ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ನಾವು ಪಂಚ ಪಾಂಡವರು, ಅವರಿಬ್ಬರು ಯಾರು ಅಂತಾ ಗೊತ್ತಿದೆ'- ಆರ್ ಅಶೋಕ್

|
Google Oneindia Kannada News

ಬೆಂಗಳೂರು, ಜುಲೈ 24: ವೈದ್ಯಕೀಯ ಸಾಮಾಗ್ರಿಗಳ ಖರೀದಿಯಲ್ಲಿ ಭ್ರಷ್ಟಾಚಾರ ಕುರಿತು ನ್ಯಾಯಾಂಗ ತನಿಖೆ ಮಾಡಲಿ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಕಂದಾಯ ಸಚಿವ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು 'ಇವರು ಹೇಳಿದ್ದಕ್ಕೆಲ್ಲಾ ತನಿಖೆ ಮಾಡಿಸಲು ಆಗಲ್ಲ. ತನಿಖೆಗೆ ಆಗ್ರಹ ಮಾಡುವುದೇ ಇವರಿಗೊಂದು ಚಟ ಆಗಿದೆ' ಎಂದಿದ್ದಾರೆ.

Recommended Video

40 ಸಾವಿರ ಸೈನಿಕರಿಗೆ ಶಸ್ತ್ರಾಸ್ತ್ರ ಕೊಟ್ಟು ಕಳುಹಿಸಿದ ಚೀನಾ | Oneindia Kannada

'ಸರ್ಕಾರದ ಭ್ರಷ್ಟಾಚಾರದ ಕುರಿತು ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆಯಾಗಲಿ. ತನಿಖೆಗೆ ಸರ್ಕಾರ ಒಪ್ಪುವುದಿಲ್ಲ ಎಂದಾದರೆ ಅವರು ಕಳ್ಳತನ ಮಾಡಿದ್ದಾರೆ ಎಂದು ಅರ್ಥ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಸಹ ಆಗ್ರಹಿಸಿದ್ದರು.

ಕೋವಿಡ್ ಭ್ರಷ್ಟಾಚಾರ: ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಒತ್ತಾಯಕೋವಿಡ್ ಭ್ರಷ್ಟಾಚಾರ: ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಒತ್ತಾಯ

ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಆರ್ ಅಶೋಕ್ ''ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರು ಅನ್ನೋದು ನೆನಪಿರಲಿ. ಅವರು ಹೀಗೇ ಮಾಡಬೇಕು ಎಂದು ಆರ್ಡರ್ ಮಾಡುವಂತಿಲ್ಲ' ಎಂದು ತಿರುಗೇಟು ನೀಡಿದ್ದಾರೆ. ಮುಂದೆ ಓದಿ...

ಆರ್ಡರ್ ಮಾಡುವಂತಿಲ್ಲ, ಸಲಹೆ ಕೊಡಬೇಕು ಅಷ್ಟೇ

ಆರ್ಡರ್ ಮಾಡುವಂತಿಲ್ಲ, ಸಲಹೆ ಕೊಡಬೇಕು ಅಷ್ಟೇ

'ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರು ಅನ್ನೋದು ನೆನಪಿರಲಿ. ಅವರು ಹೀಗೇ ಮಾಡಬೇಕು ಎಂದು ಆರ್ಡರ್ ಮಾಡುವಂತಿಲ್ಲ, ಸಲಹೆ ಕೊಡಬೇಕು ಅಷ್ಟೇ. ನಾವು ಈಗಾಗಲೇ ಅವರಿಗೆ ಸುದ್ದಿಗೋಷ್ಠಿ ಮಾಡಿ ಉತ್ತರ ಕೊಟ್ಟಿದ್ದೇವೆ. ನಮ್ಮ ಉತ್ತರಕ್ಕೆ ಅವರ ಪ್ರತಿ ಉತ್ತರವೇ ಇಲ್ಲ' ಎಂದು ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್‌ನವರು ಹೆಚ್ಚು ಬೆಲೆಗೆ ವೆಂಟಿಲೇಟರ್ ಖರೀದಿ ಮಾಡಿದಾಗ ನೀವ್ಯಾಕೆ ಪ್ರಶ್ನಿಸಲಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅಶೋಕ್ 'ನಾವು ಯಾವಾಗ ಕೇಳಬೇಕು ಎಂದು ಗೊತ್ತಿದೆ. ಅವರು ಹೇಳಿದಾಗ ಕೇಳಬೇಕು ಅಂತೇನೂ ಇಲ್ಲ' ಎಂದಿದ್ದಾರೆ.

ಕಾಂಗ್ರೆಸ್ ಈಗಾಗಲೇ ಮೂಲೆಗುಂಪು ಆಗಿದೆ

ಕಾಂಗ್ರೆಸ್ ಈಗಾಗಲೇ ಮೂಲೆಗುಂಪು ಆಗಿದೆ

'ಕಾಂಗ್ರೆಸ್ ಈಗಾಗಲೇ ಮೂಲೆಗುಂಪು ಆಗಿದೆ. ಈ ಸಂಧರ್ಭದಲ್ಲಿ ಹೇಗಾದರೂ ಬೆಳಕಿಗೆ ಬರೋಣ ಅಂತಾ ಪ್ರಯತ್ನಪಡುತ್ತಿದ್ದಾರೆ. ಇವರಿಗೆ ಕೊರೊನಾ ವಾರಿಯರ್ಸ್ ಬಗ್ಗೆ ಗೌರವ ಇಲ್ಲ. ಕೊರೊನಾ ವಿರುದ್ದ ಹೋರಾಟ ಮಾಡುತ್ತಿರುವ ಅಧಿಕಾರಿಗಳ ಸ್ಥೈರ್ಯ ಕುಂದಿಸುವ ಕೆಲಸ ಮಾಡ್ತಿದಾರೆ. ಒಬ್ಬ ಕೊರೊನಾ ರೋಗಿ ಮನೆಗೆ ಇವರು ಹೋಗಿಲ್ಲ. ಇವರು ಹೇಳಿದ್ದಕ್ಕೆಲ್ಲಾ ತನಿಖೆ ಮಾಡಿಸಲು ಆಗಲ್ಲ. ತನಿಖೆಗೆ ಆಗ್ರಹ ಮಾಡುವುದೇ ಇವರಿಗೊಂದು ಚಟ ಆಗಿದೆ. ಯಾವುದನ್ನು ತನಿಖೆ ಮಾಡಿಸಬೇಕು, ಯಾವುದು ಮಾಡಿಸಬಾರದು ಎಂಬುದು ನಮಗೂ ಗೊತ್ತಿದೆ' ಎಂದು ಹೇಳಿದ್ದಾರೆ.

ಬಿಎಸ್ವೈ ಸರಕಾರವನ್ನು 'ಕಲಿಯುಗದ ಕೌರವರು'ಎಂದ ಡಿ.ಕೆ.ಶಿವಕುಮಾರ್ಬಿಎಸ್ವೈ ಸರಕಾರವನ್ನು 'ಕಲಿಯುಗದ ಕೌರವರು'ಎಂದ ಡಿ.ಕೆ.ಶಿವಕುಮಾರ್

ನಾವು ಪಂಚ ಪಾಂಡವರು

ನಾವು ಪಂಚ ಪಾಂಡವರು

ಪಂಚ ಪಾಂಡವರು ಎಂಬ ವಿಚಾರದ ಮಾತನಾಡಿದ್ದ ಸಿದ್ದರಾಮಯ್ಯ 'ಅವರು ಕೌರವರಾಗಲು ಕೂಡಾ ಯೋಗ್ಯರಲ್ಲ ಎಂದು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್ ಅಶೋಕ್ 'ನಾವು ಪಂಚ ಪಾಂಡವರು ಐವರು ಬಂದಿದ್ದೇವೆ. ಅವರು ಸುದ್ದಿಗೋಷ್ಠಿಗೆ ಇಬ್ಬರೇ ಇಬ್ಬರು ಬಂದಿದ್ದಾರೆ. ಕೌರವರು ಅಷ್ಟು ಜನ ಇದ್ದರೂ ಯಾವಗಲೂ ಇಬ್ಬರೇ ಬರುತ್ತಾರೆ. ಅವರು ಇಬ್ಬರು ಯಾರು ಅಂತಾ ಎಲ್ಲರಿಗೂ ಗೊತ್ತಿದೆ' ಎಂದು ಟೀಕಿಸಿದ್ದಾರೆ.

ದಕ್ಷಿಣ ವಲಯದಲ್ಲಿ ಹೆಚ್ಚು ಕೇಸ್

ದಕ್ಷಿಣ ವಲಯದಲ್ಲಿ ಹೆಚ್ಚು ಕೇಸ್

'ದಕ್ಷಿಣ ವಲಯದ ದಲ್ಲಿ ಅತಿ ಹೆಚ್ಚು ಸಾವುಗಳು ಆಗುತ್ತಿರುವುದನ್ನು ಸಿಎಂ ಗಮನಕ್ಕೆ ತಂದಿದ್ದೇವೆ. ಕಲಾಸಿಪಾಳ್ಯ ಮತ್ತು ಕೆ ಆರ್ ಮಾರ್ಕೆಟ್ ಪ್ರದೇಶಗಳಲ್ಲೆ ಹೆಚ್ಚು ಸಾವುಗಳು ಸಂಭವಿಸಿವೆ. ಈ ಎರಡೂ ಮಾರ್ಕೆಟ್ ಏರಿಯಾಗಳನ್ನು ಯಾವುದೇ ಕಾರಣಕ್ಕೂ ತೆರೆಯಬಾರದು ಎಂದು ಮನವಿ ಮಾಡಿದ್ದೇವೆ. ಬೆಂ ದಕ್ಷಿಣ ವಲಯಕ್ಕೆ ಹೆಚ್ಚು ಬೆಡ್ ಗಳ ವ್ಯವಸ್ಥೆ ಆಗಬೇಕು. ಕೊರೊನಾ ಟೆಸ್ಟ್ ಗಳ ಸಂಖ್ಯೆ ಹೆಚ್ಚು ಮಾಡಬೇಕು ಹಾಗೂ ಹೋಂ ಕ್ವಾರಂಟೈನ್ ನಲ್ಲಿ ಇರುವ ರೋಗಿಗಳಿಗೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳಲು ಸೂಚನೆ ಎಂದೂ ಸಿಎಂ ಹೇಳಿದ್ದಾರೆ' ಎಂದು ಅಶೋಕ್ ಮಾಹಿತಿ ನೀಡಿದ್ದಾರೆ.

English summary
Reacting to Siddaramaiah's allegations, Revenue R Ashok said that a 'judicial inquiry cannot be conducted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X