ಅಖಂಡ ಶ್ರೀನಿವಾಸಮೂರ್ತಿ ಅಮಾಯಕನಲ್ಲ: ಅದೊಂದು ಪಕ್ಕಾ ಗೇಂ ಪ್ಲಾನ್

ಬೆಂಗಳೂರು, ಆ 18: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯ ಸಂಬಂಧ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಕೆಸೆರೆರೆಚಾಟ ಮುಂದುವರಿದಿದೆ. ಒಬ್ಬರು ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಕೆಲಸ ನಡೆಯುತ್ತಲೇ ಇದೆ.

Recommended Video

      Israel ಒಪ್ಪಂದದ ಬಗ್ಗೆ UAE ಮೇಲೆ ದಾಳಿ ಮಾಡುವುದಾಗಿ Iran ಬೆದರಿಕೆ ಹಾಕಿದೆ | Oneindia Kannada

      ಈ ನಡುವೆ, ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಬಿ.ಪ್ರಸನ್ನ ಕುಮಾರ್, ಪುಲಿಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

      "ಅಖಂಡ ಶ್ರೀನಿವಾಸಮೂರ್ತಿ ಬಿಜೆಪಿಯವರಿಗೆ ಮಾತ್ರ ಅಮಾಯಕ. ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ ಗಲಭೆ ಪಕ್ಕಾ ಗೇಂ ಪ್ಲಾನ್" ಎನ್ನುವ ಆರೋಪವನ್ನು ಪ್ರಸನ್ನ ಕುಮಾರ್ ಮಾಡಿದ್ದಾರೆ.

      MLA Akhanda Srinivas Murthy Not Innocent: Former Congress Leader B Prasanna Kumar

      "ಸ್ಥಳೀಯ ಶಾಸಕರು ಕಾಂಗ್ರೆಸ್ಸಿನವರಾದರೂ, ಅದೇ ಪಕ್ಷದ ಕಾರ್ಯಕರ್ತರನ್ನು ಅವರು ಕಡೆಗಣಿಸುತ್ತಲೇ ಬಂದಿದ್ದರು. ಹಾಗಾಗಿ, ಕಾರ್ಯಕರ್ತರ ವಲಯದಲ್ಲಿ ಅವರಿಗೆ ಒಳ್ಳೆಯ ಹೆಸರು ಇರಲಿಲ್ಲ"ಎಂದು ಪ್ರಸನ್ನ ಕುಮಾರ್ ಆರೋಪಿಸಿದ್ದಾರೆ.

      "ಗಲಭೆಗೆ ಕಾರಣವಾದ ಅಂಶಗಳೇ ಬೇರೆ. ಪೊಲೀಸರು ದೂರು ಬಂದ ಕೂಡಲೇ ಸ್ಪಂದಿಸಿದ್ದರೆ, ಇಂತಹ ಘಟನೆ ನಡೆಯುತ್ತಿರಲಿಲ್ಲ. ಇದೊಂದು ಸರಕಾರದ ವೈಫಲ್ಯ"ಎಂದು ಪ್ರಸನ್ನ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

      "ಪೈಗಂಬರ್ ವಿರುದ್ದ ಪೋಸ್ಟ್ ಹಾಕಿದ್ದ ವ್ಯಕ್ತಿಯನ್ನು ಕೂಡಲೇ ಬಂಧಿಸಬೇಕಾಗಿತ್ತು. ಪೊಲೀಸರು ಉದಾಸೀನತೆಯನ್ನು ತೋರಿದರು, ಹಾಗಾಗಿ ಬೆಲೆ ತೆರೆಬೇಕಾಗಿ ಬಂತು"ಎಂದು ಪ್ರಸನ್ನ ಕುಮಾರ್ ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+