ಮೋದಿ ಬೆಂಗಳೂರು ಭೇಟಿ : ವಾಹನ ಮಾರ್ಗ ಬದಲಾವಣೆ

ಬೆಂಗಳೂರು, ಫೆ. 18 : ಬುಧವಾರ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನಲೆಯಲ್ಲಿ ನಗರದಲ್ಲಿನ ಸಂಚಾರ ಮಾರ್ಗದಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 11.30ರ ನಂತರ ಈ ಬದಲಾವಣೆ ಅನ್ವಯವಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಾಹ್ನ 12 ಗಂಟೆಯ ತನಕ ಯಲಹಂಕದ ವಾಯುನೆಲೆಯಲ್ಲಿ ಏರ್‌ ಶೋನಲ್ಲಿ ಪಾಲ್ಗೊಳ್ಳಲಿದ್ದು ನಂತರ ನಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ 4.30ಕ್ಕೆ ಎಚ್‌ಎಎಲ್ ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ವಾಪಸ್ ಆಗಲಿದ್ದಾರೆ.[ಮೋದಿ ಬೆಂಗಳೂರಿನ ಕಾರ್ಯಕ್ರಮಗಳು]

 Police

ಸಂಚಾರ ಮಾರ್ಗ ಬದಲಾವಣೆ ವಿವರ ಹೀಗಿದೆ

* ಬೆಳಗ್ಗೆ 11.30 ರಿಂದ 1.30 ಯಲಹಂಕ ವಾಯುನೆಲೆಯಿಂದ ಮೇಖ್ರಿ ವೃತ್ತದವರೆಗೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಕೆಂಪಾಪುರ, ಕೊಡಿಗೇಹಳ್ಳಿ, ಬ್ಯಾಟರಾಯನಪುರ, ಹುಣಸಮಾರನಹಳ್ಳಿ ಜಂಕ್ಷನ್‌ಗಳಲ್ಲಿ ಕೆಲ ನಿಮಿಷ ವಾಹನ ಸಂಚಾರ ತಡೆಹಿಡಿಯಲಾಗುತ್ತದೆ.

* ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಮೇಖ್ರಿ ವೃತ್ತದ ಕಡೆ ವಾಹನ ಸಂಚಾರ ನಿಷೇಧ. ವಿಂಡ್ಸರ್ ಮ್ಯಾನರ್ ಕಡೆಯಿಂದ ಬರುವ ವಾಹನಗಳು ಕಾವೇರಿ ಥಿಯೇಟರ್ ಜಂಕ್ಷನ್ ಬಳಿ ಎಡ ತಿರುವು ಪಡೆದು ಬಾಷ್ಯಂ ವೃತ್ತದ ಕಡೆ ಸಂಚರಿಸಬೇಕು.

* ಜೆ.ಸಿ.ನಗರ ಕಡೆಯಿಂದ ಬರುವ ವಾಹನಗಳು ಟಿವಿ ಟವರ್ ಬಳಿ ಬಲ ತಿರುವು ಪಡೆದು ಆರ್.ಟಿ.ನಗರದತ್ತ ಹೋಗಬಹುದು. ಹೆಬ್ಬಾಳದಿಂದ ಆಗಮಿಸುವವರು ಸಿಬಿಐ ಜಂಕ್ಷನ್ ಮತ್ತು ಎಂಎಲ್‌ಎ ಲೇಔಟ್ ಜಂಕ್ಷನ್ ಬಳಿ ಎಡ ತಿರುವು ಪಡೆದು ಆರ್.ಟಿ.ನಗರದತ್ತ ತೆರಳಬಹುದು.

* ಸಿ.ವಿ.ರಾಮನ್ ರಸ್ತೆಯಲ್ಲಿ ಟಾಟಾ ಇನ್‌ಸ್ಟಿಟ್ಯೂಟ್ ಕಡೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಯಶವಂತಪುರ ಕಡೆಯಿಂದ ಬರುವ ವಾಹನ ಸವಾರರು ಮತ್ತಿಕೆರೆ ಜಂಕ್ಷನ್ ಬಳಿ ಎಡ ತಿರುವು ಪಡೆದು ಮತ್ತಿಕೆರೆ ಕಡೆ ತೆರಳಬೇಕು.

* ಮಧ್ಯಾಹ್ನ 2.30 ರಿಂದ ಸಂಜೆ 4ರವರೆಗೆ ಆನಂದರಾವ್ ವೃತ್ತದ ಕಡೆಯಿಂದ ಬರುವ ವಾಹನಗಳು ಆರ್‌ಎಂಬಿ ಆರಾಧ್ಯ ವೃತ್ತದ ಬಳಿ ಬಲ ತಿರುವು ಪಡೆದು ಬಸವೇಶ್ವರ ವೃತ್ತದ ಕಡೆ ಹೋಗಬಹುದು. ಕುಮಾರಕೃಪ ರಸ್ತೆ ಮತ್ತು ವಿಂಡ್ಸರ್ ಮ್ಯಾನರ್ ಕಡೆಗೆ ವಾಹನ ಸಂಚಾರ ನಿಷೇಧ.

* ಬಸವೇಶ್ವರ ವೃತ್ತದ ಕಡೆ ವಾಹನ ಸಂಚಾರ ನಿಷೇಧ. ಮಹಾರಾಣಿ ಕಾಲೇಜ್ ಕಡೆಯಿಂದ ಬರುವ ವಾಹನಗಳು ಸಿಐಡಿ ಜಂಕ್ಷನ್ ಬಳಿ ಬಲ ತಿರುವು ಪಡೆದು ವಿಧಾನಸೌಧ, ಕೆ.ಆರ್.ವೃತ್ತದ ಕಡೆ ತೆರಳಬಹುದು. ನೃಪತುಂಗ ರಸ್ತೆಯಲ್ಲೂ ವಾಹನ ಸಂಚಾರ ನಿಷೇಧ. ವಿಧಾನಸೌಧ ರಸ್ತೆ ಮಾರ್ಗವಾಗಿ ಬರುವ ವಾಹನಗಳು ಕೆ.ಆರ್.ವೃತ್ತ ಮೂಲಕ ಮೈಸೂರು ಬ್ಯಾಂಕ್ ಕಡೆ ಹೋಗಬಹುದು.

* ಹಡ್ಸನ್ ವೃತ್ತದಲ್ಲಿ ಸಂಚಾರ ನಿಷೇಧ ಟೌನ್‌ಹಾಲ್ ಕಡೆಯಿಂದ ಬರುವ ವಾಹನಗಳು ಪೊಲೀಸ್ ಕಾರ್ನರ್ ಬಳಿ ಎಡ ತಿರುವು ಪಡೆದುಕೊಂಡು ಮೈಸೂರು ಬ್ಯಾಂಕ್ ವೃತ್ತದತ್ತ ತೆರಳಬಹುದು. ಎನ್.ಆರ್.ಸ್ಕ್ವೇರ್ ಮತ್ತು ಟೌನ್‌ಹಾಲ್ ಕಡೆಗೆ ವಾಹನ ಸಂಚಾರಕ್ಕೆ ನಿಷೇಧ ಹೇರಿದ್ದು, ರಿಚ್‌ಮಂಡ್ ವೃತ್ತದಿಂದ ಬರುವ ವಾಹನಗಳನ್ನು ಹಡ್ಸನ್ ವೃತ್ತದ ಬಳಿ ಕಸ್ತೂರಬಾ ರಸ್ತೆ, ದೇವಾಂಗ ರಸ್ತೆ ಮಾರ್ಗದಲ್ಲಿ ತೆರಳಬೇಕು.

* ಕೆ.ಎಚ್.ರಸ್ತೆಯಿಂದ ಆಗಮಿಸುವ ವಾಹನಗಳು ಲಾಲ್‌ಬಾಗ್ ರಸ್ತೆ ಕಡೆಗೆ ಸಂಚರಿಸುವಂತಿಲ್ಲ. ಬ್ಲಾಡ್ ಬ್ಯಾಂಕ್ ವೃತ್ತದ ಮೂಲಕ ರಿಚ್‌ಮಂಡ್ ವೃತ್ತ ತಲುಪಬೇಕು. ಸಿದ್ದಾಪುರ ಮತ್ತು ಟಿ.ಮರಿಯಪ್ಪ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿಷೇಧ. ಜಯನಗರ ಕಡೆಯಿಂದ ಬರುವವರು ಅಶೋಕ ಪಿಲ್ಲರ್ ಬಳಿ ಎಡ ತಿರುವು ಪಡೆದು ಆರ್.ವಿ.ರಸ್ತೆ ಮಾರ್ಗವಾಗಿ ಸಂಚರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+