ಬಿಎಸ್‌ವೈ, ತಮ್ಮ ಘನತೆಗೆ ತಕ್ಕಂತೆ ಮಾತಾಡಲಿ: ಎಂ.ಬಿ.ಪಾಟೀಲ್
ಬೆಂಗಳೂರು, ಮಾರ್ಚ್ 22: ತಮ್ಮ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವ ಯಡಿಯೂರಪ್ಪ ಅವರ ವಿರುದ್ಧ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹರಿಹಾಯ್ದರು.
ವಿಧಾನಸೌಧದಲ್ಲಿ ಇಂದು ತುರ್ತು ಸುದ್ದಿಗೋಷ್ಠಿ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದವರು ಆ ಸ್ಥಾನದ ಘನತೆಗೆತಕ್ಕಂತೆ ಅವರು ಮಾತನಾನಡಬೇಕು, ಅವರು ಹೇಳಿದಂತೆ ನಾನು ಯಾವುದೇ ಕಿಕ್ ಬ್ಯಾಕ್ ಪಡೆದಿಲ್ಲ' ಎಂದು ಹೇಳಿದರು.
ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಜೊತೆಗೆ ಉತ್ತಮವಾದ ಸಲಹೆಗಾರನೂ ಅವರ ಜೊತೆಗಿಲ್ಲ ಹಾಗಾಗಿ ಅವರು ಹೀಗೆಲ್ಲಾ ಮನಸ್ಸಿಗೆ ಬಂದಂತೆ ಆರೋಪ ಮಾಡುತ್ತಿದ್ದಾರೆ ಎಂದ ಅವರು, ಯಡಿಯೂರಪ್ಪ ಅವರು ಮಾಡಿರುವ ಆರೋಪಗಳೆಲ್ಲಾ ಸುಳ್ಳು ಎಂದರು.

ಎಂ.ಬಿ.ಪಾಟೀಲ ಅವರನ್ನು ನೇಣಿಗೆ ಏರಿಸಬೇಕು ಎಂದ ಯಡಿಯೂರಪ್ಪ ಅವರ ಮಾತಿಗೆ ಪ್ರತಿಕ್ರಿಯಿಸಿದ ಅವರು 'ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಅವರ ಸಂಸ್ಕೃತಿ ಇದೇ ಎನಿಸುತ್ತದೆ, ಮಾತನಾಡುವ ಮುಂಚೆ ಸ್ವಲ್ಪ ಯೋಚಿಸಿ ಮಾತನಾಡುವುದು ಒಳಿತು' ಎಂದು ಅವರು ಎಚ್ಚರಿಕೆ ನೀಡಿದರು.












Click it and Unblock the Notifications