ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಇನ್‌ಸ್ಟಾಗ್ರಾಮ್ ಗೆಳೆಯರೇ ಅಂದರ್ !

ಬೆಂಗಳೂರು, ಜನವರಿ 22: ಇನ್‌ಸ್ಟಾ ಗ್ರಾಂ ಖಾತೆ ಹೊಂದಿರುವ ಯುವತಿಯರೇ ಹುಷಾರ್ ! ನಿಮ್ಮ ಇನ್‌ಸ್ಟಾ ಖಾತೆ ಫಾಲೋ ಮಾಡುವ ಅಪರಿಚಿತರ ಸ್ನೇಹ ಬೆಳೆಸುವ ಮುನ್ನ ನೂರು ಸಲ ಆಲೋಚಿಸಿ. ಸ್ವಲ್ಪ ಯಾಮಾರಿದ್ರೂ ಅನಾಹುತಕ್ಕೆ ದಾರಿ ಮಾಡಿಕೊಟ್ಟೀತು !

ಇನ್‌ಸ್ಟಾಗ್ರಾಂ ಜಾಲ ತಾಣದಲ್ಲಿ ಪರಿಚಿತನಾದದ ಸ್ನೇಹಿತರು ಅಪರಿಚಿತ ಬಾಲಕಿಯನ್ನು ಹೊರೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹದಿನೇಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳು ಸೇರಿದಂತೆ ಸಹಕರಿಸಿದ ಒಟ್ಟು ಐವರು ಆರೋಪಿಗಳನ್ನು ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ.

ಅಭಿ, ವೆಂಕಿ ಅಲಿಯಾಸ್ ವೆಂಕಟೇಶ್, ಲೇಖನ್, ಚೇತನ್, ರಕ್ಷತ್ ಬಂಧಿತ ಆರೋಪಿಗಳು. ಅತ್ಯಾಚಾರ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಆರೋಪಿಗಳು. ಹನುಮಂತನಗರ ಠಾಣಾ ವ್ಯಾಪ್ತಿಯ ಹದಿನೇಳು ವರ್ಷದ ಬಾಲಕಿಗೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವೆಂಕಿ ಮತ್ತು ಲೇಖನ್ ಎಂಬುವರು ಸ್ನೇಹಿತರಾಗಿದ್ದರು. ಪದೇ ಪದೇ ಬಾಲಕಿ ಜತೆ ಸಂವಹನ ಮಾಡುತ್ತಿದ್ದರು. ಜನವರಿ 18 ರಂದು ಬೆಳಗಿನ ಜಾವ ಲಾಂಗ್ ಡ್ರೈವ್ ಕರೆದುಕೊಂಡು ಹೋಗುವುದಾಗಿ ನಂಬಿಸಿ ಆಕೆಯನ್ನು ಮನೆಯಿಂದ ಕರೆದುಕೊಂಡು ಬಂದಿದ್ದಾರೆ. ಆನಂತರ ಗುಟ್ಟಹಳ್ಳಿಯಲ್ಲಿರುವ ರೂಮ್‌ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾರೆ. ಆನಂತರ ಆ ಬಾಲಕಿಯನ್ನು ಶ್ರೀನಗರದ ಬಸ್ ನಿಲ್ದಾಣದ ಬಳಿ ಬಿಟ್ಟು ಹೊರಟು ಹೋಗಿದ್ದಾರೆ.

Minor girl raped by Instagram friends, arrested

ಮಧ್ಯರಾತ್ರಿ ಮನೆಯಲ್ಲಿ ಇಲ್ಲದ ಮೊಮ್ಮಗಳನ್ನು ನೋಡಿ ಗಾಬರಿಗೊಂಡ ಸಂತ್ರಸ್ತ ಬಾಲಕಿಯ ತಾತ ಗಸ್ತಿನಲ್ಲಿದ್ದ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಈ ವೇಳೆ ಪೊಲೀಸರು ಹುಡುಕಾಡಿದಾಗ ಶ್ರೀನಗರ ಬಸ್ ನಿಲ್ದಾಣದಲ್ಲಿ ಬಾಲಕಿ ನಿಂತಿದ್ದಳು. ಕರೆದು ವಿಚಾರಣೆ ನಡೆಸಿದಾಗ ವೆಂಕಿ, ಲೇಖನ್ ಲಾಂಗ್ ಡ್ರೈವ್ ಕರೆದುಕೊಂಡು ಹೋಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿದ್ದಾಗಿ ತಿಳಿಸಿದ್ದಾಳೆ. ಇದಕ್ಕೂ ಮೊದಲು ಒಂದು ಸಲ ಕಾರಿನಲ್ಲಿ ಕರೆದುಕೊಂಡು ಹೋಗಿ ಮೂವರು ಅತ್ಯಾಚಾರ ಎಸಗಿರುವ ವಿಷಯವನ್ನು ಬಾಲಕಿ ತನ್ನ ತಾತನ ಬಳಿ ಹೇಳಿಕೊಂಡಿದ್ದಾಳೆ. ಈ ಕುರಿತು ಸಂತ್ರಸ್ತ ಬಾಲಕಿ ತಾತ ಹನುಮಂತನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Minor girl raped by Instagram friends, arrested

Recommended Video

      ಸಿದ್ದು ನರಿ ಬುದ್ದಿ ನೋಡಿ ರಾಹುಲ್ ಶಾಕ್!! | Oneindia Kannada

      ಬಾಲಕಿಯನ್ನು ವಿಚಾರಣೆ ನಡೆಸಿದಾಗ, ವೆಂಕಿ ಮತ್ತು ಲೇಖನ್ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿ ಸ್ನೇಹಿತರಾಗಿದ್ದರು. ಆನಂತರ ಹೊರಗೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಎರಡು ಸಲ ಸಾಮೂಹಿಕವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾಗಿ ತಿಳಿಸಿದ್ದಾಳೆ. ಈ ವಿಷಯ ಪೋಷಕರಿಗೆ ತಿಳಿಸಿದರೆ ನಿನಗೆ ಸಮಸ್ಯೆಯಾಗಲಿದೆ ಎಂದು ಹೆದರಿಸಿದ್ದರಿಂದ ಈ ವಿಷಯ ಬಾಯಿ ಬಿಟ್ಟಿರಲಿಲ್ಲ ಎಂದು ಸಂತ್ರಸ್ತ ಬಾಲಕಿ ತಿಳಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+