ನಾನು ಕಾಂಗ್ರೆಸ್ ಗೆ ಸೇರಲು ಸಿದ್ಧನಿದ್ದೆ ಎಂದ ಸಚಿವ ಶಂಕರ್
ಬೆಂಗಳೂರು, ಡಿಸೆಂಬರ್ 22: ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನದಿಂದ ಕೈಬಿಟ್ಟಿರುವುದಕ್ಕೆ ಸಚಿವ ಆರ್ ಶಂಕರ್ ಅಸಮಾಧಾನ ಹೊರಹಾಕಿದ್ದಾರೆ.
2018 ವಿಧಾನಸಭೆ ಚುನಾವಣೆಯಲ್ಲಿ ಕೆಪಿಜೆಪಿಯಿಂದ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಯ ಗಳಿಸಿದ್ದರು. ಬಳಿಕ ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಅವರಿಗೆ ಅರಣ್ಯ ಸಚಿವ ಖಾತೆ ನೀಡಲಾಗಿತ್ತು.
ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಲು ಸಿದ್ಧನಿದ್ದೆ ಈ ಕುರಿತು ಪಕ್ಷದವರಲ್ಲಿ ಹೇಳಿಕೊಂಡಿದ್ದೆ,ಪಕ್ಷಕ್ಕೇ ಸೇರುತ್ತೇನೆ ಎಂದಿದ್ದರೂ ಸಚಿವ ಸ್ಥಾನದಿಂದ ಕೈಬಿಟ್ಟಿರುವುದಕ್ಕೆ ತುಂಬಾ ಬೇಸರವಾಗಿದೆ. ಒಮ್ಮೆ ಅವರ ಆತ್ಮಸಾಕ್ಷಿಯನ್ನು ಅವರು ಕೇಳಿಕೊಳ್ಳಲಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ಅರಣ್ಯ ಸಚಿವನಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದೇನೆ, ಸರ್ಕಾರದ ನಡೆ ಮೇಲೆ ನನ್ನ ನಡೆ ಸದ್ಯಕ್ಕೆ ಏನನ್ನೂ ಹೇಳುವುದಿಲ್ಲ, ಸಚಿವ ಸ್ಥಾನದಿಂದ ಕೈಬಿಟ್ಟಿರುವ ವಿಚಾರವಾಗಿ ನನಗೆ ಅಧಿಕೃತವಾಗಿ ಏನನ್ನೂ ತಿಳಿಸಿಲ್ಲ ಎಂದಿದ್ದಾರೆ.












Click it and Unblock the Notifications