ಹಸುಳೆ ಮೇಲೆ ಅತ್ಯಾಚಾರ: ಬಾಲಾಪರಾಧಿ ಬಂಧನ

arrest
ಬೆಂಗಳೂರು, ಜು.23: ಮೂರು ವರ್ಷದ ಹಸುಳೆ ಮೇಲೆ ಅತ್ಯಾಚಾರ ಎಸಗಿದ್ದ ಬಾಲಾಪರಾಧಿಯನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.

ದೂರು ದಾಖಲಾದ ಬಳಿಕ ನಾಪತ್ತೆಯಾಗಿದ್ದ 16 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದು ಬಾಲಾಪರಾಧಿ ರಿಮಾಂಡ್‌ ಹೋಂನಲ್ಲಿದ್ದಾನೆ.

ತಲಘಟ್ಟಪುರ ಬಳಿಯ ತಟ್ಟಗುಪ್ಪೆ ಎಂಬಲ್ಲಿ ಮೂರು ವರ್ಷ ಪ್ರಾಯದ ಹೆಣ್ಣು ಮಗುವಿನ ಮೇಲೆ ವಿಕೃತ ಕಾಮಿಯೊಬ್ಬ ಅಮಾನವಿಯವಾಗಿ ಅತ್ಯಾಚಾರ ನಡೆಸಿರುವುದು ತಡವಾಗಿ ಮಂಗಳವಾರ ಬೆಳಕಿಗೆ ಬಂದಿತ್ತು.[ಲೋಕಸಭೆಯಲ್ಲಿ ಪ್ರತಿಧ್ವನಿಸಿದ ಅತ್ಯಾಚಾರ ಪ್ರಕರಣ]

ಜು.15ರಂದು ಅತ್ಯಾಚಾರ ನಡೆದಿದ್ದು, ಜು.18ರಂದು ಪ್ರಕರಣ ಬೆಳಕಿಗೆ ಬಂದಿದೆ. ಮೂರು ವರ್ಷದ ಬಾಲಕಿಗೆ ಬಿಸ್ಕತ್‌ ನೀಡುವ ನೆಪದಲ್ಲಿ ಆಕೆಯನ್ನು ಮನೆಗೆ ಕರೆದೊಯ್ದು ಪರಿಚಿತ ಬಾಲಕ ಅತ್ಯಾಚಾರ ಎಸಗಿದ್ದ. ಶನಿವಾರದಿಂದ ಮೂತ್ರ ವಿಸರ್ಜ‌ನೆ ಮಾಡುವಾಗ ಆಕೆಗೆ ತೊಂದರೆ ಕಾಣಿಸಿದೆ. ಮೂರು ತಿಂಗಳ ಆಕೆಗೆ ಹೃದಯ ಶಸ್ತ್ರಚಿಕಿತ್ಸೆ ಆಗಿತ್ತು. ಇದರಿಂದಾಗಿ ಮೂತ್ರ ವಿಸರ್ಜನೆ ಸಮಸ್ಯೆಯಾಗಿರಬಹುದು ಎಂಬ ಆತಂಕದಿಂದ ಪೋಷಕರು ಬಾಲಕಿಯನ್ನು ಸೇಂಟ್‌ ಜಾನ್ಸ್‌ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಕರೆತಂದಿದ್ದರು. ಬಾಲಕಿಯನ್ನು ತಪಾಸಣೆ ನಡೆಸಿದ ವೈದ್ಯರು ವೈದ್ಯರು ಬಾಲಕಿಯ ಪೋಷಕರಿಗೆ ಅತ್ಯಾಚಾರ ನಡೆದಿರುವ ವಿಷಯ ತಿಳಿಸಿ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದಾರೆ.[ರಾಜ್ಯದಲ್ಲಿನ ಅತ್ಯಾಚಾರ ಪ್ರಕರಣಗಳು]

ಆರೋಪಿಯ ಸಂಬಂಧಿ ಗ್ರಾ.ಪಂ. ಸದಸ್ಯ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡನಾಗಿದ್ದು, ಆ ರಾಜಕೀಯ ಬಳಸಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದರು. ಅದು ಸಾಧ್ಯವಾಗದಾಗ ಊರಿನ ಹಿರಿಯ ಮುಖಂಡರು ಸಂಧಾನದ ಮಾತುಕತೆ ನಡೆಸಿ ಕೇಸು ದಾಖಲಾಗದಂತೆ ಪ್ರಯತ್ನಿಸಿದ್ದರು. ಆದರೆ, ರಾಜಿ ಪಂಚಾಯಿತಿ ವಿಫಲಗೊಂಡ ಬಳಿಕ ಜು.21ರಂದು ತಲಘಟ್ಟಪುರ ಪೊಲೀಸ್ ಠಾಣೆಗೆ ತೆರಳಿ ಬಾಲಕಿ ಪೋಷಕರು ದೂರು ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+