ಹೊಸ ವರ್ಷಾಚರಣೆ: ಗರ್ಭಿಣಿ ಪತ್ನಿ ಎದುರು ಪತಿಗೆ ಚಾಕುವಿನಿಂದ ಇರಿದ ದುಷ್ಕರ್ಮಿಗಳು

ಬೆಂಗಳೂರು, ಜನವರಿ 1: ಹೊಸ ವರ್ಷಕ್ಕೆ ವಿಶ್ ಮಾಡಿಲ್ಲ ಎಂದು ಪತ್ನಿ ಎದುರೇ ಪತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕುರುಬರಹಳ್ಳಿ ಸಮೀಪ ನಡೆದಿದೆ.

ಗರ್ಭಿಣಿ ಪತ್ನಿಯೊಂದಿಗೆ ಪತಿ ಪ್ರವೀಣ್ ಹೊಸ ವರ್ಷವೆಂದು ಹೊರಗಡೆ ಹೋಗಿದ್ದ ವಾಪಸ್ ಬರುವಾಗ ಬೈಕ್‌ಗೆ ಅಡ್ಡ ಹಾಕಿದ ದುಷ್ಕರ್ಮಿಗಳು ಹೊಸ ವರ್ಷಕ್ಕೆ ಶುಭಾಶಯ ಕೋರಿದ್ದಾರೆ, ಇವರಿಗೂ ವಾಪಸ್ ಶುಭಾಶಯ ತಿಳಿಸುವಂತೆ ಹೇಳಿದ್ದಾರೆ, ಬಳಿಕ ವಿಶ್ ಮಾಡಿಲ್ಲ ಎಂದು ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ್ದಾರೆ.

ಚಾಕು ಕಂಡು ಗಾಬರಿಯಾದ ಪ್ರವೀಣ್ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ದುಷ್ಕರ್ಮಿಗಳು ನಮಗೆ ವಿಶ್ ಮಾಡುವುದಿಲ್ಲವಾ ನೀನು ಎಂದು ಅಡ್ಡಹಾಕಿ ಕೈ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ. ಪ್ರವೀಣ್‍ಗೆ ಚಾಕುವಿನಿಂದ ಇರಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Miscreants stabs youth for not wishing new year in Bengaluru

ಗಾಯಗೊಂಡ ಪ್ರವೀಣ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+