ಮಹಿಳಾ ಪೇದೆಗಳ ಜೊತೆ ತಾರಾ 'ಗೌರಿ ಹಬ್ಬ' ಸಂಭ್ರಮ

ಬೆಂಗಳೂರು, ಸೆ.16: ಹಬ್ಬ ಹರಿದಿನಗಳ ರಜೆ ಹಾಕಿ ಪೂಜೆ ಪುನಸ್ಕಾರ ಸಂಭ್ರಮದಲ್ಲಿ ಮುಳುಗೇಳುವುದು ಎಲ್ಲಾ ಮಹಿಳೆಯರಿಗೆ ಇಷ್ಟದ ಕೆಲಸ. ಅದರೆ, ಪೊಲೀಸ್ ನೌಕರಿಯಲ್ಲಿದ್ದವರಿಗೆ ಹಬ್ಬದ ದಿನವೂ ಕರ್ತವ್ಯದ ಕರೆಗೆ ತಲೆ ಬಾಗಬೇಕಾಗುತ್ತದೆ, ಆಮೇಲೆ ಪುರುಸೊತ್ತು ಸಿಕ್ಕರೆ ಗೌರಿ-ಗಣೇಶನಿಗೆ ಶಿರಬಾಗುತ್ತಾರೆ. ಅರಿಶಿನ, ಕುಂಕುಮ ಬಾಗಿನ, ಬಳೆ, ಬಿಚ್ಚೋಲೆ ಸಿಹಿ ತಿನಿಸು ಎಲ್ಲವನ್ನು ಹೊಂದಿಸಿಕೊಂಡು ಎಲ್ಲರಂತೆ ಹಬ್ಬದ ಸಂಭ್ರಮದಲ್ಲಿರಲು ಮಹಿಳಾ ಕಾನ್ಸ್ ಟೇಬಲ್ ಗಳಿಗೆ ಕಷ್ಟಸಾಧ್ಯ.

ಈ ವಿಷಯ ಅರಿತ ವಿಧಾನಪರಿಷತ್ ಸದಸ್ಯೆ ಕಮ್ ನಟಿ ತಾರಾ ಅನುರಾಧಾ ಅವರು ಹಲಸೂರು ಗೇಟ್ ಮಹಿಳಾ ಪೊಲೀಸ್ ಠಾಣೆಗೆ ತೆರಳಿದ ತಾರಾ ಅನುರಾಧ ಈ ಕಾನ್‌ಸ್ಟೆಬಲ್‌ಗಳೊಂದಿಗೆ ಕೆಲ ಕಾಲ ತಂಗಿ ಕುಶೋಲಪರಿ ವಿಚಾರಿಸಿ ಗೌರಿ ಹಬ್ಬದ ಶುಭಾಶಯ ಕೋರಿ, ಹೋಳಿಗೆ ಹಂಚಿ, ಫಲ-ತಾಂಬೂಲ ಸಮರ್ಪಿಸಿ ಮನೆಯ ವಾತಾವರಣವನ್ನು ನೆನಪು ಮಾಡಿಕೊಟ್ಟು ಬಂದಿದ್ದಾರೆ.

ಹಬ್ಬದ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾಪಾಡುವ ಆರಕ್ಷಕ ಪಡೆಗೆ ಬಾಗಿನ ಹಂಚಿದ ತಾರಾ ಅನುರಾಧಾ ಅವರು ಎಲ್ಲ ಚಿತ್ರಗಳನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಈಟಿವಿ ಗಾಗಿ ವಿಶೇಷವಾಗಿ ಗೌರಿ ಪೂಜೆ ಮಾಡಿದ ಚಿತ್ರವೂ ಇದೆ.

ತಾರಾ ಗೌರಿ ಹಬ್ಬ ಸಂಭ್ರಮ

ತಾರಾ ಗೌರಿ ಹಬ್ಬ ಸಂಭ್ರಮ

ಕಾನ್‌ಸ್ಟೆಬಲ್‌ಗಳೊಂದಿಗೆ ಕೆಲ ಕಾಲ ತಂಗಿ ಕುಶೋಲಪರಿ ವಿಚಾರಿಸಿ ಹಣೆಗೆ ತಿಲಕ ಇಟ್ಟು ಕೆನ್ನೆಗೆ ಅರಿಶಿನ ಹಚ್ಚಿದ ತಾರಾ

ಪರಸ್ಪರ ಶುಭಾಶಯ ವಿನಿಮಯ

ಪರಸ್ಪರ ಶುಭಾಶಯ ವಿನಿಮಯ

ಬೆಂಗಳೂರಿನ ಹಲಸೂರು ಗೇಟ್ ಮಹಿಳಾ ಪೊಲೀಸ್ ಠಾಣೆಗೆ ತೆರಳಿದ ತಾರಾ ಅನುರಾಧ ಅವರಿಗೆ ಠಾಣಾಧಿಕಾರಿಯಿಂದ ಸುಸ್ವಾಗತ.

ಗೌರಿ ಹಬ್ಬದ ಶುಭಾಶಯ ಕೋರಿದ ತಾರಾ

ಗೌರಿ ಹಬ್ಬದ ಶುಭಾಶಯ ಕೋರಿದ ತಾರಾ

ಗೌರಿ ಹಬ್ಬದ ಶುಭಾಶಯ ಕೋರಿ, ಹೋಳಿಗೆ ಹಂಚಿ, ಫಲ-ತಾಂಬೂಲ ಸಮರ್ಪಿಸಿ ಮನೆಯ ವಾತಾವರಣ ಉಂಟು ಮಾಡಿದರು.

ಸಂತಸ ಹಂಚಿಕೊಂಡ ಮಹಿಳಾ ಪೇದೆಗಳು

ಸಂತಸ ಹಂಚಿಕೊಂಡ ಮಹಿಳಾ ಪೇದೆಗಳು

ಮಾಧ್ಯಮಗಳ ಮುಂದೆ ಸಂತಸ ಹಂಚಿಕೊಂಡ ಮಹಿಳಾ ಪೇದೆಗಳು, ಸರ್ಕಲ್ ಇನ್ಸ್ ಪೆಕ್ಟರ್

ತಾರಾ ಅವರಿಂದ ಗೌರಿ ಹಬ್ಬದ ವಿಶೇಷ ಪೂಜೆ

ತಾರಾ ಅವರಿಂದ ಗೌರಿ ಹಬ್ಬದ ವಿಶೇಷ ಪೂಜೆ

ತಾರಾ ಅವರಿಂದ ಗೌರಿ ಹಬ್ಬದ ವಿಶೇಷ ಪೂಜೆ ಕಾರ್ಯಕ್ರಮ ಈಟಿವಿ ಕನ್ನಡ ನ್ಯೂಸ್ ಚಾನೆಲ್ ನಲ್ಲಿ ಪ್ರಸಾರ. ನಿರೂಪಕಿ ಶರ್ಮಿತಾ ಶೆಟ್ಟಿ ಅವರನ್ನು ಚಿತ್ರದಲ್ಲಿ ಕಾಣಬಹುದು.

ಸಂಪ್ರದಾಯದಂತೆ ಬಾಗಿನ ವಿನಿಮಯ

ಸಂಪ್ರದಾಯದಂತೆ ಬಾಗಿನ ವಿನಿಮಯ

ಸಂಪ್ರದಾಯದಂತೆ ಬಾಗಿನ ವಿನಿಮಯ ಮಾಡಿಕೊಂಡ ತಾರಾ ಅನುರಾಧಾ.

ಪೂಜೆಗೆ ಅಣಿಯಾದ ತಾರಾ ಅನುರಾಧಾ

ಪೂಜೆಗೆ ಅಣಿಯಾದ ತಾರಾ ಅನುರಾಧಾ

ಪೂಜೆಗೆ ಅಣಿಯಾದ ತಾರಾ ಅನುರಾಧಾ ಅವರು ಪೂಜಾ ತಟ್ಟೆಯೊಂದಿಗೆ

ಮಹಿಳಾ ಪೇದೆಗಳಿಗೆ ನೆನಪಾದ ತವರು

ಮಹಿಳಾ ಪೇದೆಗಳಿಗೆ ನೆನಪಾದ ತವರು

ಮಹಿಳಾ ಪೇದೆಗಳಿಗೆ ತವರು ಮನೆ ನೆನಪಿಸಿದ ದೃಶ್ಯ ಹಲಸೂರು ಪೊಲೀಸ್ ಠಾಣೆಯಲ್ಲಿ ಕಂಡು ಬಂದಿತು. ಎಲ್ಲರ ಮನದಲ್ಲಿ ತೃಪ್ತಿ ಭಾವ, ಆಪ್ತತೆ, ಸಂತಸ ಹಿರಿ ಹಿರಿ ಹಿಗ್ಗು ನಲಿದಾಡುತ್ತಿತ್ತು.

ನಿರೂಪಕಿ ಶರ್ಮಿತಾರಿಂದ ಬಾಗಿನ ವಿನಿಮಯ

ನಿರೂಪಕಿ ಶರ್ಮಿತಾರಿಂದ ಬಾಗಿನ ವಿನಿಮಯ

ಟಿವಿ ಚಾನೆಲ್ ನಿರೂಪಕಿ ಶರ್ಮಿತಾರಿಂದ ಬಾಗಿನ ವಿನಿಮಯ ಮಾಡಿಕೊಂಡ ತಾರಾ.ಇಲ್ಲಿ ಬಳಸಿರುವ ಎಲ್ಲಾ ಚಿತ್ರಗಳ ಕೃಪೆ: ತಾರಾ ಅನುರಾಧಾ ಅವರ ಫೇಸ್ ಬುಕ್ ಪುಟ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+