರದ ಸಂಚಾರ ದಟ್ಟಣೆ, ಸರ್ಕಾರ ನಡೆಯನ್ನು ಉದ್ಯಮಿ ಮೋಹನದಾಸ ಪೈ ಅಣುಕಿಸಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ನೆಟ್ಟಿಗರ ಮಧ್ಯೆ ನಗರದ ಟ್ರಾಫಿಕ್ ಮಧ್ಯೆ ಮತ್ತೆ ಭಾರೀ ಚರ್ಚೆಗೆ ಕಾರಣವಾಗಿದೆ.

''ಬೆಂಗಳೂರು ಪ್ರವಾಸೋದ್ಯಮವು ನಾಲ್ಕು ದಿನ ಮೂರು ರಾತ್ರಿ ಪ್ರವಾಸವನ್ನು ನಗರದ ಔಟರ್ ರಿಂಗ್ ರಸ್ತೆ, ಸಿಲ್ಕಬೋರ್ಡ್ ಜಂಕ್ಷನ್, ಮಾರತ್ತಹಳ್ಳಿ ಮತ್ತು ಎಚ್‌ಎಸ್‌ಆರ್ ಬಡಾವಣೆ' ಗಳಲ್ಲಿ ಟ್ರಿಪ್ ಆಯೋಜಿಸಿದೆ. ಇದನ್ನು ಅವರು ಬೆಂಗಳೂರು 'ಚಾರ್ ಜಾಮ್ ಯಾತ್ರಾ' ಅಂತ ಕರೆದಿದ್ದು, ಹತಾಷೆ ವ್ಯಕ್ತಪಡಿಸಿದ್ದಾರೆ. ಇದೊಂದು ದುಃಖಕರ ಜೋಕ್ ಆಗಿದೆ. ನಮಗೆ ಕನಿಷ್ಠ ಪಕ್ಷ ನಾವು ಬಳಲುತ್ತಿರುವ ಸಂಚಾರ ಸಮಸ್ಯೆ ಮತ್ತು ಕಾಳಜಿಯೇ ಇಲ್ಲದ ಸರ್ಕಾರದ ಬಗ್ಗೆ ನಮಗೆ ಹಾಸ್ಯ ಪ್ರಜ್ಞೆಯಾದರು ಇದೆ'' ಎಂದು ಅಸಮಾಧಾನ ತೋರ್ಪಡಿಸಿದ್ದಾರೆ.
ಉದ್ಯಮಿ ಪೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆ, ನೆಟ್ಟಿಗರು ಹೇಳಿದ್ದೇನು?
ಟ್ರಾಫಿಕ್ ಕುರಿತಾದ ಈ ಪೋಸ್ಟ್ ಸಾಕಷ್ಟು ಜನರನ್ನು ಕೆಣಕಿದೆ. ಚರ್ಚೆಗೆ ಪ್ರೇರೆಪಿಸಿದೆ. ನೀವು ನಗರದ ಸಮಸ್ಯೆ ಕುರಿತು ಇಷ್ಟೊಂದು ವಾಗ್ದಾಳಿ ನಡೆಸುತ್ತಿದ್ದೀರಿ. ಹಾಗಾದರೆ ನೀವೆ ಬೆಂಗಳೂರಿನ ಸಂಚಾರ ಸಮಸ್ಯೆಗಳಿಗೆ ಪರಿಹಾರ ತಿಳಿಸಿದೆ. ಸುರಂಗಗಳು, ಎತ್ತರದ ರಸ್ತೆಗಳು, ಫ್ಲೈಓವರ್‌ಗಳು, ಅಂಡರ್‌ಪಾಸ್‌ಗಳನ್ನು ನಿರ್ಮಿಸಬೇಕಾ? ಈ ಬಗ್ಗೆ ವಾಸ್ತವದ ನೆಲೆಗಟ್ಟಿನಲ್ಲಿ ಸಲಹೆ ನೀಡಿದೆ. ಅದು ಉಪಯುಕ್ತವಾಗುತ್ತದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
A sad joke on Bengaluru. At least we have a sense of humour about our suffering and an uncaring govt. pic.twitter.com/dvKkrPYXh7
— Mohandas Pai (@TVMohandasPai) March 12, 2025
ನೀವು ಇಂತಹ ಹೇಳಿಕೆ ಮೂಲಕ ಬೆಂಗಳೂರಿನ ಇಮೇಜ್‌ಗೆ ಹಾನಿ ಮಾಡುತ್ತಿದ್ದೀರಿ ಎಂದು ಕೆಲವು ಬಳಕೆದಾರರು ದೂರಿ ಕಾಮೆಂಟ್ ಮಾಡಿದ್ದಾರೆ. ಬೆಂಗಳೂರನ್ನು ಕೆಣಕುವ ವಿಚಾರದಲ್ಲಿ ನೀವು ಮುಂದೆ ಇರುತ್ತೀರಿ ಎಂದು ಮತ್ತೊಬ್ಬರು ಹೇಳಿದ್ದಾರೆ.
ಡಿಸಿಎಂ ಜೊತೆಗೆ ಉದ್ಯಮಿ ಚರ್ಚೆ
ಎಎನ್‌ಐ ವರದಿ ಪ್ರಕಾರ, ಉದ್ಯಮಿ ಮೋಹನದಾಸ್ ಪೈ ಅವರು, ಬೆಂಗಳೂರಿನ ತುರ್ತು ಸಮಸ್ಯೆಗಳ ಬಗ್ಗೆ ಚರ್ಚಿಸಲು ಶನಿವಾರ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಆಗಿದ್ದಾರೆ. ಸದಾಶಿವನಗರದಲ್ಲಿ ಚರ್ಚೆ ಆಗಿದೆ. ಅದರ ಬಳಿಕ "ಬೆಂಗಳೂರು ಒಂದು ದೊಡ್ಡ ನಗರ, ಜಾಗತಿಕವಾಗಿ ಗುರುತಿಸಿಕೊಂಡಿದೆ. ಇದೊಂದು ವಿಜ್ಞಾನ ನಗರ. ಇಲ್ಲಿರುವ ರಸ್ತೆಗಳು, ಪಾದಚಾರಿ ಮಾರ್ಗಗಳು, ನಮ್ಮ ಮೆಟ್ರೋ ವಿಸ್ತರಣೆ ಸೇರಿದಂತೆ ಸಮಗ್ರ ಅಭಿವೃದ್ಧಿ ಆಗಬೇಕು ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ಮುಂದಿನ ಆರೇ ತಿಂಗಳಲ್ಲಿ ನಗರದಲ್ಲಿ ಗಮನಾರ್ಹ ಬದಲಾವಣೆ, ಅಭಿವೃದ್ಧಿ ಆಗುತ್ತದೆ. ಜನಪರ ಕಾಳಜಿ ಸರ್ಕಾರಕ್ಕೆ ಇದೆ ಎಂದು ಅವರು ತಿಳಿಸಿದ್ದಾರೆ ಎಂದು ವರದಿ ಆಗಿದೆ.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications