ಸ್ಥಳೀಯ ಚುನಾವಣೆ: ಸಮ್ಮಿಶ್ರ ಸರ್ಕಾರದ ಜಯ ಎಂದ ಸಚಿವ ಕಾಶೆಂಪೂರ್
Recommended Video

ಬೆಂಗಳೂರು, ಸೆಪ್ಟೆಂಬರ್ 3: ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತಎಣಿಕೆ ಮುಕ್ತಾಯಗೊಂಡಿದೆ. ರಾಜ್ಯದ ಜನತೆಗೆ ಸಮ್ಮಿಶ್ರ ಸರ್ಕಾರ ತೃಪ್ತಿ ತಂದಿದೆ ಎಂದು ಸಚಿವ ಬಂಡೆಪ್ಪ ಕಾಶೆಂಪೂರ್ ತಿಳಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಅನೇಕಕಡೆಗಳಲ್ಲಿ ಜಯಭೇರಿ ಬಾರಿಸಿದೆ. ನಮ್ಮದು ಸುಭದ್ರ ಸರ್ಕಾರ ಎಂದು ಮತ್ತೊಮ್ಮೆ ಸಾಬೀತಾಗಿದೆ. ಸ್ಥಳೀಯ ಚುನಾವಣಾ ಫಲಿತಾಂಶದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಋಣಭಾರ ಕಾಯ್ದೆ ವಿಚಾರ ಪ್ರಸ್ತಾಪಿಸಿದ ಅವರು ಇಲ್ಲಿಯವರೆಗೆ ಯಾವ ಸರ್ಕಾರ ಮಾಡದ ಕೆಲಸವನ್ನು ನಮ್ಮ ಸರ್ಕಾರ ಮಾಡಲು ಹೊರಟಿದೆ. ರಾಷ್ಟ್ರಪತಿ ಅಂಕಿತವಾಗಿ ಬರುವ ವರೆಗೆ ಖಾಸಗಿ ಲೇವಾದೇವಿ ವ್ಯಾಪಾರಿಗಳಿಗೆ ಕಡಿವಾಣ ಹಾಕಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ.

ಆದರೆ ಕಾಯ್ದೆ ಬರಬೇಕಾದರೆ ಎಲ್ಲಾ ಹಂತಗಳನ್ನು ದಾಟಬೇಕು, ಆದರೂ ಕೂಡ ಒಂದೆರೆಡು ಕಡೆ ಅನನುಕೂಲವಾಗಿದೆ, ರಾಷ್ಟ್ರಪತಿಗಳ ಅಂಕಿತವಾದ ತಕ್ಷಣವೇ ಕಾಯ್ದೆಗೆ ಅಧಿಕೃತವಾಗಿ ಘೋಷಣೆ ಮಾಡುತ್ತೇವೆ ಎಂದು ಹೇಳಿದರು. ಆಗಸ್ಟ್ 31ರಂದು 105 ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣೆ ನಡೆದಿತ್ತು.












Click it and Unblock the Notifications