Get Updates
Get notified of breaking news, exclusive insights, and must-see stories!

ಮಾದಕ ದ್ರವ್ಯ ವ್ಯಸನದಿಂದ ಮಗನ ಹೊರತಂದ ಕಷ್ಟ ಹೇಳಿಕೊಂಡ ಶಾಸಕ

ಬೆಂಗಳೂರು, ಜುಲೈ 13: ನಗರದ ಜೈನ್ ಕಾಲೇಜಿನಲ್ಲಿ ಓದುತ್ತಿದ್ದ ಶಾಸಕ ಕಳಕಪ್ಪ ಬಂಡಿ ಅವರ ಮಗ ಮಾದಕ ದ್ರವ್ಯ ವ್ಯಸನಕ್ಕೆ ಸಿಕ್ಕಿದ್ದ. ಆತನನ್ನು ವ್ಯಸನದಿಂದ ಹೊರತರಲು ತಾವು ತಮ್ಮ ಕುಟುಂಬ ಪಟ್ಟ ಕಷ್ಟಗಳನ್ನು ಅವರು ಸದನದ ಮುಂದೆ ಹೇಳಿಕೊಂಡರು.

ಸದನದಲ್ಲಿ ಇಂದು ಮಾದಕ ದ್ರವ್ಯ ಜಾಲದ ಬಗ್ಗೆ ಗಹನವಾದ ಚರ್ಚೆ ನಡೆಯಿತು. ಬಿಜೆಪಿಯ ಆರ್‌.ಅಶೋಕ್ ಎತ್ತಿದ ಚರ್ಚೆಗೆ ಪಕ್ಷಾತೀತರಾಗಿ ಶಾಸಕರು ಬೆಂಬಲ ಸೂಚಿಸಿದರು. ಇದೇ ಸಮಯದಲ್ಲಿ ಶಾಸಕ ಕಳಕಪ್ಪ ಸಹ ತಮ್ಮ ಕುಟುಂಬದ್ದೇ ಉದಾಹರಣೆಯನ್ನು ಹಂಚಿಕೊಂಡರು.

ಬಿಜೆಪಿಯ ಸುರೇಶ್ ಕುಮಾರ್, ಅರವಿಂದ ಲಿಂಬಾವಳಿ, ಕಾಂಗ್ರೆಸ್‌ನ ಎನ್.ಎ.ಹ್ಯಾರಿಸ್, ಇನ್ನೂ ಹಲವರು ಮಾದಕ ದ್ರವ್ಯ ಜಾಲ ಹರಡುತ್ತಿರುವ ಬಗ್ಗೆ ಹಾಗೂ ಅದರಿಂದಾಗುವ ವ್ಯಾಪಕ ಹಾನಿಯ ಬಗ್ಗೆ ಸದನದ ಗಮನ ಸೆಳೆದರು.

ಇವುಗಳಲ್ಲಿ ಅತಿ ಗಮನ ಸೆಳೆದದ್ದು ರೋಣದ ಬಿಜೆಪಿ ಶಾಸಕ ಕಳಕಪ್ಪ ಬಂಡಿ ಹೇಳಿದ ಸ್ವಂತ ಅನುಭವ. ಇವರ ಮಗನೇ ಮಾದಕ ದ್ರವ್ಯ ವ್ಯಸನಕ್ಕೆ ಸಿಕ್ಕಿಬಿಟ್ಟಿದ್ದನಂತೆ.

MLA Kalakappa told his story how he get out his son from drug addiction

ಮಾದಕ ದ್ರವ್ಯ ವ್ಯಕ್ತಿಗೆ ಮಾತ್ರವಲ್ಲ ಆತನ ಕುಟುಂಬಕ್ಕೂ ಅತೀವ ಹಿಂಸೆ ನೀಡುತ್ತದೆ ಎಂದು ಅವರು, ಮಾದಕ ದ್ರವ್ಯ ಯುವಕರಿಗೆ ಶಾಪ ಅದನ್ನು ಬೇರು ಸಹಿತ ಕಿತ್ತು ಹಾಕಬೇಕು ಎಂದು ಆಕ್ರೋಶಭರಿತರಾಗಿ ನುಡಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+