ಚುನಾವಣಾ ಗುರುತಿನ ಚೀಟಿ ಪತ್ತೆ ಪ್ರಕರಣ: ಮುನಿರತ್ನಗೆ ಜಾಮೀನು
ಬೆಂಗಳೂರು, ಮೇ 14: ರಾಜರಾಜೇಶ್ವರಿ ನಗರ ಅಪಾರ್ಟ್‌ಮೆಂಟ್ ಒಂದರಲ್ಲಿ ಗುರುತಿನ ಚೀಟಿ ದೊರೆತ ಪ್ರಕರಣದಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಮುನಿರತ್ನ ಅವರಿಗೆ ಜಾಮೀನು ದೊರೆತಿದೆ.
ಗುರುತಿನ ಚೀಟಿ ಪ್ರಕರಣದಲ್ಲಿ ಮುನಿರತ್ನ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು ಅವರು ಬಂಧನ ಭೀತಿ ಎದುರಿಸುತ್ತಿದ್ದರು. ಹಾಗಾಗಿ ಅವರು ಇಂದು ನಗರದ 7ನೇ ಎಸಿಎಂಎಂ ಕೋರ್ಟ್‌ಗೆ ಹಾಜರಾಗಿ, 5000 ವೈಯಕ್ತಿಕ ಬಾಂಡ್, 3000 ನಗದು ಭದ್ರತೆ ನೀಡಿ ಜಾಮೀನು ಪಡೆದರು.
ಸದಾಶಿವನಗರದಲ್ಲಿ ಕಂಟೇನರ್‌ನಲ್ಲಿ ಟಿಶರ್ಟ್ ಸಾಗಿಸುತ್ತಿದ್ದ ಪ್ರಕರಣದಲ್ಲೂ ಸಹ ಮುನಿರತ್ನ ಅವರಿಗೆ ಜಾಮೀನು ಸಿಕ್ಕಿದೆ. ಕಂಟೇನರ್‌ನಲ್ಲಿ ಮುನಿರತ್ನ ಅವರ ಭಾವಚಿತ್ರ ಇರುವ 95 ಲಕ್ಷ ರೂಪಾಯಿ ಮೌಲ್ಯದ ಟೀಶರ್ಟ್ ಸಾಗಿಸಲಾಗುತ್ತಿತ್ತು ಎಂದು ಚುನಾವಣಾ ಅಧಿಕಾರಿಗಳು ಮುನಿರತ್ನ ಅವರ ಮೇಲೆ ದೂರು ದಾಖಲಿಸಿದ್ದರು.

ಗುರುತಿನ ಚೀಟಿ ಪತ್ತೆ ಮತ್ತು ಇತರ ಚುನಾವಣಾ ಅಕ್ರಮ ನಡೆದ ಕಾರಣ ಚುನಾವಣಾ ಆಯೋಗವು ರಾಜರಾಜೇಶ್ವರಿ ನಗರ ಚುನಾವಣೆಯನ್ನು ಮುಂದೂಡಿತು. ಚುನಾವಣೆಯು ಇದೇ ತಿಂಗಳ 28ರಂದು ನಡೆಯಲಿದ್ದು ಫಲಿತಾಂಶವು ಇದೇ ತಿಂಗಳ 31 ರಂದು ಹೊರಬೀಳಲಿದೆ.












Click it and Unblock the Notifications