ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಕರಣದ ನ್ಯಾಯಾಂಗ ತನಿಖೆ ಆಗಲೇಬೇಕು: ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ಆ. 29: ಪುಲಕೇಶಿನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ತಮ್ಮ ನಿವಾಸದ ಮೇಲೆ ನಡೆದಿದ್ದ ದಾಳಿಯ ಬಳಿಕ ಮೊದಲ ಬಾರಿ ಸಿದ್ದರಾಮಯ್ಯ ಅವರನ್ನು ಅಖಂಡ ಶ್ರೀನಿವಾಸಮೂರ್ತಿ ಭೇಟಿ ಮಾಡಿದರು.

Recommended Video

OTP ಹೇಳಿದರೆ ನಿಮ್ ಡುಡ್ಡು ಗುಳುಂ!! | Oneindia Kannada

ಕಳೆದ ಆ. 11 ರಂದು ಮಂಗಳವಾರ ರಾತ್ರಿ ಅವರ ಮನೆ ಮೇಲೆ ದುಷ್ಕರ್ಮಿಗಳು ಏಕಾಏಕಿ ದಾಳಿಮಾಡಿ ಬೆಂಕಿ ಹಾಕಿ ಲೂಟಿ ಮಾಡಿದ್ದರು. ಗಲಭೆಯಲ್ಲಿ ಪೊಲೀಸರ ಗುಂಡೇಟಿಗೆ ನಾಲ್ವರು ಸಾವನ್ನಪ್ಪಿದ್ದರು. ಅದಾದ ಬಳಿಕ ಇಡೀ ಪ್ರಕರಣ ರಾಜಕೀಯ ಬಣ್ಣ ಪಡೆದುಕೊಂಡಿತ್ತು. ಇದೀಗ ಸಿದ್ದರಾಮಯ್ಯ ಅವರನ್ನು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಈ ಭೇಟಿ ಕುತೂಹಲ ಮೂಡಿಸಿದೆ.

ಭೇಟಿ ಬಳಿಕ ಮಾತನಾಡಿದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು, ನಮ್ಮ‌ ಸಮಸ್ಯೆಗಳನ್ನು ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೇನೆ. ಅವರು ನಮ್ಮ ನಾಯಕರು. ಇನ್ನು ಎರಡ್ಮೂರು ದಿನಗಳಲ್ಲಿ ಭೇಟಿ ನೀಡುತ್ತಾರೆ. ನಮ್ಮ‌ ಮನೆ ಪರಿಸ್ಥಿತಿಯನ್ನು ನೀವೇ ನೋಡಿದ್ದೀರಿ. ನಾನು, ನಮ್ಮ ಕುಟುಂಬ ಇನ್ನೂ ನೋವಿನಲ್ಲೇ ಇದ್ದೇವೆ. ಆದರೆ ಕ್ಷೇತ್ರದ ಜನ ನಮ್ಮ‌ ಜೊತೆ ಇದ್ದಾರೆ. ನಾಯಕ ಸಿದ್ದರಾಮಯ್ಯ ಅವರು ನನಗೆ ಧೈರ್ಯ ತುಂಬಿದ್ದಾರೆ. ಅವರೇ ನಮ್ಮನ್ನು ಪಕ್ಷಕ್ಕೆ ಕರೆತಂದವರು ಎಂದಿದ್ದಾರೆ.

Mla Akhanda Srinivasa Murthy Has Met Lop Siddaramaiah Held Discussion In Bengaluru

ಇದೇ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಎರಡು ಬಾರಿ ಫೋನ್ ಮಾಡಿದ್ದೆ. ಇವತ್ತು ಅವರು ನನ್ನನ್ನು ಭೇಟಿ ಮಾಡಿದ್ದಾರೆ. ಇನ್ನೆರಡು ದಿನದಲ್ಲಿ ನಾನು ಅಲ್ಲಿಗೆ‌ ಹೋಗುತ್ತೇನೆ ಎಂದಿದ್ದಾರೆ.

Mla Akhanda Srinivasa Murthy Has Met Lop Siddaramaiah Held Discussion In Bengaluru

ಆ ಘಟನೆಯನ್ನು ನಾನು ಖಂಡಿಸಿದ್ದೇನೆ. ಶ್ರೀನಿವಾಸ್ ಮೂರ್ತಿ ಎಲ್ಲರನ್ನು ಒಟ್ಟಿಗೆ ಕರೆದೊಯ್ಯುತ್ತಿದ್ದಾರೆ. ಪ್ರಕರಣದ ನಿಷ್ಪಕ್ಷಪಾತ ತನಿಖೆ ಆಗಬೇಕು. ಯಾರೇ ಆಗಿರಲಿ ಅವರ ಮೇಲೆ ಕ್ರಮವಾಗಬೇಕು. ಘಟನೆಯ ಹಿಂದೆ ಯಾರ ಕೈವಾಡವಿದೆ ಗೊತ್ತಿಲ್ಲ. ತನಿಖೆಯಿಂದ ಅದು ಹೊರಬರಬೇಕಿದೆ. ತಪ್ಪಿತಸ್ಥರಿಗೆ ಶಿಕ್ಷಯಾಗಬೇಕು. ಶ್ರೀನಿವಾಸ್ ಮೂರ್ತಿ ಅವರಿಗೆ ನ್ಯಾಯ ಸಿಗಬೇಕು.

Mla Akhanda Srinivasa Murthy Has Met Lop Siddaramaiah Held Discussion In Bengaluru

ಸರ್ಕಾರ ತ್ವರಿತ ಕ್ರಮ ತೆಗೆದುಕೊಂಡಿದ್ದರೆ ಪರಿಸ್ಥಿತಿ ಹೀಗಾಗುತ್ತಿರಲಿಲ್ಲ. ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು? ಕೂಡಲೇ ಕಾರ್ಯೋನ್ಮುಖರಾಗಿದ್ದರೆ ಅವಘಡ ತಪ್ಪಿಸಬಹುದಿತ್ತು. ನಾನು ಆಯುಕ್ತರ ಜೊತೆ ಮಾತನಾಡಿದ್ದೇನೆ. ಪ್ರಕರಣದ ನ್ಯಾಯಾಂಗ ತನಿಖೆ ಆಗಲೇಬೇಕು. ಇದರ ಬಗ್ಗೆ ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದೇನೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

English summary
Pulakesinagar Congress MLA Akhanda Srinivasa Murthy has met opposition leader Siddaramaiah and held discussion. It was first meeting after the attack on his residence. Know more about meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X