Munirathna Case: ದರ್ಶನ್ ಬಳಿಕ ಶಾಸಕ ಮುನಿರತ್ನಗೆ ಸಂಕಷ್ಟ, ಆರ್‌ಆರ್ ನಗರದ ಬಗ್ಗೆ ಆ ಜ್ಯೋತಿಷಿ ಭವಿಷ್ಯ ನಿಜವಾಯ್ತು!
ಬೆಂಗಳೂರು, ಸೆಪ್ಟಂಬರ್ 20: ಕರ್ನಾಟಕದಲ್ಲಿ ನಟ ದರ್ಶನ್ ಬಂಧನ ಜೊತೆಗೆ ಬಿಜೆಪಿ ಶಾಸಕ ಮುನಿರತ್ನ ಅವರ ಬಂಧನ, ಅವರ ಮೇಲಿನ ಆರೋಪಗಳ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿದೆ. ಒಬ್ಬರು ರಾಜಕಾರಣಿ ಮತ್ತೊಬ್ಬರು ಸ್ಯಾಂಡಲ್‌ವುಡ್ ಸ್ಟಾರ್. ಇವರಿಬ್ಬರು ಇದೀಗ ಸ್ತ್ರೀ ವಿಚಾರವಾಗಿ ಜೈಲುವಾಸ ಅನುಭವಿಸುತ್ತಿದ್ದಾರೆ. ಇವರಿಬ್ಬರ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತಿರುವ ಮಧ್ಯೆಯೇ ರಾಜರಾಜೇಶ್ವರಿ ನಗರದ ವಾಸ್ತು ಬಗ್ಗೆ ನುಡಿದ ಭವಿಷ್ಯ ಮತ್ತೆ ಮುನ್ನೆಲೆಗೆ ಬರುತ್ತಿದೆ.
ಬೆಂಗಳೂರಿನ ಕುಬೇರ ಮೂಲೆ ಅಂತಲೂ ಕರೆಯಲಾಗುತ್ತಿರುವ ರಾಜರಾಜೇಶ್ವರಿ ನಗರದಲ್ಲಿಯೇ ಈ ಇಬ್ಬರು ಖ್ಯಾತನಾಮರು ವಾಸ ಮಾಡುತ್ತಿದ್ದಾರೆ. ಈ ಇಬ್ಬರು ಜೈಲಿಗೆ ಹೋಗಿರುವುದು ಸ್ತ್ರಿಯರ ಸಹವಾಸದಿಂದ ಎನ್ನುವುದು ಮತ್ತೊಂದು ವಿಶೇಷ. ಇವರ ಮೇಲಿನ ಆರೋಪಗಳ ಜೊತೆಗೆ ಅವರು ವಾಸಿಸುವ ಆರ್‌ಆರ್ ನಗರ ವಾಸ್ತು ಸರಿ ಇಲ್ಲ ಎಂದು ಈ ಹಿಂದೆ ಬಿಗ್ ಬಾಸ್ ಆರ್ಯವರ್ಧನ್ ಗುರೂಜಿ ನುಡಿದ ಭವಿಷ್ಯವು ಚರ್ಚೆಯಾಗುತ್ತಿದೆ.

ಆರ್‌ಆರ್ ನಗರ ವಾಸ್ತು ಸರಿಯಿಲ್ಲ: ನಿಜವಾಯ್ತಾ ಜ್ಯೋತಿಷ್ಯ ಭವಿಷ್ಯ
ಕನ್ನಡ ಬಿಗ್ ಬಾಸ್ ಸ್ಪರ್ಧಿ ಆರ್ಯವರ್ಧನ್ ಗುರೂಜಿ ಅವರು, ಆರ್‌ಆರ್ ನಗರಲ್ಲಿ ವಾಸ್ತು ದೋಷವಿದೆ. ಇಲ್ಲಿ ಎಲ್ಲವು ಸರಿ ಇಲ್ಲ. ಹೀಗಾಗಿ ಇಲ್ಲಿ ವಾಸಿಸುವವರಿಗೆ ನೆಮ್ಮದಿ ಇರಲ್ಲ. ಎಲ್ಲವು ಇರುತ್ತದೆ ಆದರೆ ನೆಮ್ಮದಿ ಇರುವುದಿಲ್ಲ ಎಂದು ಭವಿಷ್ಯ ನುಡಿದಿದ್ದರು. ಇದು ರಾಜಕಾಲುವೆ ಮೇಲೆ ನಿರ್ಮಾಣವಾಗಿದೆ ಎನ್ನುವುದರ ಜೊತೆಗೆ ಅದರ ದಿಕ್ಕುಗಳ ಕುರಿತು ಮಾತನಾಡಿದ್ದರು.
ನಟ ದರ್ಶನ್ ಬಗ್ಗೆ ಆರ್ಯವರ್ಧನ್ ಹೇಳಿದ್ದೇನು?
ಇದೇ ದರ್ಶನ್ ಕುರಿತು ಹೇಳಿದ್ದ ಗುರೂಜಿ, ನಟ ದರ್ಶನ್ ಹೆಸರಿಗೆ ನಂಬರ್ 21 ಬರುತ್ತದೆ. ಈ ಸಂಖ್ಯೆ ಅವರನ್ನು ಹೆಚ್ಚು ಡಿಸ್ಟರ್ಬ್ ಮಾಡಲಿದೆ. ಏಕೆಂದರೆ ಈ ಸಂಖ್ಯೆ ಆತನ ಹುಟ್ಟಿನ ದಿನಾಂಕಕ್ಕೆ ವಿರುದ್ಧವಾಗಿದೆ. ದರ್ಶನ್ ಜಾತಕದಲ್ಲಿ ಶನಿ ಇರುವ ಕಾರಣ ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ಈ ವರ್ಷ ಅವರು ಸಣ್ಣ ದುಃಖ, ಸೋಲು ಅನುಭವಿಸುತ್ತಾರೆ. ರಾಜಕೀಯದಲ್ಲಿ ಪ್ರಚಾರ ಮಾಡುತ್ತಾರೆ ಎಂದೆಲ್ಲ ಭವಿಷ್ಯ ನುಡಿದಿದ್ದರು. ಕಳೆದ ಚುನಾವಣೆಯಿಂದ ಈವರೆಗೆ ಗಮನಿಸಿದರೆ, ಇದೆಲ್ಲವು ಆಗಿದೆ.
ದರ್ಶನ್ ಬಳಿಕ ಶಾಸಕ ಮುನಿರತ್ನಗೆ ಸಂಕಷ್ಟ
ನಟ ದರ್ಶನ್ ಬಂಧನ ಬಳಿಕ ಆರ್‌ಆರ್ ನಗರದ ಭವಿಷ್ಯ ನಿಜ ಎಂಬಂತೆ ಭಾಸವಾಗುತ್ತಿದೆ. ಬಿಜೆಪಿ ಶಾಸಕ ಮುನಿರತ್ನ ಆರ್‌ಆರ್ ವಿಧಾನಸಭಾ ಕ್ಷೇತ್ರದ ಶಾಸಕ. ಅವರು ಅಲ್ಲಿಯೇ ವಾಸಿಸುತ್ತಿದ್ದಾರೆ. ಅವರು ಚುನಾವಣೆ ಗೆಲ್ಲಲು ಸಾಕಷ್ಟು ತಂತ್ರಗಾರಿಕೆ ಮಾಡಿದ್ದು ಎಲ್ಲಿರಿಗು ಗೊತ್ತಿದೆ. ಆದರೆ ಗೊತ್ತಿರದ ಸಂಗತಿಗಳು ಈಗಷ್ಟೆ ಬೆಳಕಿಗೆ ಬರುತ್ತಿದೆ.

ಗುತ್ತಿಗೆದಾರರ ಮೇಲಿನ ಜಾತಿನಿಂದನೆ, ಬೆದರಿಕೆ ಪ್ರಕರಣಗಳು ವರದಿ ಆಗಿವೆ. ರಾಜಕೀಯ ಎದುರಾಳಿಗೆ ಏಡ್ಸ್ ರೋಗಿಯ ರಕ್ತ ಇಂಜೆಕ್ಟ್ ಮಾಡಲು ಯತ್ನ ಸೇರಿದಂತೆ ಅನೇಕ ಆರೋಪಗಳನ್ನು ಮುನಿರತ್ನ ಎದುರಿಸುತ್ತಿದ್ದಾರೆ.
ಸ್ತ್ರೀಯ ಸಹವಾಸ ಸೆರೆವಾಸ
ಒಂದು ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದ ಶಾಸಕ ಮುನಿರತ್ನ ಅವರನ್ನು ರಾಮನಗರ ಪೊಲೀಸರು ಮಹಿಳೆ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ಬಂಧಿಸಿದ್ದಾರೆ. ಇದೊಂದಿಗೆ ಮತ್ತೊಬ್ಬ ಮಹಿಳೆ ತನ್ನ ಮೇಲೆಯು ಅತ್ಯಾಚಾರ ಮಾಡಿದ್ದಾನೆ ಎಂದು ದೂರು ದಾಖಲಿಸಿದ್ದಾರೆ. ಸದ್ಯ ಅವರು ಸ್ತ್ರೀ ಸಹವಾಸದಿಂದ ಸದ್ಯ ಶಾಸಕರು ಸೆರೆವಾಸ ಅನುಭವಿಸುತ್ತಿದ್ದಾರೆ. ಜೀವನದಲ್ಲಿ ಸಾಕಷ್ಟು ತೊಂದರೆ, ಅಪಮಾನ ಎದುರಿಸುತ್ತಿದ್ದಾರೆ. ಪ್ರಕರಣಗಳ ವಿಚಾರಣೆ ನ್ಯಾಯಾಲಯದಲ್ಲಿದೆ.
ಆರ್‌ಆರ್ ನಗರ ನಿವಾಸಿ ನಟ ದರ್ಶನ್ ಅವರು ನಟಿ ಪವಿತ್ರಾ ಗೌಡ ಅವರಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಅಶ್ಲೀಲ ಸಂದೇಶ ಮಾಡಿದ್ದ ಎಂದು ಚಿತ್ರದುರ್ಗ ವ್ಯಕ್ತಿ ರೇಣುಕಾಸ್ವಾಮಿಯನ್ನು ಕರೆತಂದು ಹಲ್ಲೆ ಮಾಡಿ, ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರ, ಬಳ್ಳಾರಿ ಜೈಲು ಸೇರಿದಂತೆ ಒಟ್ಟು 100 ದಿನ ಜೈಲಿನಲ್ಲಿ ಕಳೆದಿದ್ದು, ದರ್ಶನ್ ಅವರ ಸೆರೆವಾಸ ಮುಂದುವರಿದಿದೆ. ಸ್ತ್ರೀಯ ಸಹವಾಸದಿಂದ ಸ್ಟಾರ್ ನಟನೊಬ್ಬ ಅಪಮಾನ, ತೊಂದರೆ, ಸಂಕಷ್ಟ ಎದುರಿಸುವಂತಾಗಿದೆ. ಸಮಾಜದಲ್ಲಿ ತಲೆ ತಗ್ಗಿಸುವಂತಾಗಿದೆ.
ಜ್ಯೂತಿಷ್ಯ, ವಾಸ್ತು, ಗ್ರಹ ಗತಿ ನಂಬುವವರು ವಾಸಿಸುವ ಸ್ಥಳದಿಂದ ಇದೆಲ್ಲ ಆಗುತ್ತಿದೆ ಎಂದು ನಂಬುತ್ತಾರೆ. ಇನ್ನು ಕೆಲವರು ಇದೆಲ್ಲ ಸತ್ಯವಲ್ಲ. ಜೀವನದಲ್ಲಿ ಏನು ನಡೆಯಬೇಕೋ ಅದು ನಡೆದೆ ನಡೆಯುತ್ತದೆ. ಅದಕ್ಕೆ ವಾಸಿಸುವ ಜಾಗ, ಬಣ್ಣ, ಸಂಖ್ಯೆ ಮುಖ್ಯವಾಗುವುದಿಲ್ಲ ಎಂದು ಹೇಳುವವರು ಇದ್ದಾರೆ.
-
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಎಲೆಕ್ಷನ್ ಇವತ್ತೇ ನಡೆದರೆ ತಮಿಳುನಾಡು, ಕೇರಳಂ, ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಗೆಲುವು? ಸಮೀಕ್ಷೆ ನೀಡಿದ ಮಾಹಿತಿ ಇಲ್ಲಿದೆ -
ಟೀಂ ಇಂಡಿಯಾ ಕ್ರಿಕೆಟರ್ ಕುಲದೀಪ್ ಯಾದವ್ ಕೈಹಿಡಿದ ವಂಶಿಕಾ ಚಡ್ಡಾ ಯಾರು? -
Bengaluru: 1 ತಿಂಗಳು ಬದುಕೋಕೆ ಇಷ್ಟೊಂದು ಖರ್ಚಾಗುತ್ತಾ? ಯುವತಿಯ ಪೋಸ್ಟ್ ಕಂಡು ಬೆಚ್ಚಿಬಿದ್ದ ನೆಟ್ಟಿಗರು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
Oscars 2026: ಮೈಕಲ್ ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ: ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ -
SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಹಾಲ್ ಟಿಕೆಟ್ ತೋರಿಸಿದ್ರೆ KSRTC ಬಸ್ಸುಗಳಲ್ಲಿ ಉಚಿತ ಪ್ರಯಾಣ












Click it and Unblock the Notifications