ಐಎಎಸ್ ವಿದ್ಯಾರ್ಥಿಗಳಿಗಾಗಿ ಸಮುತ್ಕರ್ಷ್ ಸಂಸ್ಥೆಯಿಂದ ಅಣುಕು ಸಂದರ್ಶನ

ಬೆಂಗಳೂರು, ಫೆಬ್ರವರಿ 3: ರಾಷ್ಟ್ರ ನಿರ್ಮಾಣಕ್ಕಾಗಿ ಯುವಕರನ್ನು ಒಂದಿಲ್ಲೊಂದು ರೀತಿಯಲ್ಲಿ ಸಜ್ಜುಗೊಳಿಸುತ್ತಿರುವ ಸಮುತ್ಕರ್ಷ್ ಸಂಸ್ಥೆ, ಸಂಕಲ್ಪ ಹುಬ್ಬಳ್ಳಿ ಮತ್ತು ದೆಹಲಿಯ ಶಾಖೆಯ ಸಹಯೋಗದೊಂದಿಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

ಅದರ ಒಂದು ಭಾಗವಾಗಿ ಕಳೆದ ವರ್ಷ ನಾಗರಿಕ ಸೇವಾ ಪರೀಕ್ಷೆಗಳಲ್ಲಿ (ಐ.ಎ.ಎಸ್, ಐ.ಪಿ.ಎಸ್ ಪರೀಕ್ಷೆ) ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಅಣುಕು ಸಂದರ್ಶನ ಏರ್ಪಡಿಸಿತ್ತು. ರಾಜ್ಯದಿಂದ ಸುಮಾರು 23 ಜನ ಆಸಕ್ತ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಮತ್ತು ಅದರಲ್ಲಿ 13 ಜನ ತೇರ್ಗಡೆ ಹೊಂದಿದ್ದು ಸಂತೋಷದ ಸಂಗತಿ.

Mock interview for IAS candidates in Bengaluru

ಈ ಯಶಸ್ಸಿನೊಂದಿಗೆ ಈ ಬಾರಿ ಕೂಡ ಹಿರಿಯ ನಿವೃತ್ತ ಅಧಿಕಾರಿಗಳನ್ನೊಳಗೊಂಡ ತಂಡದಿಂದ ಮುಖ್ಯ ಸಂದರ್ಶನಕ್ಕೆ ಅನುಕೂಲವಾಗಲು ಅಣುಕು ಸಂದರ್ಶನವನ್ನು ಇದೇ ತಿಂಗಳು ಫೆಬ್ರವರಿ 5 ಮತ್ತು 6, 2018, ಸೋಮವಾರ ಮತ್ತು ಮಂಗಳವಾರದಂದು, ಆರ್ ವಿ ಕಾಲೇಜು ಅಫ್ ಇಂಜಿನಿಯರಿಂಗ್, ಮೈಸೂರು ರಸ್ತೆ, ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಸಂದರ್ಶನಕ್ಕೆ ಯಾವುದೇ ಶುಲ್ಕ ಇರುವದಿಲ್ಲ. ಆಸಕ್ತರು ಈ ಸಂದರ್ಶನದ ಅನುಕೂಲ ಪಡೆದುಕೊಳ್ಳಬೇಕೆಂದು ಟ್ರಸ್ಟ್ ಕಾರ್ಯದರ್ಶಿ ಜಿತೇಂದ್ರ ಪಿ.ನಾಯಕ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+