ಬೆಂಗಳೂರಿನ ಬಗ್ಗೆ ಬೇಸರ ವ್ಯಕ್ತಪಡಿಸಿದ ಮೋಹನ್‌ದಾಸ್ ಪೈಗೆ ತರಾಟೆ

ಬೆಂಗಳೂರು, ನವೆಂಬರ್‌ 30: ಮಣಿಪಾಲ್ ಗ್ಲೋಬಲ್ ಎಜುಕೇಶನ್‌ನ ಅಧ್ಯಕ್ಷ ಮತ್ತು ಇನ್ಫೋಸಿಸ್ ಟಿವಿಯ ಮಾಜಿ ಮಂಡಳಿಯ ಸದಸ್ಯ ಮೋಹನ್‌ದಾಸ್ ಪೈ ಐಟಿ ರೇಸ್‌ನಲ್ಲಿ ಬೆಂಗಳೂರನ್ನು ಹೈದರಾಬಾದ್ ನಗರ ದೇಶದ ಮಾಹಿತಿ ತಂತ್ರಜ್ಞಾನದ ರಾಜಧಾನಿಯಾಗಿ ಬದಲಾಗಬಹುದು ಎಂದು ಕರ್ನಾಟಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನ ಮೂಲಸೌಕರ್ಯ ವಿಚಾರದಲ್ಲಿ ವಿವಿಧ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿರುವ ಪೈ, ಸಿದ್ದರಾಮಯ್ಯ ಸರ್ಕಾರ ಬೆಂಗಳೂರು ನಗರವನ್ನು ಸುಧಾರಿಸಲು ಹೆಚ್ಚಿನ ಶಕ್ತಿ ತೋರಿಸಲಿ ಎಂದು ಒತ್ತಾಯಿಸಿದರು.

Minister priyank kharge has hit back at Mohandas Pai, who expressed his displeasure about Bengaluru

ಈ ಸಂಬಂಧ ಎಕ್ಸ್‌ನಲ್ಲಿ ಅವರು ಕಳವಳ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಎಕ್ಸ್‌ ಬಳಕೆದಾರರೊಬ್ಬರು ಮೋಹನ್‌ದಾಸ್‌ ಪೈ ಅವರನ್ನು ಬೆಂಬಲಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೂಷಿಸಿದರು. ಮತ್ತೊಬ್ಬ ಎಕ್ಸ್ ಬಳಕೆದಾರರು ಬೆಳಗಾವಿ ಮತ್ತು ಹುಬ್ಬಳ್ಳಿಯಂತಹ ನಗರಗಳಲ್ಲಿ ಐಟಿ ಪಾರ್ಕ್‌ಗಳನ್ನು ಸ್ಥಾಪಿಸಲು ಸರ್ಕಾರಕ್ಕೆ ಸಲಹೆ ನೀಡಿದರು.

ಮೋಹನ್‌ದಾಸದದ ಪೈ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಪೈ ಅವರಿಗೆ ಮಾಹಿತಿಯ ಕೊರತೆ ಇದ್ದಂತೆ ತೋರುತ್ತಿದೆ. ಸರ್ಕಾರದೊಂದಿಗೆ ಸಂಧಾನಕ್ಕೆ ಬಂದ ಒಂದೇ ಒಂದು ಕಂಪನಿಯೂ ಕರ್ನಾಟಕವನ್ನು ಬಿಟ್ಟಿಲ್ಲ. ಕರ್ನಾಟಕ ವಿರೋಧಿ ಹೇಳಿಕೆ ನೀಡುವುದು ಕೆಲವರಿಗೆ ಅಭ್ಯಾಸವಾಗಿ ಹೋಗಿದೆ. ಯಾವ ಕಂಪನಿ ಕರ್ನಾಟಕ ಬಿಟ್ಟಿದೆ ಎನ್ನುವುದನ್ನು ಅವರೇ ಹೇಳಲಿ ಎಂದು ಹೇಳಿದರು.

ಪೈ ಅವರು ಕೂಡ ಅದೇ ಹಿನ್ನೆಲೆಯಿಂದ ಬಂದವರು. ಅವರು ಸಾಹಸೋದ್ಯಮ ಬಂಡವಾಳಗಾರರೂ ಆಗಿದ್ದರು. ಅವರು ದೆಹಲಿ ಮತ್ತು ಚೆನ್ನೈ ಕಂಪನಿಗಳಲ್ಲಿ ಹೂಡಿಕೆ ಮಾಡುವುದಿಲ್ಲವೇ? ಇದನ್ನು ವೈವಿಧ್ಯೀಕರಣ ಎಂದು ಕರೆಯಲಾಗುತ್ತದೆ. ಅವರು ವೈವಿಧ್ಯೀಕರಣವನ್ನು ಮಾಡಿದರೆ ಅದು ಸರಿ ಮತ್ತು ಇತರರು ಮಾಡಿದರೆ ಅದು ತಪ್ಪು. ಮಾತುಕತೆ ನಡೆಸಿ ರಾಜ್ಯ ಬಿಟ್ಟು ಹೋಗಿರುವ ಒಂದು ಕಂಪನಿಯನ್ನು ನನಗೆ ತೋರಿಸಿ ಎಂದು ಸಚಿವರು ಪೈ ಅವರನ್ನು ಪ್ರಶ್ನಿಸಿದರು.

ಕಳೆದ ತಿಂಗಳು ಕೇನ್ಸ್ ಟೆಕ್ನಾಲಜೀಸ್ ತೆಲಂಗಾಣದಲ್ಲಿ 2,800 ಕೋಟಿ ರೂಪಾಯಿ ವೆಚ್ಚದಲ್ಲಿ ಸೆಮಿಕಂಡಕ್ಟರ್ ಸ್ಥಾವರವನ್ನು ನಿರ್ಮಿಸಲು ಪ್ರಾರಂಭಿಸಿದಾಗ ಪೈ ಅವರು ಅದನ್ನು ಕರ್ನಾಟಕದ ದುಃಖದ ದಿನ ಎಂದು ಕರೆದರು. ಅಲ್ಲದೆ ರಾಜ್ಯದಲ್ಲಿ ಉದ್ಯೋಗಗಳನ್ನು ಹೇಗೆ ಸೃಷ್ಟಿಸುತ್ತಾರೆ ಎಂದು ಸರ್ಕಾರವನ್ನು ಪ್ರಶ್ನಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+