ಸಚಿವ ರೇವಣ್ಣ ಮೇಲೆ ಸಿಟ್ಟಾದ ಕೃಷ್ಣಬೈರೇಗೌಡ, ಪರಮೇಶ್ವರ್‌ಗೆ ದೂರು

ಬೆಂಗಳೂರು, ಜುಲೈ 16: ಖಾತೆ ಗಡಿ ಮೀರುತ್ತಿರುವ ಲೋಕೋಪಯೋಗಿ ಸಚಿವ ಎಚ್‌ಡಿ.ರೇವಣ್ಣ ಅವರ ಮೇಲೆ ಸಚಿವ ಕೃಷ್ಣಬೈರೇಗೌಡ ಅವರು ಸಿಟ್ಟಾಗಿದ್ದಾರೆ.

ಕೃಷ್ಣಬೈರೇಗೌಡ ಅವರ ಗ್ರಾಮೀಣಾಭಿವೃದ್ಧಿ ಖಾತೆಯಲ್ಲೂ ಮೂಗು ತೂರಿಸಿದ ರೇವಣ್ಣ ಅವರು ನಿರ್ದಿಷ್ಟ ಯೋಜನೆಗೆ ಸಂಬಂಧಿಸಿದ ಖಡತವನ್ನು ಇತ್ಯರ್ಥ ಮಾಡುವಂತೆ ಸಚಿವರಿಗೆ ಸೂಚಿಸಿದ್ದಾರೆ.

ರೇವಣ್ಣ ಅವರ ಸೂಚನೆಯನ್ನು ಸಾರಾಸಗಟು ತಳ್ಳಿ ಹಾಕಿರುವ ಕೃಷ್ಣಬೈರೇಗೌಡ ಅವರು, 'ಹಾಗೆಲ್ಲಾ ಒಮ್ಮೆಲೆ ಫೈಲ್ ಕ್ಲಿಯರ್ ಮಾಡಲಾಗದು, ಅಧಿಕಾರಿಗಳೊಂದಿಗೆ ಚರ್ಚಿಸಿ, ಕ್ಯಾಬಿನೆಟ್‌ನಲ್ಲಿ ಇಟ್ಟು ಆ ನಂತರ ಕ್ಲಿಯರ್ ಮಾಡುವುದಾಗಿ' ಹೇಳಿದ್ದಾರೆ.

Minister Krishna byre gowda angry on HD Revanna

ಲೋಕೋಪಯೋಗಿ ಸಚಿವರು ತಮ್ಮ ಖಾತೆ ಹೊರತಾಗಿ ಬೇರೆ ಖಾತೆಗಳಲ್ಲೂ ಮೂಗು ತೂರಿಸುತ್ತಿರುವುದು ಕೆಲವು ಸಚಿವರ ಅಸಮಾಧಾನಕ್ಕೆ ಕಾರಣವಾಗಿದೆ.

ಮೊದಲಿಗೆ ಜಲಸಂಪನ್ಮೂಲ ಇಲಾಖೆ ಆ ನಂತರ ನಗರಾಭಿವೃದ್ಧಿ ಇಲಾಖೆಯಲ್ಲಿಯೂ ಮೂಗು ತೂರಿಸಿದ್ದರು ಈಗ ಗ್ರಾಮೀಣಾಭಿವೃದ್ಧಿ ಇಲಾಖೆಯ ಮೇಲೂ ಕಣ್ಣು ಹಾಕಿದ್ದಾರೆ.

ರೇವಣ್ಣ ಅವರ ಈ ವರ್ತನೆಯಿಂದ ಸಿಟ್ಟಾಗಿರುವ ಸಚಿವ ಕೃಷ್ಣಬೈರೇಗೌಡ ಅವರು, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+